ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಂಸದರ ಪುತ್ರ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

Recommended Video

ಕೊಪ್ಪಳದ ಬಿಜೆಪಿ ಸಂಸದನಿಂದ ಕೊಪ್ಪಳ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ | Oneindia kannada

ಬೆಳಗಾವಿ, ಮೇ 28 : ಅನುಮತಿ ಇಲ್ಲದೆ ಆಟೋ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಕೊಪ್ಪಳ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಡಿ.ವೈ.ಎಸ್.ಪಿ. ಅವರನ್ನು ಎಳೆದಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಸಂಗಣ್ಣ ಕರಡಿ ಹಾಗೂ ಅವರ ಪುತ್ರ ಅಮರೇಶ್ ಕರಡಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು ಡಿ.ವೈ.ಎಸ್.ಪಿ. ಎಸ್ ಎಮ್ ಸಂದಿಗವಾಡ್ ಅವರನ್ನು ಎಳೆದಾಡಿದ್ದಾರೆ.

ಕರ್ನಾಟಕ ಬಂದ್: ಸಿಎಂ ಸ್ವಕ್ಷೇತ್ರದಲ್ಲೇ ಪ್ರತಿಭಟನೆ ಜೋರು ಕರ್ನಾಟಕ ಬಂದ್: ಸಿಎಂ ಸ್ವಕ್ಷೇತ್ರದಲ್ಲೇ ಪ್ರತಿಭಟನೆ ಜೋರು

ತಂದೆ ಜೊತೆಯಲ್ಲಿದ್ದ ಪುತ್ರ ಅಮರೇಶ್ ಕರಡಿ ಸಹ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಪರಸ್ಪರ ತಳ್ಳಾಡಿಕೊಂಡಿದ್ದಾರೆ.

BJP MP Sanganna Karadi besieged Koppal city police station

ಬೆಳಗ್ಗೆ ಒತ್ತಾಯಪೂರ್ವಕವಾಗಿ ಬಿಜೆಪಿಯವರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು. ಈ ವೇಳೆಯಲ್ಲಿ ಪರವಾನಿಗೆ ಇಲ್ಲದ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು ನಗರ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.

ಇನ್ಸ್ ಪೆಕ್ಟರ್ ರವಿ ಉಕ್ಕುಂದ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೇ ನಗರ ಠಾಣೆಯ ಬಾಗಿಲು ಮುಂದೆ ಕುಳಿತು ಸಂಸದ ಸಂಗಣ್ಣ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

English summary
BJP MP Sanganna Karadi besieged Koppal city police station and pulled dysp. His son, Amaresh karadi, has also been blaming authorities. Incident took place at the bjp bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X