ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿರ ಸಲ ಹೇಳುತ್ತೇನೆ, ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಿಯೇ: ಸಿಎಂ ಬೊಮ್ಮಾಯಿ ಘೋಷಣೆ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಆಗಸ್ಟ್‌ 1: ಆಂಜನೇಯ ಹುಟ್ಟಿದ್ದು ಅಂಜನಾದ್ರಿಯಲ್ಲಿ ಎಂಬುದಕ್ಕೆ ಬೇರೆ ದಾಖಲೆ ಬೇಕಿಲ್ಲ, ನಮ್ಮ ನಂಬಿಕೆಯೇ ನಮ್ಮ ಘೋಷಣೆ. ನಾವು ಮತ್ತೆ ಮತ್ತೆ ಘೋಷಣೆ ಮಾಡಿ, ವಿವಾದ ಮಾಡುವ ಅಗತ್ಯ ಇಲ್ಲ. ಸಾವಿರ ಬಾರಿ ಹೇಳುತ್ತೇನೆ ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದಾವಣಗೆರೆಯಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸಿಎಂ ಬೊಮ್ಮಾಯಿ ರಸ್ತೆ ಮಾರ್ಗದ ಮೂಲಕ ಅಂಜನಾದ್ರಿಗೆ ಆಗಮಿಸಿದರು. ಸುಮಾರು 575 ಮೆಟ್ಟಿಲುಗಳುಳ್ಳ ಅಂಜನಾದ್ರಿ ಪರ್ವತವನ್ನು ಏರದೆ ಬೆಟ್ಟದ ಕೆಳಗೆಯೇ ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟದ ಕೆಳಗೆ ವಿಶೇಷ ಪೂಜೆ ಸಲ್ಲಿಕೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.‌ ವೈದಿಕರು ಸಂಕಲ್ಪದೊಂದಿಗೆ ಪೂಜಾ ಕೈಂಕರ್ಯ‌ ನಡೆಸಿದರು ಅಲ್ಲದೆ ಹನುಮಾನ್ ಚಾಲೀಸ ಪಠಣ ಮಾಡಿದರು.

ಅಂಜನಾದ್ರಿಗೆ ಭೇಟಿಗೂ ಮುನ್ನ ಆನೆಗುಂದಿ ಬಳಿಯ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಘೋಷಣೆ‌ ಮಾಡಿದರು. ಕಿಷ್ಕಿಂಧಾ ಪ್ರದೇಶವಾಗಿರುವ ಈ ಸ್ಥಳವೇ ಹನುಮ ಜನ್ಮಸ್ಥಳ ಎಂದು ಸಾವಿರ ಬಾರಿ ಹೇಳುತ್ತೇನೆ ಎಂದರು.

"ಆಂಜನೇಯ ಸ್ವಾಮಿ ಜನ್ಮಸ್ಥಳದ ಸಮಗ್ರ ಅಭಿವೃದ್ದಿಗಾಗಿ ಬಜೆಟ್‌ನಲ್ಲಿ ಹಣ ಘೋಷಣೆ ಮಾಡಿದ್ದೇನೆ. ಪ್ರತೀವರ್ಷ ಬಹಳಷ್ಟು ಜನ ಯಾತ್ರಿಕರು ಬರುತ್ತಾರೆ. ಆದರೆ, ಅವರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಹಾಗಾಗಿ 100 ಕೋಟಿ ರೂ ಕೊಟ್ಟಿದ್ದೇವೆ," ಎಂದು ಹೇಳಿದರು.

ಅಂಜನಾದ್ರಿಗೆ ಸಿಎಂ: ಬಿಜೆಪಿ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದಅಂಜನಾದ್ರಿಗೆ ಸಿಎಂ: ಬಿಜೆಪಿ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ

"ಬೆಟ್ಟದ ಕೆಳಗಡೆ ಯಾತ್ರಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುವ ಯೋಜನೆಯಿದೆ. ಮಾರುಕಟ್ಟೆ, ವಸತಿ, ಆಸ್ಪತ್ರೆ ಎಲ್ಲಾ ಸೌಲಭ್ಯ ಸಿಗಬೇಕು, ವಯಸ್ಸಾದವರಿಗೆ ನೆರವಾಗಲು ರೋಪ್‌ ವೇ ನಿರ್ಮಾಣ ಮಾಡುವ ಯೋಜನೆಯಿದೆ. ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕೆಂಬ ಪರಿಕಲ್ಪನೆಯಿಂದ ಅಭಿವೃದ್ದಿ ಕಾರ್ಯಕ್ಕೆ ಚಾಲನೆ ನೀಡಲು ಮಾತನಾಡಿಕೊಂಡಿದ್ದೆವು, ಅದಕ್ಕಾಗಿ ಸಮೀಕ್ಷೆಗಾಗಿ ಬಂದಿದ್ದೇನೆ," ಎಂದು ಬೊಮ್ಮಾಯಿ ಹೇಳಿದರು.

Anjanadri is the birthplace of Lord Hanuman says CM Basavaraj Bommai

ಶೀಘ್ರದಲ್ಲೇ ರೋಪ್‌ ವೇಗೆ ಟೆಂಡರ್‌ ಕರೆಯಲಿದ್ದೇವೆ. ಕೇವಲ ಅಂಜನಾದ್ರಿ ಮಾತ್ರವಲ್ಲಿ ಸುತ್ತಮುತ್ತಲ ಸ್ಥಳವನ್ನು ಅಭಿವೃದ್ಧಿ ಮಾಡಲಿದ್ದೇವೆ. ಅದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿ ಸಮಗ್ರ ಅಭಿವೃದ್ದಿ ಮಾಡುವಂತಹ ಯೋಜನೆ ನಮ್ಮ ಮುಂದಿದೆ. ಕರ್ನಾಟದಲ್ಲಿ ಮೈಸೂರು ಮತ್ತು ಹಂಪಿಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದೇವೆ. ಅದರ ಪ್ರಕಾರ ಅಕ್ಕಪಕ್ಕದ ಸ್ಥಳಗಳನ್ನು ಅಭಿವೃದ್ಧಿ ಮಾಡಲಿದ್ದೇವೆ ಎಂದು ಸಿಎಂ ತಿಳಿಸಿದರು.

ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ

ಅಂಜನಾದ್ರಿ ಸುತ್ತಮುತ್ತ ಅಭಿವೃದ್ಧಿ ಕಾರ್ಯಕ್ಕಾಗಿ ಕೆಲವು ಜಮೀನುಗಳನ್ನು ವಶಪಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ 24 ಕೋಟಿ ರೂ. ಮೀಸಲಿಟ್ಟಿದ್ದೇವೆ. ಶೀಘ್ರದಲ್ಲೇ ಆ ಕಾರ್ಯ ನಡೆಯಲಿದೆ, ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ ಎಂದರು.

Anjanadri is the birthplace of Lord Hanuman says CM Basavaraj Bommai

ಚಕ್ರವರ್ತಿ ಸೂಲಿಬೆಲೆ ಸರಕಾರದ ವಿರುದ್ಧ ಮಾಡಿರುವ ಟ್ವೀಟ್‌ ವಿಚಾರವಾಗಿ ಪ್ರತಿಕ್ರಿಯಿಸಿ" ಚಕ್ರವರ್ತಿ ಸೂಲಿಬೆಲಿ ನಮ್ಮವರು,ಆತ್ಮೀಯರು, ಯಾವಾಗಲೂ ಹಿಂದುತ್ವದ ವಿಚಾರವಾಗಿ ಧ್ವನಿ ಎತ್ತುವವರು. ಹಿಂದುತ್ವದ ಕಾರ್ಯಕರ್ತರು ಕೊಲೆಯಾದಾಗ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅವರ ಜೊತೆಗೆ ಮಾತನಾಡುತ್ತೇವೆ ಮತ್ತು ಎಲ್ಲರೂ ಒಟ್ಟಾಗಿ ಮತ್ತೆ ಮುಂದುವರಿದುಕೊಂಡು ಹೋಗಲಿದ್ದೇವೆ" ಎಂದು ತಿಳಿಸಿದರು.

ಆಂಜನೇಯನಿಗೆ ಪೂಜೆ
ಅಂಜನಾದ್ರಿಗೆ ಕಾರಿನಲ್ಲಿ ಆಗಮಿಸಿದ ಬೊಮ್ಮಾಯಿ ಬೆಟ್ಟದ ಕೆಳಗಿರುವ ಹನುಮ ಮೂರ್ತಿಗೆ ಪೂಜೆ ಸಲ್ಲಿಸಿದರು. ಕಾಲು ನೋವಿನ ಹಿನ್ನಲೆ ಬೆಟ್ಟ ಏರಲಾಗದೆ ತಳಬೆಟ್ಟದಲ್ಲೇ ಪೂಜೆ ಸಲ್ಲಿಸಿದರು. ಸಚಿವರಾದ ಡಿ.ಸುಧಾಕರ,‌ ಬೈರತಿ ಬಸವರಾಜ, ಹಾಲಪ್ಪ ಆಚಾರ್, ಶಶಿಕಲಾ ಜೊಲ್ಲೆ ಸಾಥ್‌ ನೀಡಿದರು.

English summary
Anjanadri is the birthplace of Lord Hanuman,I will say a thousand times, there is no doubt about it, CM Basavaraj Bommai said in Anjanadri, gangavathi Taluk, Koppal district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X