• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾಸ್ ಚಂಡಮಾರುತ: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ

|
Google Oneindia Kannada News

ಕೋಲ್ಕತ್ತಾ, ಮೇ 28: ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಬಂಗಾಳದ ಕಲೈಕುಂಡದಲ್ಲಿ ಭೇಟಿಯಾದರು. ಯಾಸ್ ಚಂಡಮಾರುತದಿಂದ ಉಂಟಾದ ಹಾನಿಗಳ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದರು. ಆದರೆ, ಮೋದಿಯೊಂದಿಗೆ ನಡೆದ ರಿವ್ಯೂ ಮೀಟ್‌ನಲ್ಲಿ ಭಾಗಿಯಾಗದ ಬ್ಯಾನರ್ಜಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಟೀಕಿಸಿದ್ದಾರೆ.

ಯಾಸ್ ಚಂಡಮಾರುತ: ಪ್ರಧಾನಿ ಮೋದಿ ಜೊತೆಗಿನ ಪರಿಶೀಲನಾ ಸಭೆಗೆ ಗೈರಾದ ದೀದಿಯಾಸ್ ಚಂಡಮಾರುತ: ಪ್ರಧಾನಿ ಮೋದಿ ಜೊತೆಗಿನ ಪರಿಶೀಲನಾ ಸಭೆಗೆ ಗೈರಾದ ದೀದಿ

"ಪ್ರಧಾನಮಂತ್ರಿ ಮತ್ತು ಅಧಿಕಾರಿಗಳ ಜೊತೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವುದು ರಾಜ್ಯದ ಜನರ ಹಿತಾಸಕ್ತಿ ಪೂರೈಕೆಗೆ. ನೇರ ಮಾತುಕತೆ ರಾಜ್ಯ ಅಥವಾ ಪ್ರಜಾಪ್ರಭುತ್ವದ ಹಿತಾಸಕ್ತಿಗಾಗಿ" ಎಂದು ಟ್ವೀಟ್‌ ಮಾಡಿದ್ದಾರೆ.

''ಉತ್ತರ 24 ಪರಗಣ ಜಿಲ್ಲೆಯಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ಬಗ್ಗೆ ವೈಮಾನಿಕ ಸಮೀಕ್ಷೆಯನ್ನು ಬ್ಯಾನರ್ಜಿ ನಡೆಸಿದ್ದಾರೆ. ಮುಖ್ಯ ಕಾರ್ಯದರ್ಶಿ ಅಲಪನ್ ಬಂದೋಪಾಧ್ಯರೊಂದಿಗೆ ಬ್ಯಾನರ್ಜಿ, ಹಿಂಗಲ್ಗಂಜ್, ಹಸ್ನಾಬಾದ್, ಸಂದೇಶ್‌ಖಲಿ, ಪಿನಾಖಾ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ'' ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

''ಹೆಚ್ಚಿನ ಪ್ರದೇಶಗಳು ಜಲಾವೃತವಾಗಿದೆ. ಕೃಷಿ ಹೊಲಗಳು, ಮನೆಗಳು ಮತ್ತು ದೊಡ್ಡ ಪ್ರದೇಶಗಳು ಮುಳುಗಿ ಹೋಗಿದೆ. ಕ್ಷೇತ್ರ ಸಮೀಕ್ಷೆಯನ್ನೂ ನಡೆಸಲಾಗುವುದು'' ಎಂದು ಬ್ಯಾನರ್ಜಿ ಹೇಳಿದ್ದಾರೆ.

ಯಾಸ್ ಚಂಡಮಾರುತ: ಬಂಗಾಳ, ಒಡಿಶಾದಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ 4 ಸಾವುಯಾಸ್ ಚಂಡಮಾರುತ: ಬಂಗಾಳ, ಒಡಿಶಾದಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ 4 ಸಾವು

ಚಂಡಮಾರುತದ ಹಾನಿಗಳನ್ನು ಪರಿಶೀಲಿಸಲು ಪ್ರಧಾನಿ ಒಡಿಶಾ ಸಿಎಂ ನವೀನ್ ಪಟ್ನಾಯಕ್‌ರನ್ನು ಕೂಡ ಭೇಟಿಯಾಗಿದ್ದಾರೆ. ಚಂಡಮಾರುತದ ನಂತರದ ಪರಿಸ್ಥಿತಿ ಮತ್ತು ಯಾಸ್ ಚಂಡಮಾರುತದಿಂದ ಉಂಟಾದ ಹಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿ ನಡೆದ ಸಭೆಯಲ್ಲಿ ಪರಿಶೀಲಿಸಿದ್ದಾರೆ. ಇಲ್ಲಿನ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿರನ್ನು ರಾಜ್ಯಪಾಲ ಗಣೇಶ ಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಸ್ವಾಗತಿಸಿದರು.

ಚಂದ್ರಗ್ರಹಣದಿಂದ ಇನ್ನಷ್ಟು ತೀವ್ರಗೊಳ್ಳಲಿದೆ ಯಾಸ್ ಚಂಡಮಾರುತ; ಭಾರೀ ಮಳೆ ಎಚ್ಚರಿಕೆ ಕೊಟ್ಟ ಐಎಂಡಿಚಂದ್ರಗ್ರಹಣದಿಂದ ಇನ್ನಷ್ಟು ತೀವ್ರಗೊಳ್ಳಲಿದೆ ಯಾಸ್ ಚಂಡಮಾರುತ; ಭಾರೀ ಮಳೆ ಎಚ್ಚರಿಕೆ ಕೊಟ್ಟ ಐಎಂಡಿ

ಯಾಸ್ ಚಂಡಮಾರುತವು ಬುಧವಾರ 145 ಕಿ.ಮೀ ವೇಗದಲ್ಲಿ ಬೀಸಿದ್ದು, ಭಾರತದ ಪೂರ್ವ ಕರಾವಳಿಯ ಕೆಲವು ಭಾಗಗಳಲ್ಲಿ ಹಾನಿ ಉಂಟು ಮಾಡಿದೆ. ಕನಿಷ್ಠ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿರುವ ಈ ಚಂಡ ಮಾರುತ, ಕೃಷಿಭೂಮಿಗೆ ಭಾರೀ ಹಾನಿ ಉಂಟು ಮಾಡಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ 21 ಲಕ್ಷಕ್ಕೂ ಹೆಚ್ಚು ಜನರನ್ನು ಈ ಸಂದರ್ಭ ಸ್ಥಳಾಂತರ ಮಾಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Yaas cyclone: PM Modi undertakes aerial survey of Odisha, West Bengal. Chief Minister Mamata Banerjee met modi and submitted preliminary report on damages caused by Cyclone Yaas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X