ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ದ ಮಮತಾ ದೀದಿಗೆ ಈ ಪರಿ ಸಿಟ್ಟು, ಭಯ ಇದೇ ಕಾರಣಕ್ಕಾ?

|
Google Oneindia Kannada News

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವನ್ನು 'ದಂಗೆ ಬಾಬು' ಎಂದು ಲೇವಡಿ ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟೀಕಾ ಪ್ರಹಾರ 2019ರ ಚುನಾವಣೆಯ ಹೊತ್ತಿಗೆ ಗಡಿದಾಟಿ ಬಂದು ನಿಂತಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಬಾರಿಯ ಚುನಾವಣೆ ಹಿಂದಿನಂತಲ್ಲ ಎನ್ನುವ ಸ್ಪಷ್ಟ ರಾಜಕೀಯ ಚಿತ್ರಣವಿರುವ ಈ ಹೊತ್ತಿನಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಂಗಾಳದ ಕೆಲವೊಂದು ಭಾಗಗಳಲ್ಲಿ ಟಿಎಂಸಿ ಧೂಳೀಪಟವಾಗಿ, ಕಮಲ ಅರಳಿದ್ದು, ಮಮತಾ ರಾಜಕೀಯ ತಂತ್ರಗಾರಿಕೆಯನ್ನೇ ಬದಲಾಯಿಸಬೇಕಾಗಿ ಬಂದಿತ್ತು.

ಮುಂದಿನ ಭಾನುವಾರ (ಮೇ 19) ಕೊನೆಯ ಹಂತದಲ್ಲಿ ಪಶ್ಚಿಮ ಬಂಗಾಳದ ಒಂಬತ್ತು ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಅಲ್ಲಿಗೆ, ಪಶ್ಚಿಮ ಬಂಗಾಳ ಇದುವರೆಗೆ ಕಂಡುಕೇಳರಿಯದ ಟಿಎಂಸಿ-ಬಿಜೆಪಿ ಮೇಲಾಟಕ್ಕೆ ಒಂದು ಹಂತದ ತೆರೆಬೀಳಲಿದೆ. 42 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಬಂಗಾಳದಲ್ಲಿ ಕಳೆದ ಬಾರಿ ಟಿಎಂಸಿ 34 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.

ಮಹಾಘಟಬಂಧನಕ್ಕೆ ಭಾರೀ ಮುಖಭಂಗ: ಸಭೆಗೆ ಗೈರಾಗಲು ದೀದಿ, ಮಾಯ ನಿರ್ಧಾರ ಮಹಾಘಟಬಂಧನಕ್ಕೆ ಭಾರೀ ಮುಖಭಂಗ: ಸಭೆಗೆ ಗೈರಾಗಲು ದೀದಿ, ಮಾಯ ನಿರ್ಧಾರ

ಹೇಗೆ, ಉತ್ತರಪ್ರದೇಶದಲ್ಲಿ ಕಳೆದ ಚುನಾವಣೆಯ ಸಾಧನೆಯನ್ನು ಪುನರಾವರ್ತನೆ ಮಾಡಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆಯೋ, ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಕೂಡಾ. ಈ ವಿಚಾರ, ಮಮತಾ ಬ್ಯಾನರ್ಜಿಗೆ ಚಿಂತೆಯ ವಿಷಯವಾಗಿದ್ದರೆ, ಇನ್ನೊಂದೆಡೆ ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ನೆಲೆಯನ್ನು ಹೊಂದಿರುವ ಕಮ್ಯೂನಿಸ್ಟರ ನಿಷ್ಠೆ ಬಿಜೆಪಿಯತ್ತ ಸಾಗುತ್ತಿರುವುದು.

ಟಿಎಂಸಿಗೆ ನೇರ ಪ್ರತಿಸ್ಪರ್ಧಿಯಾಗಿದ್ದದ್ದು ಸಿಪಿಐ/ಸಿಪಿಐ(ಎಂ)/ ಫಾರ್ವರ್ಡ್ ಬ್ಲಾಕ್

ಟಿಎಂಸಿಗೆ ನೇರ ಪ್ರತಿಸ್ಪರ್ಧಿಯಾಗಿದ್ದದ್ದು ಸಿಪಿಐ/ಸಿಪಿಐ(ಎಂ)/ ಫಾರ್ವರ್ಡ್ ಬ್ಲಾಕ್

ಬಂಗಾಳದ ಎಲ್ಲಾ 42ಕ್ಷೇತ್ರಗಳಲ್ಲಿ ಮಮತಾ ಬ್ಯಾನರ್ಜಿ ಪ್ರಾಬಲ್ಯವನ್ನು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಾರು 32ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಎಂಸಿಗೆ ನೇರ ಪ್ರತಿಸ್ಪರ್ಧಿಯಾಗಿದ್ದದ್ದು ಸಿಪಿಐ/ಸಿಪಿಐ(ಎಂ)/ ಫಾರ್ವರ್ಡ್ ಬ್ಲಾಕ್, ಮಿಕ್ಕ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಹುತೇಕ ಕಡೆ ಟಿಎಂಸಿ ಮತ್ತು ಬಿಜೆಪಿಯ ನಡುವೆ ನೇರ ಸ್ಪರ್ಧೆ, ಕಮ್ಯೂನಿಸ್ಟರು ಹಿಡಿತ ಕಮ್ಮಿಯಾಗುತ್ತಾ ಸಾಗುತ್ತಿರುವುದಕ್ಕೆ ಇದೊಂದು ಉದಾಹರಣೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಕೇವಲ ಎರಡು ಸ್ಥಾನಗೆಲ್ಲಲು ಶಕ್ತವಾಗಿತ್ತು.

'ಬಂಗಾಳದ 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಹಿಂಪಡೆಯುತ್ತೇನೆ, ಆದರೆ...': ದೀದಿ 'ಬಂಗಾಳದ 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಹಿಂಪಡೆಯುತ್ತೇನೆ, ಆದರೆ...': ದೀದಿ

ಸಿಪಿಐಎಂ ಕಾರ್ಯಕರ್ತರ ಮತ್ತು ಮುಖಂಡರ ನಿಷ್ಠೆ ಬಿಜೆಪಿಯತ್ತ

ಸಿಪಿಐಎಂ ಕಾರ್ಯಕರ್ತರ ಮತ್ತು ಮುಖಂಡರ ನಿಷ್ಠೆ ಬಿಜೆಪಿಯತ್ತ

ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಸಿಪಿಐಎಂ ಕಾರ್ಯಕರ್ತರ ಮತ್ತು ಮುಖಂಡರ ನಿಷ್ಠೆ ಬಿಜೆಪಿಯತ್ತ ಸಾಗಿರುವುದು, ಟಿಎಂಸಿಗೆ ನುಂಗಲಾರದ ತುತ್ತಾಗಿದೆ. ದೀದಿ ಆಡಳಿತದಲ್ಲಿ ಸರಕಾರದ ಸೌಲಭ್ಯ ಸಿಗದೇ ಇರುವ ಬಡಮತದಾರರು ಮಮತಾ ವಿರುದ್ದ ಸಿಟ್ಟನ್ನು ಹೊಂದಿದ್ದಾರೆ. ಇದೇ ಭಾನುವಾರ ನಡೆಯಲಿರುವ ಒಂಬತ್ತಕ್ಕೆ ಒಂಬತ್ತೂ ಕ್ಷೇತ್ರದಲ್ಲಿ ಕಳೆದ ಬಾರಿ ಟಿಎಂಸಿ ಜಯಸಾಧಿಸಿತ್ತು. ಆದರೆ, ಈ ಬಾರಿ ಬಿಜೆಪಿಯಿಂದ ತೀವ್ರ ಪೈಪೋಟಿ ಮಮತಾಗೆ ಎದುರಾಗುತ್ತಿದೆ.

ಸ್ಥಳೀಯ ಸಂಸ್ಥೆ (ಪುರುಲಿಯಾ, ಪಶ್ಚಿಮ ಮಿಡ್ನಾಪುರ, ಜಾರ್ಗಮ್) ಚುನಾವಣೆ

ಸ್ಥಳೀಯ ಸಂಸ್ಥೆ (ಪುರುಲಿಯಾ, ಪಶ್ಚಿಮ ಮಿಡ್ನಾಪುರ, ಜಾರ್ಗಮ್) ಚುನಾವಣೆ

ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ (ಪುರುಲಿಯಾ, ಪಶ್ಚಿಮ ಮಿಡ್ನಾಪುರ, ಜಾರ್ಗಮ್) ಚುನಾವಣೆಯಲ್ಲಿ ಬಿಜೆಪಿ ಗಣನೀಯ ಸಾಧನೆಯನ್ನು ಮಾಡಿತ್ತು. ಜೊತೆಗೆ, ವಲಸೆ ಹಿಂದೂಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಬಿಜಿಪಿ ಮಾಡುತ್ತಿದೆ. ಇದಲ್ಲದೇ, ಸಂಘ ಪರಿವಾರದ ಬೆಂಬಲ, ಪಕ್ಷಕ್ಕಿರುವ ಆರ್ಥಿಕ ಬಲ, ಸಾಮಾಜಿಕ ಜಾಲತಾಣದ ಟೀಂ, ಇವೆಲ್ಲವೂ ಬಿಜೆಪಿಗೆ ಕೆಲವು ಕ್ಷೇತ್ರಗಳಲ್ಲಿ ಪೂರಕವಾಗಿ ವರ್ಕೌಟ್ ಆಗಬಹುದು ಎನ್ನುವುದು ಪಕ್ಷದ ಲೆಕ್ಕಾಚಾರ.

34ವರ್ಷಗಳಲ್ಲಿ ಏಕಚಕ್ರಾಧಿಪತಿ ರೀತಿಯಲ್ಲಿ ಆಡಳಿತ ನಡೆಸಿದ ಕಮ್ಯೂನಿಸ್ಟರು

34ವರ್ಷಗಳಲ್ಲಿ ಏಕಚಕ್ರಾಧಿಪತಿ ರೀತಿಯಲ್ಲಿ ಆಡಳಿತ ನಡೆಸಿದ ಕಮ್ಯೂನಿಸ್ಟರು

34ವರ್ಷಗಳಲ್ಲಿ ಏಕಚಕ್ರಾಧಿಪತಿ (1977-2011) ರೀತಿಯಲ್ಲಿ ಆಡಳಿತ ನಡೆಸಿದ ಕಮ್ಯೂನಿಸ್ಟರು ಅದರಲ್ಲೂ ಪ್ರಮುಖವಾಗಿ ಸಿಪಿಐ(ಎಂ), ಈ ಬಾರಿಯ ಚುನಾವಣೆಯಲ್ಲಿ ನೆಲೆಕಂಡುಕೊಳ್ಳಲು ಹರಸಾಹಸ ಪಡುತ್ತಿರುವುದು ಪಶ್ಚಿಮ ಬಂಗಾಳದ ಬದಲಾದ ರಾಜಕೀಯದ ಚಿತ್ರಣ. ಹೀಗಾಗಿಯೇ, ಸಿಪಿಐ, ಸಿಪಿಐಎಂ ಕ್ಯಾಡರ್ಸ್ ಗಳು ಬಿಜೆಪಿಯತ್ತು ವಾಲಿರುವುದು. ಹಾಗಾಗಿ, ಇದರ ಲಾಭ ಬಿಜೆಪಿಗೆ ಆಗಲಿದೆ ಎನ್ನುವ ಭಯ ಟಿಎಂಸಿಗೆ ಕಾಡುತ್ತಿದೆ.

ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿಯ ವೋಟ್ ಶೇರ್ ಶೇ.17.06 ಇಂದ ಶೇ.24ಕ್ಕೆ

ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿಯ ವೋಟ್ ಶೇರ್ ಶೇ.17.06 ಇಂದ ಶೇ.24ಕ್ಕೆ

ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿಯ ವೋಟ್ ಶೇರ್ ಶೇ.17.06 ಇಂದ ಶೇ.24ಕ್ಕೆ ಏರುವ ಸಾಧ್ಯತೆಯಿದೆ. ಉತ್ತರ ಪಶ್ಚಿಮ ಬಂಗಾಳ, 24ಪರಗಣ ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುವ ಸಾಧ್ಯತೆಯಿದೆ. ಬಿಜೆಪಿ ಎಂಟರಿಂದ ಹನ್ನೆರಡು ಸ್ಥಾನವನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ರಾಜ್ಯದ ಕೆಲವೊಂದು ಭಾಗಗಳಲ್ಲಿ ಕಮ್ಯೂನಿಸ್ಟ್ ಮತಬ್ಯಾಂಕ್ ಬಿಜೆಪಿಯತ್ತ ತಿರುಗಿರುವುದು ಟಿಎಂಸಿಗಾಗುತ್ತಿರುವ ಹಿನ್ನಡೆ.

English summary
Loksabha elections 2019: Why West Bengal CM Mamata Banerjee so angry and fear on PM Modi led BJP, is this CPI, CPI(M) caders support moved to BJP?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X