ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಹಂತಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಲು ಮಮತಾ ಬ್ಯಾನರ್ಜಿ ಒತ್ತಾಯ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 15: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಳಿದ ನಾಲ್ಕು ಹಂತಗಳಿಗೆ ಒಂದೇ ದಿನ ಚುನಾವಣೆ ನಡೆಸಿ ಎಂದು ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ. ಇನ್ನು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಸಿದರೆ ಆ ಸಮಯದಲ್ಲಿ ಮತ್ತಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಒಂದೇ ಹಂತದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಸಿ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 4 ಹಂತ ಸೇರಿಸಿ ಒಂದೇ ದಿನ ಚುನಾವಣೆ ನಡೆಸುವ ಚಿಂತನೆ ಇಲ್ಲ: ಚುನಾವಣಾ ಆಯೋಗಪಶ್ಚಿಮ ಬಂಗಾಳದಲ್ಲಿ 4 ಹಂತ ಸೇರಿಸಿ ಒಂದೇ ದಿನ ಚುನಾವಣೆ ನಡೆಸುವ ಚಿಂತನೆ ಇಲ್ಲ: ಚುನಾವಣಾ ಆಯೋಗ

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಿಗೆ ಚುನಾವಣೆ ನಡೆಯುತ್ತಿದೆ ಈಗಾಗಲೇ ನಾಲ್ಕು ಹಂತಗಳ ಚುನಾವಣೆ ಮುಕ್ತಾಯಗೊಂಡಿದೆ, ಉಳಿದ ನಾಲ್ಕು ಹಂತದ ಚುನಾವಣೆಗಳಿಗೆ ಒಟ್ಟಿಗೆ ಮತದಾನ ನಡೆಸಲು ಒತ್ತಾಯಿಸಿದ್ದಾರೆ.

 Wrap Up 4 Rounds Of Voting In A Day: Mamata Banerjee To Election Body

ಕೆಲ ಸಮಯದ ಹಿಂದೆ ಚುನಾವಣಾ ಆಯೋಗವೂ ಯಾವುದೇ ಕಾರಣಕ್ಕೂ ಉಳಿದ ಹಂತದ ಮತದಾನವನ್ನು ಏಕಕಾಲಕ್ಕೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಚುನಾವಣಾ ಆಯೋಗವು ಎಲ್ಲಾ ಪಕ್ಷಗಳ ಸಭೆ ಕರೆದಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಶಮ್‌ಶೇರ್ ಗುಂಜ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೆಜೌಲ್ ಹಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದೇ, ಗುರುವಾರ ಮುಂಜಾನೆ 5 ಗಂಟೆ ವೇಳೆಗೆ ನಿಧನರಾದರು. ಸಂಶೇರ್‌ಗಂಜ್‌ನಲ್ಲಿ ಏಪ್ರಿಲ್ 26ಕ್ಕೆ ಚುನಾವಣೆ ನಿಗದಿಯಾಗಿತ್ತು. ಏಪ್ರಿಲ್ 26 ರಂದು 7 ನೇ ಹಂತದಲ್ಲಿ ಮತದಾನ ನಡೆಯಲಿದೆ.

English summary
Bengal Chief Minister Mamata Banerjee has called for clubbing the remaining four phases of elections into one day in view of the increasing Covid cases in the state - a possibility the Election Commission has already negated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X