ಅಂಜನಾದ್ರಿ ಹುಂಡಿಯಲ್ಲಿ ಒಂದೂವರೆ ತಿಂಗಳಿಗೆ 2,27,508 ಲಕ್ಷ ರೂಪಾಯಿ ಸಂಗ್ರಹ
ಕೊಪ್ಪಳ, ನವೆಂಬರ್, 29: ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಹುನುಮನ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಕೇವಲ ಒಂದೂವರೆ ತಿಂಗಳಲ್ಲಿ 2,27,508 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಕನಕ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಕೊಡುತ್ತೇನೆ-ಎಂಟಿಬಿ ನಾಗರಾಜ್
ಇತಿಹಾಸ ಪ್ರಸಿದ್ಧ ಅಂಜನಾದ್ರಿಗೆ ಭಕ್ತರ ದಂಡು ಹರಿದುಬರುತ್ತಲೇ ಇದೆ. ಅಲ್ಲದೇ ವಿದೇಶಿ ಪ್ರಜೆಗಳೂ ಸಹ ಹನುಮನ ಹುಂಡಿಗೆ ದೇಣಿಗೆ ನೀಡುತ್ತಿದ್ದಾರೆ. ವಿದೇಶೀ ಪ್ರಜೆಗಳು ಡಾಲರ್ಸ್ ರೂಪದಲ್ಲಿ ಕಾಣಿಕೆ ಹಾಕಿದ್ದು, ಹುಂಡಿ ಎಣಿಕೆ ಸಮಯದಲ್ಲಿ ಡಾಲರ್ಸ್ಗಳು ಪತ್ತೆ ಆಗಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ, ನೋಟುಗಳು ಕಂಡುಬಂದಿದ್ದು ಗಮನಾರ್ಹವಾಗಿದೆ. ಗಂಗಾವತಿ ಗ್ರೇಡ್ 2 ತಹಶೀಲ್ದಾರ್ ವಿ.ಹೆಚ್ ಹೊರಪೇಟೆ ನೈತೃತ್ವದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ ಒಟ್ಟು 2,27,508 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೋಟಿ ಲೆಕ್ಕದಲ್ಲಿ ಹಣ ಸಂಗ್ರಹ
ಅಕ್ಟೋಬರ್ ತಿಂಗಳಿನಲ್ಲಿ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಹಾಸನಾಂಬೆಗೆ ಈ ವರ್ಷವೂ ಕೋಟಿ ಲೆಕ್ಕದಲ್ಲಿ ಆದಾಯ ಹರಿದು ಬಂದಿತ್ತು. ಈ ವರ್ಷದಲ್ಲಿ ಒಟ್ಟು ಹಾಸನಾಂಬೆ ಉತ್ಸವದಿಂದ 3,69,51,251 ರೂಪಾಯಿ ಆದಾಯ ಬಂದಿತ್ತು. ಈ ಪೈಕಿ ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂಪಾಯಿ ಸಂಗ್ರಹವಾಗಿದೆ. ವಿಶೇಷ ದರ್ಶನದ ಪಾಸ್ ಮಾರಾಟದಿಂದಲೂ 1,48,27,600 ರೂಪಾಯಿ ಸಂಗ್ರಹವಾಗಿತ್ತು. ಲಡ್ಡು ಪ್ರಸಾದ ಮಾರಾಟದಿಂದ 32,82,716 ರೂಪಾಯಿ ಆದಾಯ ಬಂದಿದ್ದು, ಎಲ್ಲಾ ಮೂಲಗಳಿಂದ ಸೇರಿ ಒಟ್ಟು 3,69,51,251 ರೂಪಾಯಿ ಸಂಗ್ರಹವಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿತ್ತು.

ಹಾಸನಾಂಬೆ ದರ್ಶನದ ವೇಳೆ ಕಾಣಿಕೆ ಸಂಗ್ರಹದಲ್ಲಿ ಎರಡನೇ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದೆ ಆದಾಯ ಕುಸಿದಿತ್ತು. ಈ ಬಾರಿ ಮತ್ತೆ ಕೋಟಿ ಲೆಕ್ಕದಲ್ಲಿ ಆದಾಯ ಸಂಗ್ರ ಆಗಿದೆ. 2017ರಲ್ಲಿ ಅತಿ ಹೆಚ್ಚು 4.14 ಕೋಟಿ ಹಣ ಸಂಗ್ರಹವಾಗಿತ್ತು. 2017ರ ಹೊರತುಪಡಿಸಿ ಈ ವರ್ಷ ಅತಿಹೆಚ್ಚು ಆದಾಯ ಸಂಗ್ರಹವಾಗಿದೆ. ಅಕ್ಟೋಬರ್ 13ರಿಂದ ಅಕ್ಟೋಬರ್ 27 ರವರೆಗೆ ಹಾಸನಾಂಬೆ ಉತ್ಸವ ನಡೆದಿತ್ತು. ಒಟ್ಟು 15 ದಿನಗಳ ಕಾಲ ನಡೆದಿದ್ದ ಹಾಸನಾಂಬ ಉತ್ಸವದಲ್ಲಿ ಆರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದುಕೊಂಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿತ್ತು.