ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮ ಕೊಟ್ಟ ತಾಯಿ

|
Google Oneindia Kannada News

ಕೊಲ್ಕತ್ತ, ಫೆಬ್ರವರಿ 4: ವಿಮಾನದಲ್ಲೇ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಕೊಲ್ಕತ್ತದಲ್ಲಿ ನಡೆದಿದೆ.

ದೋಹಾದಿಂದ ಬ್ಯಾಂಕಾಕ್​ಗೆ ತೆರಳುತ್ತಿದ್ದ ವಿಮಾನದಲ್ಲಿ ಥೈಲೆಂಡ್‌ನಿಂದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯದಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ವಿಮಾನವು ಇಂದು ಮುಂಜಾನೆ ಕೊಲ್ಕತ್ತದಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ಮಾಹಿತಿ ಲಭಿಸಿದೆ.

ಏರ್‌ಪೋರ್ಟ್‌ ಬದಲು ನೇರವಾಗಿ ರಸ್ತೆಗಿಳಿದ ಇರಾನ್ ವಿಮಾನಏರ್‌ಪೋರ್ಟ್‌ ಬದಲು ನೇರವಾಗಿ ರಸ್ತೆಗಿಳಿದ ಇರಾನ್ ವಿಮಾನ

ವಿಮಾನದ ಸಿಬ್ಬಂದಿಗಳ ಸಹಾಯದಿಂದಾಗಿ ವಿಮಾನದಲ್ಲಿಯೇ ಹೆರಿಗೆಯಾಗಿದೆ. ಇಂದು ಮುಂಜಾನೆ 3 ಗಂಟೆಯ ಸಮಯಕ್ಕೆ ಕೊಲ್ಕತ್ತದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ತಾಯಿ-ಮಗುವನ್ನು ಕೊಲ್ಕತ್ತದ ಆಸ್ಪತ್ರೆಗೆ ದಾಖಲಿಸಲಾಗಿದೆ.

Woman Delivers Baby Mid Air

ದೋಹಾದಿಂದ ಬ್ಯಾಂಕಾಕ್​ಗೆ ತೆರಳುತ್ತಿದ್ದಕ್ಯೂಆರ್​-830 ವಿಮಾನವು ಇಂದು ಮುಂಜಾನೆ 3.09ಕ್ಕೆ ಕೊಲ್ಕತ್ತ ವಿಮಾನ ನಿಲ್ದಾಣದ ವೈದ್ಯಕೀಯ ಆದ್ಯತೆಯ ಲ್ಯಾಂಡಿಂಗ್​ನಲ್ಲಿ ಇಳಿದಿದೆ. ವೈದ್ಯಕೀಯ ಆದ್ಯತೆಯ ಲ್ಯಾಂಡಿಂಗ್​ಗಾಗಿ ಪೈಲೆಟ್​ ಎಸ್​ಒಎಸ್​ ಅನ್ನು ಕೇಳಿದ್ದರು. ತಾಯಿ ಮಗು ಸುರಕ್ಷಿತವಾಗಿದ್ದಾರೆ.

English summary
A woman from Thailand on board a flight from Doha to Bangkok went into labour today and delivered a baby mid-air, forcing the plane to make an emergency landing in Kolkata, West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X