India
  • search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೊಟ್ಟಿ, ಬೊಂಡಕ್ಕೆ ದರ ನಿಗದಿಯಂತೆ ಸರ್ಕಾರಿ ಹುದ್ದೆ ಬಿಕರಿ; ಡಿಕೆಶಿ

|
Google Oneindia Kannada News

ಕೊಪ್ಪಳ, ಜೂನ್ 27: 'ಬಿಜೆಪಿ ಪಕ್ಷ ಹಾಗೂ ಸರ್ಕಾರಕ್ಕೆ ಸವಾಲೆಸೆಯುವ ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಡಿ., ಸಿಬಿಐ ಮತ್ತಿತರ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡು ದಿನನಿತ್ಯ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

ಕೊಪ್ಪಳ ಜಿಲ್ಲೆಯ ಗಿಣಗೇರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ನೇಮಕಾತಿಗಳಿಗೆ ಖಾನಾವಳಿಗಳಲ್ಲಿ ರೊಟ್ಟಿ, ಊಟ, ಬೊಂಡಕ್ಕೆ ದರದಂತೆ ದರ ನಿಗದಿ ಮಾಡಿದ್ದಾರೆ" ಎಂದು ಆರೋಪಿಸಿದರು.

ರಮೇಶ್ ಜಾರಕಿಹೊಳಿಯಿಂದ ಬ್ಯಾಂಕ್‌ಗಳಿಗೆ 819 ಕೋಟಿ ವಂಚನೆ: ಕೆಪಿಸಿಸಿ ವಕ್ತಾರ ಆರೋಪರಮೇಶ್ ಜಾರಕಿಹೊಳಿಯಿಂದ ಬ್ಯಾಂಕ್‌ಗಳಿಗೆ 819 ಕೋಟಿ ವಂಚನೆ: ಕೆಪಿಸಿಸಿ ವಕ್ತಾರ ಆರೋಪ

'ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ. ಚಿದಂಬರಂ ಸೇರಿದಂತೆ ದೇಶದಾದ್ಯಂತ ವಿರೋಧ ಪಕ್ಷಗಳ ಪ್ರಬಲ ನಾಯಕರ ಮೇಲೆ ಈ ದಾಳಿ ನಡೆಯುತ್ತಿದೆ. ಸಾಮಾನ್ಯವಾಗಿ ಬಂಧನವಾದ 60 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು. ನನಗೆ 60 ದಿನಗಳ ಮುಂಚಿತವಾಗಿ ಜಾಮೀನು ಸಿಕ್ಕಿತು. 6 ತಿಂಗಳಲ್ಲಿ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಬಹುದಾಗಿತ್ತು. ಆದರೆ ಈಗ ಆರೋಪಪಟ್ಟಿ ಸಲ್ಲಿಸಿ ಜುಲೈ 1ರಂದು ನನ್ನನ್ನು ಕರೆದಿದ್ದಾರೆ. ಹೈಕೋರ್ಟ್ ನಲ್ಲಿ ಜಾಮೀನು ಪಡೆದಿದ್ದೇನೆ. ಇಡಿ ಸಮನ್ಸ್‌ಗೆ ಗೌರವ ಕೊಟ್ಟು ಹೋಗುತ್ತೇನೆ. ರಾಜಕೀಯ ದುರುದ್ದೇಶದಿಂದ ದಾಖಲಿಸಿರುವ ಪ್ರಕರಣಗಳನ್ನು ಎದುರಿಸಬೇಕು, ಎದುರಿಸೋಣ' ಎಂದರು.

'3 ವರ್ಷದ ಹಿಂದೆ ಸಲ್ಲಿಸಬಹುದಾಗಿದ್ದ ಆರೋಪಪಟ್ಟಿಯನ್ನು ಈಗ ದಾಖಲಿಸಿರುವುದೇಕೆ?. ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಳ್ಳಲು ಸಮಯ ನೀಡಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ನನ್ನ ಕುಟುಂಬದ ಸದಸ್ಯರು, ಸ್ನೇಹಿತರಿಗೆ ದಿನನಿತ್ಯ ಇಡಿ, ಸಿಬಿಐ ನೊಟೀಸ್ ಬರುತ್ತಿದೆ. ದೇಶದಲ್ಲಿ ಯಾರ ಮೇಲೂ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಇಲ್ಲ ಎಂದು ಈ ಸರ್ಕಾರ ಈ ವಿಚಾರಣೆಯನ್ನು ಸಿಬಿಐಗೆ ವಹಿಸಿದೆ. ಬಿಜೆಪಿ ನಾಯಕರ ವಿಚಾರ ನನಗೆ ಗೊತ್ತಿದೆ. ಆ ಬಗ್ಗೆ ನಾನು ನಂತರ ಮಾತನಾಡುತ್ತೇನೆ. ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ' ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕಾಲ ಬಂದಾಗ ಜನ ತೀರ್ಮಾನ

ಕಾಲ ಬಂದಾಗ ಜನ ತೀರ್ಮಾನ

ಮಹಾರಾಷ್ಟ್ರದ ರಾಜಕೀಯ ವಿದ್ಯಮಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಇದೆಲ್ಲವೂ ಬಿಜೆಪಿಯವರ ನಾಟಕ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಸಚಿವ ನಿರಾಣಿ ಅವರು ಹೇಳಲಿಲ್ಲವೇ?. ಯಾವ ಸೈದ್ಧಾಂತಿಕ ಗೊಂದಲ?. ಇಷ್ಟು ದಿನ ಜತೆಯಾಗಿ ಅಧಿಕಾರ ಮಾಡಿದ್ದೇಕೆ?. ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ಸರ್ಕಾರ ಮಾಡುತ್ತೇವೆ ಎಂದು ಹೇಳಿದ್ದವರು ಇದೇ ಬಂಡಾಯ ಶಾಸಕರು. ನಮ್ಮ ರಾಜ್ಯದಲ್ಲಿ ಮಾಡಿದ ರೀತಿಯಲ್ಲೇ ಅಲ್ಲಿಯೂ ಆಪರೇಷನ್ ಕಮಲ ಮಾಡಿದ್ದಾರೆ. ಕಾಲ ಬಂದಾಗ ಜನ ಎಲ್ಲವನ್ನು ತೀರ್ಮಾನ ಮಾಡುತ್ತಾರೆ' ಎಂದು ಡಿ. ಕೆ. ಶಿವಕುಮಾರ್ ಉತ್ತರಿಸಿದರು.

ಯುವಕರ ಸ್ಥಿತಿ ನೋಡಿ ಹೊಟ್ಟೆ ಉರಿಯುತ್ತಿದೆ

ಯುವಕರ ಸ್ಥಿತಿ ನೋಡಿ ಹೊಟ್ಟೆ ಉರಿಯುತ್ತಿದೆ

ಆರ್‌ಎಸ್ಎಸ್ ನಾಯಕರಿಗೆ ಬಿಜೆಪಿ ಶಾಸಕರು ಹಾಗೂ ಸಚಿವರಿಂದ ಹಣ ರವಾನೆಯಾಗುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಯಾರಿಂದ ಯಾರಿಗೆ ಕಮಿಷನ್ ಹೋಗುತ್ತಿದೆಯೋ ಗೊತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಈ ಸರ್ಕಾರ ಶೇ 40 ಕಮಿಷನ್ ಪಡೆಯುತ್ತಿದೆ ಎಂದು ಪತ್ರ ಬರೆದಿದ್ದಾರೆ. ಪಿಎಸ್ಐ ನೇಮಕ ಅಕ್ರಮದಿಂದ ಹಿಡಿದು ಎಲ್ಲ ಇಲಾಖೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಇದರಲ್ಲಿ ಸಚಿವರುಗಳಿಗೆ ಹಾಗೂ ಸಚಿವರುಗಳ ಕಚೇರಿಗೆ ಹಣ ನೀಡಿರುವುದಾಗಿ ಅಭ್ಯರ್ಥಿಗಳೇ ತಿಳಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸಣ್ಣಪುಟ್ಟ ಅಧಿಕಾರಿಗಳನ್ನು ಹಿಡಿದಿದ್ದಾರೆಯೇ ಹೊರತು, ಇದರಲ್ಲಿ ಭಾಗಿಯಾಗಿರುವ ದೊಡ್ಡ ಮಂತ್ರಿಗಳು, ಅಧಿಕಾರಿಗಳನ್ನು ಹಿಡಿದಿಲ್ಲ. ಖಾನಾವಳಿಗಳಲ್ಲಿ ರೊಟ್ಟಿ, ಊಟ, ಬೊಂಡಕ್ಕೆ ದರ ನಿಗದಿ ಮಾಡಿರುವಂತೆ ಈ ಸರ್ಕಾರ ಒಂದೊಂದು ಹುದ್ದೆಗೆ ಒಂದೊಂದು ದರ ನಿಗದಿ ಮಾಡಿದೆ. ವರ್ಗಾವಣೆ, ನೇಮಕಾತಿ, ವಿವಿಧ ಹುದ್ದೆಗೆ ಒಂದೊಂದು ದರ ನಿಗದಿಯಾಗಿದೆ. ಯುವಕರ ಪರಿಸ್ಥಿತಿ ನೋಡಿದರೆ ಹೊಟ್ಟೆ ಉರಿಯುತ್ತಿದೆ' ಎಂದು ತಿಳಿಸಿದರು.

ಮುಂಚಿತವಾಗಿ ನಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುತ್ತೇೆವೆ

ಮುಂಚಿತವಾಗಿ ನಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುತ್ತೇೆವೆ

2023ರ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ, 'ಚುನಾವಣೆಗೆ ನಾವು ಈಗಾಗಲೇ ತಯಾರಿ ನಡೆಸುತ್ತಿದ್ದೇವೆ. ನಮ್ಮ ಜಿಲ್ಲಾ ನಾಯಕರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದು, ಸಮೀಕ್ಷೆಗಳನ್ನು ನಡೆಸಿದ್ದು, ನಮಗೆ ಉತ್ತಮ ವರದಿ ಸಿಗುತ್ತಿದೆ. ಜನ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜನರೇ ತೀರ್ಮಾನಿಸಿದ್ದಾರೆ. ನಾವು ಚುನಾವಣೆಯಲ್ಲಿ ಮುಂಚಿತವಾಗಿ ನಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುತ್ತೇವೆ' ಎಂದು ಉತ್ತರಿಸಿದರು.


"ಪಕ್ಷದಲ್ಲಿ ಎಲ್ಲಿಯೂ ಗೊಂದಲವಿಲ್ಲ. ಅದನ್ನು ಮಾಧ್ಯಮಗಳು ಸೃಷ್ಟಿ ಮಾಡುತ್ತಿವೆ. ಬೇಷರತ್ತಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಬಂದು ಸೇರಬಹುದು. ಯಾರಿಗೂ ಟಿಕೆಟ್ ನೀಡುವ ಬಗ್ಗೆ ಮಾತು ಕೊಟ್ಟಿಲ್ಲ. ನಾವು ಸಮೀಕ್ಷೆ ನಡೆಸಿ ಟಿಕೆಟ್ ನೀಡುತ್ತೇವೆ' ಎಂದರು.

ಕುಮಾರ ಸ್ವಾಮಿಯವರಿಗೆೆ ಒಳ್ಳೆಯದಾಗಲಿ

ಕುಮಾರ ಸ್ವಾಮಿಯವರಿಗೆೆ ಒಳ್ಳೆಯದಾಗಲಿ

ಅಗ್ನಿಪಥ್ ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ದೇಶದಾದ್ಯಂತ ಯುವಕರು ಈ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಯುವಕರನ್ನು ಬಿಜೆಪಿ ಕಚೇರಿ ಸೆಕ್ಯುರಿಟಿ ಗಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಬೇಕಾದರೆ ತಮ್ಮ ಸಚಿವರ ಮಕ್ಕಳನ್ನು ಸೇರಿಸಲಿ, ನಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಲು ಬಿಡಿ. ಇದುವರೆಗೂ ಇದ್ದ ಮಾದರಿಯಲ್ಲೇ ಸೇನೆ ನೇಮಕಾತಿ ಮಾಡಲಿ' ಎಂದರು.

ಕುಮಾರಸ್ವಾಮಿ ಅವರು ತಾವು 2023ರಲ್ಲಿ ಮತ್ತೆ ಸಿಎಂ ಆಗುವುದಾಗಿ ತಿಳಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, 'ಅವರಿಗೆ ಒಳ್ಳೆಯದಾಗಲಿ' ಎಂದರು.

ಇನ್ನು ಕೊಪ್ಪಳ ಪ್ರವಾಸದ ವಿಚಾರವಾಗಿ, 'ನಮ್ಮ ನೂತನ ಶಾಸಕರ ಕುಟುಂಬದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಈ ಮಧ್ಯೆ ನಮ್ಮ ಹಲವು ನಾಯಕರ ಜತೆ ಪ್ರಮುಖ ವಿಚಾರಗಳ ಚರ್ಚೆ ಮಾಡುತ್ತೇನೆ' ಎಂದು ಡಿಕೆಶಿ ಉತ್ತರಿಸಿದ್ದಾರೆ.

ಡಿ.ಕೆ. ಶಿವಕುಮಾರ
Know all about
ಡಿ.ಕೆ. ಶಿವಕುಮಾರ
English summary
BJP govt targeting only Opposition party leaders by misusing Income tax department, ED, CBI alleged KPCC president D. K. Shivakumar. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X