ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀದಿ ಇಲ್ಕೇಳಿ... ನಿಮ್ಮ ಕಪಾಳಮೋಕ್ಷವೇ ನನಗೆ ಶ್ರೀರಕ್ಷೆ: ಮೋದಿ

|
Google Oneindia Kannada News

ಪುರುಲಿಯಾ(ಪಶ್ಚಿಮ ಬಂಗಾಳ), ಮೇ 09: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು ಎಂದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮೋದಿ ಉತ್ತರ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರನ್ನು , 'ದೀದಿ' ಎಂದೇ ಸಂಬೋಧಿಸಿದ ಮೋದಿ, 'ನಿಮ್ಮ ಕಪಾಳಮೂಕ್ಷವೇ ನನಗೆ ಆಶೀರ್ವಾದ' ಎಂದಿದ್ದಾರೆ. ಪಶ್ಚಿಮ ಬಂಗಾಳದ ಪುರುಲಿಯಾ ಎಂಬಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಮೋದಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು: ಮಮತಾಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು: ಮಮತಾ

ಪಶ್ಚಿಮ ಬಂಗಾಳದಲ್ಲಿ ಗುರುವಾರ ಎರಡನೇ ಸಮಾವೇಶ ನಡೆಸುತ್ತಿರುವ ಮೋದಿ, ಮಮತಾ ಬ್ಯಾನರ್ಜಿ ಅವರ ಎಲ್ಲಾ ಟಿಕೆಗಳಿಗೂ ಉತ್ತರಿಸಿದರು. ನೀವು ಏನೇ ಹೇಳಿದರೂ ನಾನು ನಿಮ್ಮನ್ನು ಗೌರವಿಸುತ್ತೇನೆ, ದೀದಿ ಎಂದೇ ಕರೆಯುತ್ತೇನೆ ಎಂದರು!

ನಿಮ್ಮ ಕಪಾಳಮೋಕ್ಷ ನನಗೆ ಆಶೀರ್ವಾದ

ನಿಮ್ಮ ಕಪಾಳಮೋಕ್ಷ ನನಗೆ ಆಶೀರ್ವಾದ

"ದೀದಿ ನನಗೆ ಕಪಾಳಮೋಕ್ಷ ಮಾಡಬೇಕೆಂದಿದ್ದಾರೆ ಎಂದು ನನಗೆ ಯಾರೋ ಹೇಳಿದರು. ದೀದಿ.. ಓಹ್ ದೀದಿ... ನಾನು ನಿಮ್ಮನ್ನು ದೀದಿ ಎಂದೇ ಕರೆಯುತ್ತೇನೆ. ನಾನು ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮ ಕಪಾಳಮೋಕ್ಷ ನನಗೆ ಆಶೀರ್ವಾದ" ಎಂದು ಮೋದಿ ಹೇಳಿದ್ದಾರೆ.

'ಅವರಿಗೂ' ಕಪಾಳಮೋಕ್ಷ ಮಾಡಿ!

'ಅವರಿಗೂ' ಕಪಾಳಮೋಕ್ಷ ಮಾಡಿ!

"ನಿಮ್ಮ ಕಪಾಳಮೋಕ್ಷವನ್ನು ನಾನು ಸ್ವೀಕರಿಸುತ್ತೇನೆ. ಆದರೆ ನೀವು ಚಿಟ್ ಫಂಡ್ ಮೂಲಕ ವಂಚನೆ ಮಾಡಿದ ನಿಮ್ಮ ಸಹೋದ್ಯೋಗಿಗಳಿಗೂ ಕಪಾಳಮೋಕ್ಷ ಮಾಡಬೇಕು" ಎಂದು ಮೋದಿ ಹೇಳಿದರು.

ದೀದಿ ಎಲ್ಲಾ ಗೆರೆಗಳನ್ನೂ ದಾಟಿದ್ದಾರೆ: ಸುಷ್ಮಾ ಸ್ವರಾಜ್ ತರಾಟೆ ದೀದಿ ಎಲ್ಲಾ ಗೆರೆಗಳನ್ನೂ ದಾಟಿದ್ದಾರೆ: ಸುಷ್ಮಾ ಸ್ವರಾಜ್ ತರಾಟೆ

ದೀದಿ ಏನಂದಿದ್ದರು?

ದೀದಿ ಏನಂದಿದ್ದರು?

ಮೇ 7 ರಂದು ಪುರುಲಿಯಾದಲ್ಲೇ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು, "ನಾನು ನರೇಂದ್ರ ಮೋದಿ ಅವರನ್ನು ಪ್ರಧಾನಿ ಎಂದು ಪರಿಗಣಿಸಿಲ್ಲ. ನಾನು ವೇತನವನ್ನಾಗಲೀ, ಪೆನ್ಷನ್ ಆಗಲಿ ತೆಗೆದುಕೊಳ್ಳುತ್ತಿಲ್ಲ. ನಾನು ಪುಸ್ತಕ ಬರೆಯುತ್ತೇನೆ, ಅವು ಉತ್ತಮವಾಗಿ ಮಾರಾಟವಾಗುತ್ತವೆ. ನಾನು ನನ್ನ ಪೇಂಟಿಂಗ್ ಗಳಿಗೂ ಹಣ ತೆಗೆದುಕೊಳ್ಳುವುದಿಲ್ಲ. ನಾನು ಸಾವಿರ ಕೋಟಿ ರೂ.ನಷ್ಟು ದುಡ್ಡು ಮಾಡಬಹುದು. ಆದರೆ ನನಗೆ ಹಣ ಬೇಕಿಲ್ಲ. ನಾನು ನನ್ನ ಪಕ್ಷವನ್ನೂ ಹಾಗೇ ನಡೆಸುತ್ತಿದ್ದೇನೆ. ಆದ್ದರಿಂದ ನರೇಂದ್ರ ಮೋದಿ ಬಂಗಾಳಕ್ಕೆ ಬಂದು ನನ್ನ ಪಕ್ಷ ಹಣವನ್ನು ಹೊಡೆಯುತ್ತದೆ ಎಂದಾಗ ಅವರಿಗೆ ಭ್ರಷ್ಟಾಚಾರದ ಕಪಾಳಮೋಕ್ಷ ಮಾಡಬೇಕು ಅನ್ನಿಸುತ್ತದೆ" ಎಂದಿದ್ದರು.

ಬಂಗಾಳದಲ್ಲಿ ಏಳು ಹಂತಗಳಲ್ಲಿ ಮತದಾನ

ಬಂಗಾಳದಲ್ಲಿ ಏಳು ಹಂತಗಳಲ್ಲಿ ಮತದಾನ

ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಕ್ಷೇತ್ರಗಳಿಗೆ ಈಗಾಗಲೇ ಐದು ಹಂತದ ಮತದಾನ ನಡೆದಿದ್ದು, ಮೇ 12 ಮತ್ತು 19 ರಂದು ಇನ್ನುಳಿದ ಎರಡು ಹಂತಗಳಿಗೆ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Prime minister Narendra Modi on Mamata Banerjee's 'tight slap of democracy' statement, told, "Your slap will be a blessing for me"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X