ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಯಾಣ ಕರ್ನಾಟಕದವರು ಕೀಳರಿಮೆಯಿಂದ ಹೊರಬರಬೇಕು: ಬಿ.ಸಿ. ಪಾಟೀಲ್

|
Google Oneindia Kannada News

ಕೊಪ್ಪಳ,ಸೆ.17: ಕಲ್ಯಾಣ ಕರ್ನಾಟಕ ಭಾಗ ಹಿಂದಿಗಿಂತಲೂ ಈಗ ಹೆಚ್ಚು ಹಸಿರಾಗಿದ್ದು, ಫಲವತ್ತಾಗಿದೆ. ಈ ಭಾಗದ ಜನ ತಾವು ಹಿಂದುಳಿದವರೆಂಬ ಕೀಳರಿಮೆ ಬಿಡಬೇಕು ಎಂದು ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಎರಡುಬಾರಿ ಧ್ವಜಾರೋಹಣ ನೆರವೇರಿಸುತ್ತವೆ. ಆದರೆ ಈ ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್‌ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಕೋವಿಡ್‌ನಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಲಾಗದಿದ್ದರೂ ಆತ್ಮಾಭಿಮಾನದಿಂದ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿದೆ ಎಂದರು.

ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಹಾರೈಕೆ: ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿಯೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಚಿವ ಬಿ.ಸಿ. ಪಾಟೀಲ್ ಕೋರಿದರು. ಕೋವಿಡ್ ಸಂದರ್ಭದಲ್ಲಿ ಪ್ರಧಾನಿಗಳು 1 ಲಕ್ಷ ಕೋಟಿ ರೂಪಾಯಿಗಳನ್ನು ಕೃಷಿ ಮೂಲಭೂತ ಸೌಕರ್ತಗಳಿಗಾಗಿ ಮೀಸಲಿಟ್ಟಿದ್ದಾರೆ. ಈ ಪೈಕಿ 10 ಸಾವಿರ ಕೋಟಿ ರೂಪಾಯಿಗಳನ್ನು ಆಹಾರ ಸಂಸ್ಕರಣಾ ಘಟಕಗಳಿಗಾಗಿ ಮೀಸಲಿಡುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

Agriculture Minister B.c. Patil Inaugurated The Kalyana Karnataka Utsav In Koppal Today

Recommended Video

ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada

ಕೋವಿಡ್ ಹೊಡೆತದ ನಡುವೆಯೂ ಕೃಷಿ ಕ್ಷೇತ್ರ ಚೇತರಿಕೆ ಕಂಡಿರುವುದು ಸಮಾಧಾನ ತಂದಿದೆ‌. ಕೃಷಿಕರು ತಮ್ಮ ರಂಗದಲ್ಲಿ ಹೊಸಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಗುಲ್ಬರ್ಗಾದಲ್ಲಿನ ಕೃಷಿವಿಜ್ಞಾನ ಕೇಂದ್ರದಲ್ಲಿ ನಡೆದಂತಹ ವಸ್ತುಪ್ರದರ್ಶನದಲ್ಲಿ ಒಬ್ಬ ಪಪ್ಪಾಯಿ ಬೆಳೆಯುವ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ 4 ಲಕ್ಷ ರೂ. ಮೌಲ್ಯದ ಫಸಲು ಬೆಳೆದು ಮಾದರಿಯಾಗಿದ್ದಾರೆ. ರೈತರೇ ರೈತರಿಗೆ ಸ್ಫೂರ್ತಿಯಾಗಬೇಕು.ತಂತ್ರಜ್ಞಾನ ಆಧುನಿಕತೆಯ ಬಳಕೆ ಬಗ್ಗೆ ಫಲಾನುಭವಿ ರೈತರೇ ಇತರೆ ರೈತರಿಗೆ ಪ್ರೇರಣೆಯಾಗಬೇಕು ಎಂದು ಬಿ.ಸಿ. ಪಾಟೀಲ್ ಮಾತನಾಡಿದರು.

English summary
Agriculture Minister B.C. Patil inaugurated the Kalyana Karnataka Utsava in Koppala today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X