ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕರು ಸ್ಥಾನ ತ್ಯಜಿಸಲು ಸಿದ್ಧವಿದ್ದಾರಾ?; ಮತ್ತೊಂದು ಸವಾಲು ಹಾಕಿದ ಪ್ರಶಾಂತ್ ಕಿಶೋರ್

|
Google Oneindia Kannada News

ಕೋಲ್ಕತ್ತಾ, ಡಿಸೆಂಬರ್ 22: ಮುಂದಿನ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎರಡಂಕಿ ಸೀಟು ಗಿಟ್ಟಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಾಗಿದ್ದೇ ಆದರೆ ನಾನು ಟ್ವಿಟ್ಟರ್ ಖಾತೆ ತ್ಯಜಿಸುತ್ತೇನೆ ಎಂದು ಸವಾಲು ಹಾಕಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಈಗ ಬಿಜೆಪಿ ನಾಯಕರಿಗೆ ಮತ್ತೊಂದು ಸವಾಲು ಹಾಕಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ 200 ಸೀಟುಗಳನ್ನು ಪಡೆಯಲು ವಿಫಲವಾದರೆ ಬಿಜೆಪಿ ನಾಯಕರು ತಮ್ಮ ಸ್ಥಾನ ತ್ಯಜಿಸಲು ಸಿದ್ಧವಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿ ನಂತರ ಟಿಎಂಸಿ-ಬಿಜೆಪಿ ನಡುವೆ ವಾಗ್ದಾಳಿ ಮುಂದುವರೆದಿದ್ದು, ಪ್ರಶಾಂತ್ ಕಿಶೋರ್ ಈ ಹೊಸ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ಓದಿ...

"ಎರಡಂಕಿ ದಾಟಲೂ ಒದ್ದಾಡಬೇಕಿದೆ"

ಬಿಜೆಪಿಗೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎರಡಂಕಿ ಸೀಟುಗಳನ್ನು ಪಡೆಯಲೂ ಕಷ್ಟವಿದೆ. ಹತ್ತು ಸ್ಥಾನ ಪಡೆಯುವುದೂ ಅನುಮಾನ ಎಂದು ಸೋಮವಾರ ಪ್ರಶಾಂತ್ ಹೇಳಿಕೆ ನೀಡಿದ್ದರು. ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಗೃಹ ಸಚಿವ ಅಮಿತ್ ಶಾ, ಪ.ಬಂಗಾಳದಲ್ಲಿ ತಾವು 294 ಸ್ಥಾನಗಳ ಪೈಕಿ 200 ಸೀಟುಗಳನ್ನು ಪಡೆದು ಗೆಲ್ಲುವುದು ಖಚಿತ ಎಂದು ಹೇಳಿಕೆ ನೀಡಿದ್ದು, ಪ್ರಶಾಂತ್ ಈ ಹೇಳಿಕೆಗೆ ತಿರುಗೇಟು ನೀಡಿದ್ದರು.

ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದರೂ ಟ್ವಿಟ್ಟರ್ ತ್ಯಜಿಸುತ್ತೇನೆ: ಪ್ರಶಾಂತ್ ಕಿಶೋರ್ ಶಪಥಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದರೂ ಟ್ವಿಟ್ಟರ್ ತ್ಯಜಿಸುತ್ತೇನೆ: ಪ್ರಶಾಂತ್ ಕಿಶೋರ್ ಶಪಥ

"ನನ್ನ ಸ್ಥಾನ ತ್ಯಜಿಸಲು ಸಿದ್ಧ"

ಮುಂದಿನ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ತಂತ್ರ ರೂಪಿಸುತ್ತಿರುವ ಪ್ರಶಾಂತ್ ಕಿಶೋರ್, "ನನ್ನ ಪ್ರಕಾರ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ನೂರಕ್ಕಿಂತ ಕಡಿಮೆ ಸೀಟುಗಳು ಲಭಿಸುತ್ತವೆ. 200 ಸ್ಥಾನ ಪಡೆದಿದ್ದೇ ಆದರೆ ಖಂಡಿತ ನಾನು ನನ್ನ ಸ್ಥಾನವನ್ನು ತ್ಯಜಿಸುತ್ತೇನೆ" ಎಂದು ಸವಾಲು ಹಾಕಿದ್ದರು.

"ನನ್ನ ಊಹೆ ಬಗ್ಗೆ ಎರಡು ಮಾತಿಲ್ಲ"

ಪ.ಬಂಗಾಳ ಚುನಾವಣೆ, ರಾಜಕೀಯದ ಕುರಿತು ನನ್ನ ಊಹೆ ತಪ್ಪಾಗಿದ್ದೇ ಆದರೆ, ನನ್ನ ಊಹೆಗಿಂತ ಹೆಚ್ಚಿಗೆ ಸ್ಥಾನವನ್ನು ಕೇಸರಿ ಪಕ್ಷ ಪಡೆದಿದ್ದೇ ಆದರೆ, ನಾನು ನನ್ನ ಸ್ಥಾನವನ್ನು ತ್ಯಜಿಸುತ್ತೇನೆ. ಅದರಲ್ಲಿ ಎರಡು ಮಾತೇ ಇಲ್ಲ" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಬಂಗಾಳ ಮಣ್ಣಿನ ಮಗನೇ ಸಿಎಂ ಆಗ್ತಾರೆ: ಮಮತಾ ಬ್ಯಾನರ್ಜಿಗೆ ಅಮಿತ್ ಶಾ ಸವಾಲುಬಂಗಾಳ ಮಣ್ಣಿನ ಮಗನೇ ಸಿಎಂ ಆಗ್ತಾರೆ: ಮಮತಾ ಬ್ಯಾನರ್ಜಿಗೆ ಅಮಿತ್ ಶಾ ಸವಾಲು

"ಚುನಾವಣಾ ತಂತ್ರಗಾರನನ್ನು ದೇಶ ಕಳೆದುಕೊಳ್ಳಲಿದೆ"

ಪ್ರಶಾಂತ್ ಸವಾಲಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, "ಮುಂದಿನ ಪಶ್ಚಿಮ ಬಂಗಾಳ ಚುನಾವಣೆ ನಂತರ ದೇಶವು ಒಬ್ಬ ಚುನಾವಣಾ ತಂತ್ರಗಾರನನ್ನು ಕಳೆದುಕೊಳ್ಳುವುದು ಖಚಿತ" ಎಂದು ತಿರುಗೇಟು ನೀಡಿದ್ದಾರೆ. ಈಗ ಪ.ಬಂಗಾಳದಲ್ಲಿ ಬಿಜೆಪಿ ಸುನಾಮಿ ಇದೆ. ಒಮ್ಮೆ ಬಿಜೆಪಿ ಸರ್ಕಾರ ರಚನೆಯಾದರೆ, ಚುನಾವಣಾ ತಂತ್ರಗಾರನನ್ನು ದೇಶ ಕಳೆದುಕೊಳ್ಳಲಿದೆ" ಎಂದಿದ್ದಾರೆ.

English summary
Election strategist Prashant Kishor on Tuesday challenged BJP leaders that will they quit their positions if the party failed to get 200 seats in west bengal election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X