• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆರಗು ಹುಟ್ಟಿಸುವ ಸುದ್ದಿ: 30 ವರ್ಷದ ಮಹಿಳೆ ಪುರುಷನಾದ ಕಥೆ!

|

ಕೋಲ್ಕತ್ತಾ, ಜೂನ್.26: ಪಶ್ಚಿಮ ಬಂಗಾಳದಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಗೆ ತೆರಳಿದ ವೇಳೆಯಲ್ಲಿ 30 ವರ್ಷದ ಮಹಿಳೆ ಆಘಾತಕ್ಕೆ ಒಳಗಾಗುವಂತಾ ಅಂಶವೊಂದು ಬೆಳಕಿಗೆ ಬಂದಿದೆ.

   ನಾನು ಇಂದಿರಾಗಾಂಧಿ ಮೊಮ್ಮೊಗಳು ಯಾವ ಕ್ರಮ ಬೇಕಾದ್ರು ಕೈಗೊಳ್ಳಿ | Priyanka Gandhi | Oneindia Kannada

   ಕಳೆದ 30 ವರ್ಷಗಳಿಂದ ಎಲ್ಲ ಮಹಿಳೆಯರಂತೆ ಸರಳ ಜೀವನ ಸಾಗಿಸಿದರಲ್ಲಿ ಇತ್ತೀಚಿಗೆ ವಿಚಿತ್ರ ರೀತಿಯ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ವೈದ್ಯಕೀಯ ತಪಾಸಣೆ ತೆರಳಿದ ಸಂದರ್ಭದಲ್ಲಿ ತಾನೊಬ್ಬ ಮಹಿಳೆಯಲ್ಲ ಪುರುಷ ಎಂಬ ಅಂಶವನ್ನು ಮಹಿಳೆ ಕಂಡುಕೊಂಡಿದ್ದಾರೆ.

   ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ

   ಮಹಿಳೆಯನ್ನು ತಪಾಸಣೆ ನಡೆಸಿದ ವೈದ್ಯರು ಆಕೆಯಲ್ಲಿ ಪುರುಷರ ದೇಹದಲ್ಲಿ ಇರುವಂತಾ ವಿಶೇಷ ಅಂಶವೊಂದು ಇರುವುದನ್ನು ಪತ್ತೆ ಮಾಡಿದ್ದಾರೆ. ಪುರುಷರಿಗೆ ಕಾಣಿಸಿಕೊಳ್ಳುವ 'ಟೆಸ್ಟಿಕ್ಯೂಲರ್ ಕ್ಯಾನ್ಸರ್' ನಿಂದ ಮಹಿಳೆ ಬಳಲುತ್ತಿರುವುದು ದೃಢಪಟ್ಟಿದೆ. ಪುರುಷರಲ್ಲಿ ಮಾತ್ರ ಈ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

   28 ವರ್ಷದ ಸಹೋದರಿಗೂ ಒಂದೇ ರೀತಿ ಸಮಸ್ಯೆ

   28 ವರ್ಷದ ಸಹೋದರಿಗೂ ಒಂದೇ ರೀತಿ ಸಮಸ್ಯೆ

   ಆಶ್ಚರ್ಯಕರ ಸಂಗತಿಯೆಂದರೆ, 30 ವರ್ಷದ ಮಹಿಳೆಗೆ ಪುರುಷರಲ್ಲಿ ಇರುವಂತಾ ಅಂಶವೊಂದು ಪತ್ತೆಯಾಗಿರುವ ಬೆನ್ನಲ್ಲೇ 28 ವರ್ಷದ ಆಕೆಯ ಸಹೋದರಿಗೂ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ಅಗತ್ಯ ವೈದ್ಯಕೀಯ ತಪಾಸಣೆ ವೇಳೆ ಸಹೋದರಿಗೆ 'ಆಂಡ್ರೊಜೆನ್ ಇನ್ಸೆನ್ಸಿಟಿವಿಟಿ ಸಿಂಡ್ರೋಮ್' ಇರುವುದು ದೃಢಪಟ್ಟಿದೆ. ಅಸಲಿಗೆ ಈ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ತಳೀಯವಾಗಿ ಪುರುಷನಾಗಿ ಜನಿಸುತ್ತಾನೆ, ಆದರೆ ಮಹಿಳೆಯ ಎಲ್ಲಾ ದೈಹಿಕ ಲಕ್ಷಣಗಳನ್ನು ಹೊಂದಿದ್ದಾನೆ.

   9 ವರ್ಷಗಳ ಹಿಂದೆ ವೈವಾಹಿಕ ಬದುಕು ಆರಂಭ

   9 ವರ್ಷಗಳ ಹಿಂದೆ ವೈವಾಹಿಕ ಬದುಕು ಆರಂಭ

   ಕೋಲ್ಕತ್ತಾದ ಬಿರ್ಭಮ್ ನಿವಾಸಿಯಾಗಿದ್ದ 30 ವರ್ಷದ ಮಹಿಳೆಯು ಕಳೆದ 9 ವರ್ಷಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಕಳೆದ ಕೆಲವು ತಿಂಗಳಿಂದ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಇತ್ತೀಚಿಗೆ ನೇತಾಜಿ ಸುಭಾಷ್ ಚಂದ್ರ ಭೋಸ್ ಕ್ಯಾನ್ಸರ್ ಆಸ್ಪತ್ರೆಗೆ ತಪಾಸಣೆಗೆ ಎಂದು ತೆರಳಿದ್ದರು. ಆಂಕೊಲಾಜಿಸ್ಟ್ ಡಾ. ಅನುಪಮ್ ದತ್ತಾ ಮತ್ತು ಶಸ್ತ್ರಚಿಕಿತ್ಸಕ ಆಂಕೊಲಾಜಿಸ್ಟ್ ಡಾ. ಸೌಮೆನ್ ದಾಸ್ ಅವರು ಮಹಿಳೆಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಈ ವೇಳೆ ಮಹಿಳೆಯ "ನಿಜವಾದ ಗುರುತು" ಪತ್ತೆ ಹಚ್ಚಿದ್ದಾರೆ. ಆಕೆ ನೋಡುವುದಕ್ಕೆ ಮಹಿಳೆಯಂತಿದ್ದರೂ ನಿಜವಾಗಿ ಪುರುಷ ಎಂದು ಸ್ಪಷ್ಟನೆ ನೀಡಿದ್ದಾರೆ.

   ಗಂಗೆಯಲ್ಲಿ ಮುಳುಗೆದ್ದರೆ ಕ್ಯಾನ್ಸರ್ ಬಂದೀತು ಎಚ್ಚರಿಕೆ!

   22,000 ಜನರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆ

   22,000 ಜನರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆ

   ಅವಳ ಧ್ವನಿಯಿಂದ ಪ್ರಾರಂಭಿಸಿ, ಅಭಿವೃದ್ಧಿ ಹೊಂದಿದ ಸ್ತನಗಳು, ಸಾಮಾನ್ಯವಾಗಿ ಗೋಚರಿಸುವ ಬಾಹ್ಯ ಜನನಾಂಗಗಳು, ಎಲ್ಲವೂ ಮಹಿಳೆಯದ್ದಾಗಿದೆ. ಆದರೆ ಹುಟ್ಟಿನಿಂದ ಗರ್ಭಾಶಯ ಮತ್ತು ಅಂಡಾಶಯಗಳು ಇರುವುದಿಲ್ಲ. ಅವಳು ಎಂದಿಗೂ ಮುಟ್ಟನ್ನು ಅನುಭವಿಸಿಲ್ಲ. ಇಂಥ ಪ್ರಕರಣಗಳು ಅಪರೂಪದಲ್ಲೇ ಅಪರೂಪದ್ದಾಗಿವೆ. ಭಾರತದಲ್ಲಿ 22,000ಕ್ಕೆ ಒಬ್ಬರಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಅಂಕೊಲಾಜಿಸ್ಟ್ ಡಾ.ಅನುಪಮ್ ದತ್ತಾ ಪಿಟಿಐಗೆ ಮಾಹಿತಿ ನೀಡಿದ್ದಾರೆ.

   ವೈದ್ಯರಿಂದ ಮಹಿಳೆಗೆ ಕ್ಯಾರಿಯೋಟೈಪಿಂಗ್ ಪರೀಕ್ಷೆ

   ವೈದ್ಯರಿಂದ ಮಹಿಳೆಗೆ ಕ್ಯಾರಿಯೋಟೈಪಿಂಗ್ ಪರೀಕ್ಷೆ

   ಇನ್ನು ವೈದ್ಯರು ಮೊದಲಿಗೆ ನಡೆಸಿದ ಪರೀಕ್ಷಾ ವರದಿಗಳಿಂದ ವ್ಯಕ್ತಿಗೆ "ಕುರುಡು ಯೋನಿ" ಇದೆ ಎಂದು ಸ್ಪಷ್ಟಪಡಿಸಿತು. ತದನಂತರ, ವೈದ್ಯರು ಕ್ಯಾರಿಯೋಟೈಪಿಂಗ್ ಪರೀಕ್ಷೆ ನಡೆಸಲು ನಿರ್ಧರಿಸಿದರು, ಇದು ಮಹಿಳೆಯರಲ್ಲಿ ಕಂಡುಬರುವಂತೆ ಆಕೆಯ ವರ್ಣತಂತು ಪೂರಕ 'XY' ಮತ್ತು 'XX' ಅಲ್ಲ ಎಂದು ಬಹಿರಂಗಪಡಿಸಿತು.

   ಕ್ಯಾನ್ಸರ್ ಔಷಧಿ ದರ ಶೇ 76ರಷ್ಟು ಇಳಿಕೆ

   ಮಹಿಳೆಯ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ಮಾಹಿತಿ

   ಮಹಿಳೆಯ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ಮಾಹಿತಿ

   ಮಹಿಳೆಯು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಮೊದಲಿಗೆ ನಾವು ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸಿದೆವು. ಈ ವೇಳೆ ಆಕೆಯ ದೇಹದೊಳಗೆ ವೃಷಣಗಳಿವೆ ಎಂದು ತಿಳಿದುಬಂದ ಹಿನ್ನೆಲೆ ಬಯಾಪ್ಸಿ ನಡೆಸಲಾಯಿತು. ನಂತರ ಮಹಿಳೆಯಲ್ಲಿ ಇರುವುದು ಸೆಮಿನೋಮಾ ಎಂದೂ ಕರೆಯಲ್ಪಡುವ ವೃಷಣ ಕ್ಯಾನ್ಸರ್ ಎಂದು ಗುರುತಿಸಲಾಯಿತು ಎಂದು ಅಂಕೊಲಾಜಿಸ್ಟ್ ಡಾ ದತ್ತಾ ವಿವರಿಸಿದರು. ಪ್ರಸ್ತುತ, ಮಹಿಳೆಯನ್ನು ಕೀಮೋಥೆರಫಿ ತಪಾಸಣೆಗೊಳಪಡಿಸಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

   ಹಾರ್ಮೊನ್ ಅಭಿವೃದ್ಧಿಯಿಂದ ಮಹಿಳೆಯಂತೆ ಗೋಚರ

   ಹಾರ್ಮೊನ್ ಅಭಿವೃದ್ಧಿಯಿಂದ ಮಹಿಳೆಯಂತೆ ಗೋಚರ

   ಮಹಿಳೆಯ ದೇಹದೊಳಗೆ ವೃಷಣಗಳ ಅಭಿವೃದ್ಧಿ ಆಗದಿರುವ ಹಿನ್ನೆಲೆಯಲ್ಲಿ ಟೆಸ್ಟೋಸ್ಟೆರಾನ್ ಸ್ರವಿಸುವಿಕೆ ಇರಲಿಲ್ಲ. ಇನ್ನೊಂದು ಕಡೆಯಲ್ಲಿ ಸ್ತ್ರೀ ಹಾರ್ಮೋನ್ ಗಳ ಅಭಿವೃದ್ಧಿ ಆಗಿರುವುದರಿಂದ ಆಕೆಯು ಬಾಹ್ಯವಾಗಿ ನೋಡುವುದಕ್ಕೆ ಮಹಿಳೆಯ ಲಕ್ಷಣಗಳು ಗೋಚರಿಸುವಂತೆ ಮಾಡಿತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

   ಮಹಿಳೆಯು ತನ್ನ ಪರಿಸ್ಥಿತಿ ಬಗ್ಗೆ ಹೇಳುವುದೇನು?

   ಮಹಿಳೆಯು ತನ್ನ ಪರಿಸ್ಥಿತಿ ಬಗ್ಗೆ ಹೇಳುವುದೇನು?

   ಕಳೆದ 30 ವರ್ಷಗಳಿಂದ ಮಹಿಳೆಯಾಗಿ ಬೆಳೆದ ಪುರುಷನಿಗೆ 9 ವರ್ಷಗಳ ಹಿಂದೆ ಈಗಾಗಲೇ ಮತ್ತೊಬ್ಬ ಪುರುಷನ ಜೊತೆಗೆ ವಿವಾಹವೂ ಆಗಿದೆ. ದಂಪತಿಯು ಸಾಕಷ್ಟು ಬಾರಿ ಮಗುವನ್ನು ಹೊಂದಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ. ಇನ್ನು, ರೋಗಿಯ ಇಬ್ಬರು ತಾಯಂದಿರರಿಗೆ ಈ ಹಿಂದೆ 'ಆಂಡ್ರೊಜೆನ್ ಸೆನ್ಸಿಟಿವಿಟಿ ಸಿಂಡ್ರೋಮ್' ಇರುವುದು ಪತ್ತೆಯಾಗಿದೆ. "ಇದು ಬಹುಶಃ ವಂಶವಾಹಿಗಳಲ್ಲಿ ಇರಬಹುದು. ತಾಯಿ ಕಡೆಯಿಂದ ಬಂದ ಇಬ್ಬರು ಅತ್ತೆಯರು ಸಹ ಇದೇ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ" ಎಂದು ಅಂಕೊಲಾಜಿಸ್ಟ್ ತಿಳಿಸಿದ್ದಾರೆ.

   ಆಂಡ್ರೊಜೆನ್ ಇನ್ಸೆನ್ಸಿಟಿವಿಟಿ ಸಿಂಡ್ರೋಮ್ ಎಂಬುದರ ಅರ್ಥ

   ಆಂಡ್ರೊಜೆನ್ ಇನ್ಸೆನ್ಸಿಟಿವಿಟಿ ಸಿಂಡ್ರೋಮ್ ಎಂಬುದರ ಅರ್ಥ

   ಆಂಡ್ರೊಜೆನ್ ಇನ್ಸೆನ್ಸಿಟಿವಿಟಿ ಸಿಂಡ್ರೋಮ್ ಎನ್ನುವುದು ಜನನದ ಮೊದಲು ಮತ್ತು ಪ್ರೌಢಾವಸ್ಥೆಯ ಸಮಯದಲ್ಲಿ ಲೈಂಗಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಜನರು ತಳೀಯವಾಗಿ ಪುರುಷರಾಗಿದ್ದಾರೆ. ಪ್ರತಿ ಕೋಶದಲ್ಲಿ ಒಂದು ಎಕ್ಸ್ ಕ್ರೋಮೋಸೋಮ್ ಮತ್ತು ಒಂದು ವೈ ಕ್ರೋಮೋಸೋಮ್ ಇರುತ್ತದೆ. ಅವರ ದೇಹವು ಕೆಲವು ಪುರುಷ ಲೈಂಗಿಕ ಹಾರ್ಮೋನುಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದ ಹಿನ್ನೆಲೆ ಅವರು ಹೆಚ್ಚಾಗಿ ಸ್ತ್ರೀ ಬಾಹ್ಯ ಲೈಂಗಿಕ ಗುಣಲಕ್ಷಣಗಳನ್ನು ಹೊಂದಿರಬಹುದು. ಅಥವಾ ಪುರುಷರು ಸ್ತ್ರೀಯರ ಲೈಂಗಿಕ ಬೆಳವಣಿಗೆಯ ಚಿಹ್ನೆಗಳನ್ನು ಹೊಂದಿರಬಹುದು.

   English summary
   Kolakata: The 30-Year-Old Woman Was Under Treatment For Abdominal Pain, During Which Doctors Discovered That She Was A 'Man' Suffering From Testicular Cancer.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more