ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಚಿನ್ನದ ಪದಕ ಪಡೆದು ವೇದಿಕೆ ಮೇಲೆಯೇ ಸಿಎಎ ಪ್ರತಿ ಹರಿದ ಯುವತಿ

|
Google Oneindia Kannada News

ಕೊಲ್ಕತ್ತ, ಡಿಸೆಂಬರ್ 26: ಚಿನ್ನದ ಪದಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅದೇ ವೇದಿಕೆ ಮೇಲೆ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತದಲ್ಲಿನ ಜಾದವ್‌ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ದೇಬಸ್ಮಿತಾ ಚೌಧರಿ ಅವರಿಗೆ ಇಂದು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಅವರಿಗೆ ಚಿನ್ನದ ಪದಕವನ್ನೂ ನೀಡಲಾಯಿತು. ಪದಕ ಸ್ವೀಕರಿಸಿದ ವೇದಿಕೆಯಲ್ಲಿಯೇ ಎಲ್ಲ ಗಣ್ಯರ ಎದುರೇ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಪ್ರತಿಭಟಿಸಿದರು.

ವೇದಿಕೆಯ ಮೇಲೆ ಪದವಿ ಸ್ವೀಕರಿಸಿ ನಗುತ್ತಲೇ ಕುಲಪತಿಗಳ ಅನುಮತಿ ಪಡೆದು, ವೇದಿಕೆ ಮುಂಭಾಗಕ್ಕೆ ಬಂದು ಸಿಎಎ ಪ್ರತಿ ಹರಿದು, 'ಇನ್‌ಕ್ವಿಲಾಬ್ ಜಿಂದಾಬಾದ್' ಘೋಷಣೆ ಕೂಗಿದರು. 'ನಾನು ನನ್ನ ದಾಖಲೆಗಳನ್ನು ತೋರಿಸುವುದಿಲ್ಲ' ಎಂದು ಜೋರಾಗಿ ಕೂಗಿ ಹೇಳಿ, ಸಭಿಕರಿಗೆ ನಮಿಸಿ ವೇದಿಕೆಯಿಂದ ಹೊರನಡೆದರು. ದೇಬಸ್ಮಿತಾ ಚೌಧರಿ ಅವರ ಈ ಪ್ರತಿಭಟನೆಗೆ ವಿದ್ಯಾರ್ಥಿಗಳ ಕರತಾಡನದ ಸ್ವಾಗತ ಸಿಕ್ಕಿತು.

Young Girl Tear Up CAA Copy On Stage After Reciving Gold Medal

ಅದೇ ದಿನ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಾನ್ಕರ್ ಅವರು ಪದವಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ವಿವಿ ಗೆ ಆಗಮಿಸಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ಕಪ್ಪು ಬಟ್ಟೆ ಪ್ರದರ್ಶಿಸಿ ರಾಜ್ಯಪಾಲರನ್ನು ಹಿಂತಿರುಗಿ ಹೋಗುವಂತೆ ಮಾಡಿದರು. ಕೆಲವು ಶಿಕ್ಷಕರೂ ವಿದ್ಯಾರ್ಥಿಗಳಿಗೆ ಜೊತೆಯಾದರು.

English summary
Jadavpur University student Debsmita Chowdhury tear up CAA copy on stage after receiving gold medal for her academic excellence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X