ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳ ಚುನಾವಣೆಯ ಗೆದ್ದ ಚಂದನಾ ಆಸ್ತಿ ಕೇವಲ 30 ಸಾವಿರ ರೂ.!

|
Google Oneindia Kannada News

ಕೋಲ್ಕತ್ತ, ಮೇ 03; ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 210 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದೆ. ರಾಜ್ಯದಲ್ಲಿ ಪಕ್ಷ 3ನೇ ಬಾರಿಗೆ ಸರ್ಕಾರವನ್ನು ರಚನೆ ಮಾಡಲಿದೆ. ಬಿಜೆಪಿ 77 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಜ್ಯದ ಸಾಲ್ಟೋರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ ಸುಮಾರು 4145 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿದ್ದಾರೆ. ಚಂದನಾ ಅವರ ಪತಿ ಸೃಬನ್ ದಿನಗೂಲಿ ನೌಕರರಾಗಿದ್ದು, ದಂಪತಿಗಳು ಉದ್ಯೋಗ ಖಾತ್ರಿ ಯೋಜನೆಯ ಕಾರ್ಡ್ ಸಹ ಹೊಂದಿದ್ದಾರೆ.

ನಂದಿಗ್ರಾಮ; ಮರು ಮತ ಎಣಿಕೆ ಬೇಡಿಕೆ ತಳ್ಳಿ ಹಾಕಿದ ಆಯೋಗ ನಂದಿಗ್ರಾಮ; ಮರು ಮತ ಎಣಿಕೆ ಬೇಡಿಕೆ ತಳ್ಳಿ ಹಾಕಿದ ಆಯೋಗ

30 ವರ್ಷದ ಚಂದನಾ ಬೌರಿ ಅವರು ಮೂರು ಮಕ್ಕಳ ತಾಯಿ. ಅವರ ಆಸ್ತಿ 30,311 ರೂ.ಗಳಾಗಿದೆ. ಮೂರು ಆಡು, ಮೂರು ಹಸುಗಳು ಮತ್ತು ಒಂದು ಗುಡಿಸಲನ್ನು ಚಂದನಾ ಅವರು ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಿದ್ದು, ಗೆದ್ದು ಬಂದಿದ್ದಾರೆ.

ಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿ

Wife Of A Daily Wage Worker Now BJP MLA From Saltora

ಚಂದನಾ ಪತಿ ಸೃಬನ್ ದಿನಗೂಲಿ ಕಾರ್ಮಿಕರು. ಮಳೆಗಾಲದಲ್ಲಿ ಚಂದನಾ ಸಹ ಪತಿಯ ಜೊತೆ ಕೆಲಸಕ್ಕೆ ಹೋಗುತ್ತಾರೆ. ದಂಪತಿಗಳು ಉದ್ಯೋಗ ಖಾತ್ರಿ ಯೋಜನೆಯ ಕಾರ್ಡ್‌ ಸಹ ಹೊಂದಿದ್ದಾರೆ. ಚಂದನಾ ಅವರು ಚುನಾವಣೆ ಗೆದ್ದ ಬಗ್ಗೆ ಸಾಮಾಜಿಕ ತಾಲತಾಣದಲ್ಲಿ ಹಲವಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಂದಿಗ್ರಾಮದಲ್ಲಿ ಸೋಲೊಪ್ಪಿಕೊಂಡ್ರು, ಬಂಗಾಳ ಗೆದ್ದ ಮಮತಾ ನಂದಿಗ್ರಾಮದಲ್ಲಿ ಸೋಲೊಪ್ಪಿಕೊಂಡ್ರು, ಬಂಗಾಳ ಗೆದ್ದ ಮಮತಾ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ಪ್ರಯತ್ನ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಲವಾರು ಸಮಾವೇಶಗಳನ್ನು ನಡೆಸಿ ಮತಬೇಟೆ ನಡೆಸಿದ್ದರು. ಆದರೆ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.

ಟಿಎಂಸಿ 210 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ.

Recommended Video

KR ಮಾರುಕಟ್ಟೆಯನ್ನ ಬಂದ್ ಮಾಡಿದ ಪೊಲೀಸರು! | Oneindia Kannada

English summary
30 year old Chandana Bauri won in Saltora seat as BJP candidate. Chandana asset just 30,311 and she is a wife of daily wage worker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X