ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗಾವತಿ ಬಳಿ ನಡುಗಡ್ಡೆಯಲ್ಲಿ ಸಿಲುಕಿದ್ದ 100 ಕುರಿ, ಕುರಿಗಾಹಿ ರಕ್ಷಣೆ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಆಗಸ್ಟ್‌ 11 : ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದರಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದ್ದು ಇದೀಗ ನದಿ ಉಕ್ಕಿ ಹರಿಯುತ್ತಿದೆ. ನದಿಗೆ ಅಪಾರ ಪ್ರಮಾಣ ನೀರು ಹರಿಬಿಟ್ಟಿರುವುದರಿಂದ ನಡುಗಡ್ಡೆಯಲ್ಲಿ ಇಬ್ಬರು ಕುರಿಗಾಹಿಗಳು ಹಾಗ ಸಿಲುಕಿ ಹಾಕಿಕೊಂಡಿದ್ದರು. ಶುಕ್ರವಾರ ಎನ್‌ಡಿಆರ್‌ ಎಫ್‌ ಹಾಗೂ ಅಗ್ನಿಶಾಮಕ ದಳ ಜಂಟಿ ಕಾರ್ಯಾಚಾರಣೆ ನಡೆಸಿ ರಕ್ಷಿಸಿದೆ.

Recommended Video

Rain effect: ಸಾವು ಬದುಕಿನ ಹೊರಟದಲ್ಲಿ ಬದುಕಿದ ಕುರಿಗಳು | Oneindia Kannada

ಕೊಪ್ಪಳ ಜಿಲ್ಲೆಯ ಗಂಗಾವತಿಯ ದೇವಘಟ್ಟ ಸಮೀಪದ ನದಿಯಲ್ಲಿನ ನಡುಗಡ್ಡೆಯಲ್ಲಿ ಇಬ್ಬರು ಕುರಿಗಾರರುಸಿಲುಕಿಕೊಂಡಿರುವ ಘಟನೆ ನಡೆದಿದೆ. ಮಲೆನಾಡಿನ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಅಧಿಕ ಪ್ರಮಾಣದಲ್ಲಿ ಮಳೆ ಬಿಳುತ್ತಿರುವ ಹಿನ್ನೆಲೆಯಲ್ಲಿ 105 ಟಿಎಂಸಿ ಸಾಮಾರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸಂಪೂರ್ಣ ಭರ್ತಿಯಾಗಿದ್ದು, ಇನ್ನೂ ಒಳಹರಿವಿನ ಪ್ರಮಾಣ ಜಾಸ್ತಿಯಾಗಿದೆ. ಇದರಿಂದ ಸದ್ಯ ಜಲಾಶಯದಿಂದ ತುಂಗಭದ್ರ ನದಿಗೆ 1 ಲಕ್ಷ 70 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಕೃಷಿಭೂಮಿ, ಹುಲಿಗೆಮ್ಮಾ ದೇವಾಲಯ ಜಲಾವೃತತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಕೃಷಿಭೂಮಿ, ಹುಲಿಗೆಮ್ಮಾ ದೇವಾಲಯ ಜಲಾವೃತ

ಅಷ್ಟೇ ಅಲ್ಲದೆ ತುಂಗಭದ್ರ ನದಿಯು ಆಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗಂಗಾವತಿಯ ದೇವಘಟ್ಟ ಸಮೀಪದಲ್ಲಿ ಇರುವ ನಡುಗಡ್ಡೆಯಲ್ಲಿ ಕುರಿಗಳನ್ನು ಮೇಯಿಸಲು ಹೋಗಿದ್ದ ಇಬ್ಬರು ಕುರಿಗಾರರು ಹಾಗೂ 100 ಕ್ಕೂ ಹೆಚ್ಚು ಕುರಿಗಳೂ ಸಿಲುಕಿಕೊಂಡಿದ್ದಿ ತಡವಾಗಿ ಬೆಳಕಿಗೆ ಬಂದಿತ್ತು. ಕುರಿಯನ್ನು ಮೇಯಿಸುವ ಕಾಯಕವನ್ನು ಮಾಡಿಕೊಂಡ ಹೋಗುತ್ತಿದ್ದ ತಾಲೂಕಿನ ವಿರುಪಾಪೂರ ಗ್ರಾಮದ ಹನುಮಂತಪ್ಪ ಹಾಗೂ ಹನುಮೇಶ ಎನ್ನುವ ಕುರಿಗಾರರು ಕಳೆದ 10 ದಿನಗಳ ಹಿಂದೆ ನದಿಗೆ ನೀರು ಕಡಿಮೆ ಇರುವ ವೇಳೆಯಲ್ಲಿ ಕುರಿಗಳನ್ನು ಮೇಯಿಸಲು ಅವಶ್ಯಕತೆ ಬೇಕಾದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿದ್ದಾರೆ.

 ದೂರವಾಣಿ ಮೂಲಕ ಮಾಹಿತಿ

ದೂರವಾಣಿ ಮೂಲಕ ಮಾಹಿತಿ

ಆದರೆ ಕಳೆದ ಐದಾರು ದಿನಗಳಿಂದ ಹಂತ ಹಂತವಾಗಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ನಡುಗಡ್ಡೆಯು ಸಹ ಮುಳುಗಡೆಯಾಗುವ ಹಂತಕ್ಕೆ ಆಗಮಿಸಿದೆ. ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಕುರಿಗಳನ್ನು ನಡುಗಡ್ಡೆಯಲ್ಲಿಯೇ ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ, ಇಬ್ಬರು ಸಹ ಗಡ್ಡೆಯಲ್ಲಿಯೇ ಇರುವ ಕಲ್ಲು ಬಂಡೆಯ ಮೇಲೆ ಕುಳಿತುಕೊಂಡಿದ್ದಾರೆ. ಊಟಕ್ಕಾಗಿ ತೆಗೆದುಕೊಂಡು ಹೋಗಿದ್ದ ಪದಾರ್ಥಗಳು ಖಾಲಿಯಾಗಿದ್ದು, ಊಟ ಮಾಡಲು ಏನು ಇಲ್ಲಾ. ನಮ್ಮನ್ನು ಕಾಪಾಡಿ ಎಂದು ದೂರವಾಣಿ ಕರೆಯ ಮೂಲಕ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

 ಕಾರ್ಯಾಚರಣಗೆ ಅಡ್ಡಿಯಾದ ನೀರಿನ ರಭಸ

ಕಾರ್ಯಾಚರಣಗೆ ಅಡ್ಡಿಯಾದ ನೀರಿನ ರಭಸ

ನಡುಗಡ್ಡೆಯಲ್ಲಿ ಕುರಿಗಾರರು ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಮೇರೆಗೆ ತಾಲೂಕು ಆಡಳಿತದ ಸಿಬ್ಬಂದಿಗಳು ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಗುರವಾರ ಕಾರ್ಯಚರಣೆ ನಡೆಸಿ, ನಡುಗಡ್ಡೆಯಿಂದ ಹೊರ ತರುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ನೀರಿನ ರಬಸ ಹೆಚ್ಚಾಗಿ ಇರುವುದರಿಂದ ಕಾರ್ಯಚರಣೆಯನ್ನು ನಡೆಸಲು ಸಾಧ್ಯವಾಗಿರಲಿಲ್ಲ. ನದಿಯಲ್ಲಿ ದೊಡ್ಡ ದೊಡ್ಡ ಬಂಡೆಗಳು ಇರುವುದರಿಂದ ಬೋಟ್ ಹಾಕಲು ಸಾಧ್ಯವಾಗುತ್ತಿಲ್ಲಾ. ಅನಿವಾರ್ಯವಾಗಿ ಅಗ್ನಿ ಶಾಮಕದಳದ ಸಿಬ್ಬಂದಿಗಳು ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು.

 ಬೋಟ್‌ಗಳ ಮೂಲಕವೇ ಕುರಿಗಳನ್ನು ರಕ್ಷಣೆ

ಬೋಟ್‌ಗಳ ಮೂಲಕವೇ ಕುರಿಗಳನ್ನು ರಕ್ಷಣೆ

ಶುಕ್ರವಾರ ಜಂಡಿ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್‌ ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ ನಡೆಸಿ 100 ಕ್ಕೂ ಹೆಚ್ಚು ಕುರಿಗಳ ಹಾಗೂ ಇಬ್ಬರು ಕುರಿಗಾಹಿಗಳನ್ನು ರಕ್ಷಣೆ ಮಾಡಿಸಿದ್ದರು. ಒಟ್ಟು 20 ಜನರ ತಂಡದಿಂದ , 2 ಬೋಟುಗಳ ಮೂಲಕ ನದಿ ದಡಕ್ಕೆ ಕರೆತಂದಿದ್ದಾರೆ. ರಕ್ಷಣಾ ಕಾರ್ಯದ ವೇಳೆ ನದಿಯಲ್ಲಿ ಎರಡು ಬಾರೀ ಬೋಟ್‌ಗಳು ಬಂದ್ ಆದರೂ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯ ಮುಂದುವರಿಸಿ ಕುರಿಗಾಹಿಗಳನ್ನು ರಕ್ಷಿಸಿದ್ದಾರೆ.

 ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತ

ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತ

ತುಂಗಾಭದ್ರಾ ಜಲಾಶಯದಿಂದ 1 ಲಕ್ಷದ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಆಗಿರುವುದರಿಂದ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ತುಂಗಭದ್ರಾ ನದಿಯ ದಡದಲ್ಲಿರುವ ಹೊಳೆ ಬಸವೇಶ್ವರ ದೇವಸ್ಥಾನ ಬಾಗಶಃ ಮುಳುಗಡೆಯಾಗಿದೆ. ಜೊತೆಗೆ ದೇವಸ್ಥಾನ ಸುತ್ತಮುತ್ತಲಿನ ಭತ್ತದ ಗದ್ದೆಗಳಿಗೂ ನುಗ್ಗಿದ ನೀರು ನುಗ್ಗಿದ್ದು, ನೂರಾರು ಎಕರೆ ಭತ್ತದ ಗದ್ದೆಗಳಿಗೆ ನುಗ್ಗಿದ ನೀರು ನುಗ್ಗಿದ್ದು, ಸ್ಥಳಕ್ಕೆ ಕಾರಟಗಿ ತಹಶಿಲ್ದಾರ ಭೇಟಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ತಹಶಿಲ್ದಾರಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

English summary
National Disaster Response Force (NDRF) and Fire fighters rescued 2 sheep keepers and more than 100 sheep, who were stuck in Deavagatta Island near Gangavathi, Koppal district after hevay water release from Thungabhadra Dam,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X