ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರು ಬಂಗಾಳ ತೊರೆಯಲ್ಲ ಏಕೆ? ಕಾರಣ ಹೇಳಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೊಲ್ಕತ್ತಾ, ಜುಲೈ 8: 'ಯಾವ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳ ಬಿಟ್ಟು ಹೋಗುವುದಿಲ್ಲ. ಏಕಂದರೆ ಜನರ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ' ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

''ಶೇಕಡಾ ನೂರರಷ್ಟು ಉಚಿತ ಪಡಿತರ ನೀಡುವ ಯಾವುದಾದರೂ ಒಂದು ರಾಜ್ಯವಿದ್ದರೆ ತೋರಿಸಿ'' ಎಂದು ಸವಾಲು ಹಾಕಿರುವ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ಜೂನ್ 2021ರವರೆಗೆ ಉಚಿತ ಅಕ್ಕಿ:ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳದಲ್ಲಿ ಬಡವರಿಗೆ ಜೂನ್ 2021ರವರೆಗೆ ಉಚಿತ ಅಕ್ಕಿ:ಮಮತಾ ಬ್ಯಾನರ್ಜಿ

''ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೇಂದ್ರ ಶೇಕಡಾ 40ರಷ್ಟು ಮಾತ್ರ ಸಹಾಯ ಮಾಡಿ ಪೂರ್ತಿ ಪ್ರಶಂಸೆ ಪಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರದ ಸ್ವಾಸ್ಥಾ ಸತ್ಯ ಯೋಜನೆ ಜನರಿಗೆ ಶೇಕಡಾ 100 ರಷ್ಟು ಸಹಾಯ ನೀಡುತ್ತಿದೆ'' ಎಂದು ಕೇಂದ್ರದ ಯೋಜನೆಯನ್ನು ಟೀಕಿಸಿದ್ದಾರೆ.

''ದಕ್ಷಿಣ ಕೊಲ್ಕತ್ತಾದ ಬಿಜೆಪಿ ಅಧ್ಯಕ್ಷ ಹಾಗೂ ಆತನ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ, ಸಹಾಯ ಬೇಡಿದರೂ ಬಿಜೆಪಿ ಕಚೇರಿ ಸಹಾಯ ಮಾಡಿಲ್ಲ. ನಾನು ಆ ಬಗ್ಗೆ ಕ್ರಮ ಜವಾಬ್ದಾರಿ ತೆಗೆದುಕೊಂಡು ಆಸ್ಪತ್ರೆಗೆ ಸೇರಿಸಿದ್ದೇನೆ'' ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Why No Migrant Labour Left West Bengal Mamata Banerjee Reveals Reason

ಪಶ್ಚಿಮ ಬಂಗಾಳದಲ್ಲಿ ಈವರೆಗೂ 23,837 ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 15,790 ಜನರು ಚೇತರಿಸಿಕೊಂಡಿದ್ದಾರೆ. 7,243 ಮಂದಿಗೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 804 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ವೈರಸ್ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಸಹ ಎದುರಾಗಿತ್ತು. ಈ ಎರಡು ಸಮಸ್ಯೆಯನ್ನು ಏಕಕಾಲದಲ್ಲಿ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂಫಾನ್ ಚಂಡಮಾರುತ ಪರಿಹಾರ ವಿಚಾರದಲ್ಲೂ ಕೇಂದ್ರದ ವಿರುದ್ಧ ಮಮತಾ ಬೇಸರ ವ್ಯಕ್ತಪಡಿಸಿದ್ದರು.

English summary
No migrant labour left West Bengal. Why? Because we care for people. Show me any state that gives 100% free ration for a year - Mamata banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X