ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲೆ ಏರಿಕೆ; ಕಾಂಗ್ರೆಸ್‌ ಕಡೆ ಕೈ ತೋರಿಸಿದ ಸಂಗಣ್ಣ ಕರಡಿ!

|
Google Oneindia Kannada News

ಕೊಪ್ಪಳ, ಸೆಪ್ಟೆಂಬರ್ 01; ತೈಲ ಉತ್ಪನ್ನಗಳ ಬೆಲೆ ಏರಿಕೆ, ಸಿಲಿಂಡರ್‌ಗಳ ಬೆಲೆ ಏರಿಕೆಯಾಗಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸಂಸದರೊಬ್ಬರು ಉಡಾಫೆ ಉತ್ತರ ನೀಡಿದ್ದಾರೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಏರಿಕೆಯಾಗಿದೆ.

ಕೊಪ್ಪಳದಲ್ಲಿ ಬುಧವಾರ ಮಾತನಾಡಿದ ಸಂಸದ ಸಂಗಣ್ಣ ಕರಡಿ, "ನಿಮ್ಮಪ್ಪ ಸಾಲ ಮಾಡಿದರೆ ಮಗನಾಗಿ ನೀನು ಸಾಲ ತೀರಿಸ್ತಿಯಾ, ಇಲ್ಲವಾ?. ನಾವು ಕೂಡಾ ಹಂಗೆ ಸಾಲ ತೀರಿಸುತ್ತಿದ್ದೇವೆ" ಎಂದು ಹೇಳಿದರು.

ಸೆ.1: ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ ಸೆ.1: ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ

ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಸಂಸದರು ಉಡಾಫೆಯಾಗಿ ಉತ್ತರ ಕೊಟ್ಟರು. "ಸಾಲ ಮಾಡಿಯಾಗಿದೆ, ಈಗ ಸಾಲ ಹರಿಬೇಕಲ್ಲ" ಎಂದರು.

ಏಳು ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಏಳು ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

BJP MP Sanganna Karadi Comment On Price Hike Issue

"ಯುಪಿಎ ಸರ್ಕಾರ ಇದ್ದಾಗ ತೈಲ ಕಂಪನಿಗಳಿಗೆ ಬಾಂಡ್ ಕೊಟ್ಟಿದ್ದರು. ನಮ್ಮ ಸರ್ಕಾರ 59 ಸಾವಿರ ಕೋಟಿ ರೂಪಾಯಿ ಹಾಗೂ 35 ಸಾವಿರ ಕೋಟಿ ರೂಪಾಯಿ ಸಾಲ ತುಂಬಿದೆ. ಇನ್ನೂ ಒಂದು ಲಕ್ಷ ಕೋಟಿ ಬಾಕಿ ಇದೆ" ಎಂದು ಸಂಸದರು ವಿವರಿಸಿದರು.

ಒಂದೇ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 165 ರೂ. ಏರಿಕೆಒಂದೇ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 165 ರೂ. ಏರಿಕೆ

"ಬಡವರಿಗೆ ಏನು ಸಹಾಯ ಮಾಡಬೇಕೋ ಮಾಡಿದ್ದೇವೆ. ಜನರು ಸಾಲ ಮಾಡಬೇಕಾ ಕೇಳಿದರೆ ಏನು ಹೇಳೋದು. ನಾವು ದೇಶ ಒತ್ತೆ ಇಡಬೇಕಾ?, ಬಡವರ ಬಗ್ಗೆ ಮಾಧ್ಯಮದವರು ಕೇಳುವುದನ್ನು ಒಪ್ಪುತ್ತೇವೆ. ಆದರೆ ಸರ್ಕಾರ ನಡೆಸಬೇಕಲ್ಲ. ಕೋವಿಡ್‌ನಿಂದ ಸರ್ಕಾರಕ್ಕೆ ಏನೂ ಆದಾಯವಿಲ್ಲವಾಗಿದೆ" ಎಂದು ಸಂಸದರು ಹೇಳಿದರು.

ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿವೆ. ಈಗ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸಹ ಹೆಚ್ಚಾಗಿದ್ದು, ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ. ಜನರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿಲಿಂಡರ್ ಬೆಲೆ ಏರಿಕೆ; ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆ ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬರುವಂತೆ 25 ರೂ. ಜಾಸ್ತಿಯಾಗಿದೆ. 15 ದಿನಗಳ ಹಿಂದೆ 25 ರೂ. ಏರಿಕೆಯಾಗಿತ್ತು. ಇದರಿಂದಾಗಿ ಜನರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Recommended Video

ಅಫ್ಘಾನ್ ಕ್ರಿಕೆಟ್ ಟೀಮ್ ಗೆ ಸಿಹಿ ಸುದ್ದಿ ಕೊಟ್ಟ ತಾಲಿಬಾನಿಗಳು!! | Oneindia Kannada

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಜನವರಿ 1ರಿಂದ ಸೆಪ್ಟೆಂಬರ್ 1ರ ತನಕ 190 ರೂ. ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ ಸಿಲಿಂಡರ್ ಬೆಲೆ 887ಕ್ಕೆ ಏರಿಕೆಯಾಗಿದೆ.

English summary
Koppla BJP MP Sanganna Karadi comment on price hike issue. MP blamed Congress rule in the nation for the price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X