ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರಳಿಗೆ ಹಾವು ಸುತ್ತಿಕೊಂಡು ದೇವಸ್ಥಾನ ಪ್ರವೇಶಿಸಿದ ಮಹಿಳೆ

|
Google Oneindia Kannada News

ಕೊಪ್ಪಳ, ಜನವರಿ 08: ಶೀಲಮ್ಮ ಎಂಬ ಮಹಿಳೆಯು ಆಕಸ್ಮಿಕವಾಗಿ ಸಿಕ್ಕ ಹಾವನ್ನು ಕೊರಳಿಗೆ ಸುತ್ತಿಕೊಂಡು ದೇವಸ್ಥಾನ ಪ್ರವೇಶಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಹಿರೇಬನಿಗಾಳ ಗ್ರಾಮದಲ್ಲಿ ನಡೆದಿದೆ.

ಕೊರಳಿಗೆ ಹಾವು ಸುತ್ತಿಕೊಂಡಿರುವ ಮಹಿಳೆಯು ಕೊಪ್ಪಳದ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಇದು ದೇವರ ಮಹಿಮೆ ಎನ್ನುತ್ತಿದ್ದಾರೆ.

ಜನವರಿ 12ರಿಂದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಜನವರಿ 12ರಿಂದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ

ಹಿರೇಬನಿಗಾಳ ಗ್ರಾಮದ ಕೋಳಿ ಫಾರಂನಲ್ಲಿ ಕೆಲಸ ಮಾಡುವ ಶೀಲಮ್ಮ ಅವರು ಇತ್ತೀಚಿಗೆ ಸಿದ್ದಾರೂಢ ಹೋಗಬೇಕೆಂದು ನಿನ್ನೆ ಅಂದು ಕೊಂಡಿದ್ದರು.

A Woman Entered The Temple With A Snake Wrapped Her Neck

ಆದರೆ ಇಂದು ಇದ್ದಕ್ಕಿದ್ದಂತೆ ಹಾವು ಶೀಲಮ್ಮ ಅವರಿಗೆ ಕಾಣಿಸಿದೆ. ಸಿದ್ದಾರೂಢರೇ ನಮ್ಮ ಬಳಿ ಆಗಮಿಸಿದ್ದಾರೆ ಎಂದು ಹಾವನ್ನು ಕೊರಳಿಗೆ ಸುತ್ತಿಕೊಂಡಿದ್ದಾರೆ.

ಇದನ್ನು ಕಂಡ ಗ್ರಾಮಸ್ಥರು ಇದು ದೇವರ ಪವಾಡವಿರಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಾವು ಶೀಲಮ್ಮ ಅವರಿಗೂ ಕಚ್ಚಿಲ್ಲ. ಅವರು ಆರೋಗ್ಯದಿಂದ ಇದ್ದಾರೆ.

ಶೀಲಮ್ಮ ಅವರು ಹಾವನ್ನು ಕೊರಳಿಗೆ ಸುತ್ತಿಕೊಂಡು ನೃತ್ಯ ಮಾಡುತ್ತಾರೆ, ಊರೆಲ್ಲಾ ಸುತ್ತುತ್ತಿದ್ದು, ಗ್ರಾಮಸ್ಥರು ಕೈ ಮುಗಿಯುತ್ತಿದ್ದಾರೆ. ಕೊಪ್ಪಳದ ಗವಿ ಸಿದ್ದೇಶ್ವರ ದೇವಸ್ಥಾನಕ್ಕೆ ಹಾವು ಸುತ್ತಿಕೊಂಡೇ ಪ್ರವೇಶಿಸಿದ್ದಾರೆ.

English summary
A woman with a snake wrapped around her neck has entered the Gavisiddheshwara temple in Koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X