ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ತಂಟೆಗೆ ಬಂದ್ರೆ ಮುಗಿಸಿಬಿಡ್ತೀವಿ!' ಹೂಂಕರಿಸಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಜೂನ್ 06: "ನಮ್ಮ ತಂಟೆಗೆ ಯಾರಾದರೂ ಬಂದರೆ ಅವರನ್ನು ನಾಶ ಮಾಡಿಬಿಡುವೆವು" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೂಂಕರಿಸಿದ್ದಾರೆ.

ಇತ್ತಿವೆಗೆ ಶಾಪ ಹಾಕುವ, ಗುಡುಗುವ, ಅಸಹನೆಯಿಂದ ವರ್ತಿಸುವುದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರ ರಾಜಕೀಯ ಬದುಕಿಗೆ ಅವರ ಇಂಥ ಹೇಳಿಕೆಗಳೇ ಬಹುದೊಡ್ಡ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇಲ್ಲದಿದ್ದರೆ ಹೇಗೆ? ಪೇಜಾವರ ಶ್ರೀಗಳ ಪ್ರಶ್ನೆಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇಲ್ಲದಿದ್ದರೆ ಹೇಗೆ? ಪೇಜಾವರ ಶ್ರೀಗಳ ಪ್ರಶ್ನೆ

ಈದ್ ಆಚರಣೆಯ ಸಮಯದಲ್ಲಿ ಅಂದರೆ, ಹಬ್ಬದ ಸಮಯದಲ್ಲಿ ಇಂಥ ಮಾತುಗಳನ್ನಾಡಿದ ಮಮತಾ ಬ್ಯಾನರ್ಜಿ ಅವರ ನಡೆ ತೀವ್ರ ಟೀಕೆಗೆ ಗುರಿಯಾಗಿದೆ. "ನಮ್ಮ ತಂಟೆಗೆ ಬಂದ್ರೆ ಅಂಥವರನ್ನು ನಾಶ ಮಾಡ್ತೀವಿ. ಅದೇ ನಮ್ಮ ಘೋಷವಾಕ್ಯ" ಎನ್ನುವ ಮೂಲಕ ಧಮಕಿ ಹಾಕುವ ಧಾಟಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿರುವುದು ಅವರ ಹುದ್ದೆಗೆ ಶ್ರೇಯಸ್ಕರವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಮಮತಾ ಬ್ಯಾನರ್ಜಿ ಹೇಳಿದ್ದೇನು?

"ಹಿಂದುಗಳು ತ್ಯಾಗಕ್ಕೆ ಹೆಸರಾದವರು, ಮುಸ್ಲಿಮರು ಸಮಗ್ರತೆಗೆ ಹೆಸರಾದವರು, ಕ್ರೈಸ್ತರು ಪ್ರೀತಿ, ಸಿಕ್ಖರು ಬಲಿದಾನಕ್ಕೆ ಹೆಸರಾದವರು. ಇದು ನಮ್ಮ ಹಿಂದುಸ್ಥಾನ, ನಾವು ಅದನ್ನು ಕಾಪಾಡುತ್ತೇವೆ. ಯಾರಾದರೂ ನಮ್ಮ ತಂಟೆಗೆ ಬಂದರೆ ಅಂಥವರನ್ನು ನಾಶ ಮಾಡುತ್ತೇವೆ. ಇದೇ ನಮ್ಮ ಘೋಷ ವಾಕ್ಯ" - ಮಮತಾ ಬ್ಯಾನರ್ಜಿ

ನಿದ್ದೆ ಕೆಡಿಸಿದ ಜೈ ಶ್ರೀರಾಮ್

ನಿದ್ದೆ ಕೆಡಿಸಿದ ಜೈ ಶ್ರೀರಾಮ್

ಇತ್ತೀಚೆಗಷ್ಟೇ ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕೆಲವರು ರಸ್ತೆಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿ ಕಾರಿನಿಂದ ಇಳಿದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಅವರೆಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಇದಾದ ನಂತರ ಬಹುಸಂಖ್ಯಾತ ಹಿಂದುಗಳ ಕೆಂಗಣ್ಣಿಗೆ ಮಮತಾ ಬ್ಯಾನರ್ಜಿ ಗುರಿಯಾಗಿದ್ದು, ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಜೈ ಶ್ರೀರಾಮ್ ಒಕ್ಕಣೆಯ ಹತ್ತು ಲಕ್ಷ ಪತ್ರಗಳನ್ನು ಕಳಿಸುವ ಅಭಿಯಾನ ನಡೆಯುತ್ತಿದೆ!

ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ! ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ!

ಬಿಜೆಪಿ ಕಚೇರಿಗೆ ನುಗ್ಗಿ ಟಿಎಂಸಿ ಚಿನ್ಹೆ ಬಿಡಿಸಿ...

ಬಿಜೆಪಿ ಕಚೇರಿಗೆ ನುಗ್ಗಿ ಟಿಎಂಸಿ ಚಿನ್ಹೆ ಬಿಡಿಸಿ...

ಮೇ 30 ರಂದು ಪಶ್ಚಿಮ ಬಂಗಾಳದ ನೈಹತಿ ಎಂಬಲ್ಲಿಯ ಬಿಜೆಪಿ ಆಫೀಸಿಗೆ ನುಗ್ಗಿದ ಮಮತಾ ಬ್ಯಾನರ್ಜಿ , ಕಚೇರಿಯ ಬಾಗಿಲು ಮುರಿದು, ಕಚೇರಿಯ ಗೋಡೆಯ ಮೇಲೆ ತೃಣಮೂಲ ಕಾಂಗ್ರೆಸ್ ಚಿನ್ಹೆಯನ್ನು ಬರೆದು ಬಂದಿದ್ದರು! ಈ ವಿಡಿಯೋ ಸಹ ವೈರಲ್ ಆಗಿತ್ತು. ಈ ಕಚೇರಿ ತೃಣಮೂಲ ಕಾಂಗ್ರೆಸ್ ನದ್ದೇ ಆಗಿದ್ದು, ಬಿಜೆಪಿ ಅದನ್ನು ವಶಕ್ಕೆ ಪಡೆದಿತ್ತು. ಆದ್ದರಿಂದ ಈಗ ನಮ್ಮ ಕಚೇರಿಯನ್ನು ನಾವೇ ವಾಪಸ್ ಪಡೆಯುತ್ತಿದ್ದೇವೆ" ಎಂದಿದ್ದರು.

ಇದು ಹೀಗೇ ಸಾಗಿದರೆ ದೀದಿ ಕತೆ ಏನು?

ಇದು ಹೀಗೇ ಸಾಗಿದರೆ ದೀದಿ ಕತೆ ಏನು?

ಹಾಗೆ ನೋಡುವುದಕ್ಕೆ ಹೋದರೆ ಮಮತಾ ಬ್ಯಾನರ್ಜಿ ತಾವೇ ತೋಡಿದ ಹಳ್ಳಕ್ಕೆ ತಾವೇ ಬೀಳುತ್ತಿದ್ದಾರೆ! ಅಲ್ಪಲಸಂಖ್ಯಾತರ ಮತಕ್ಕಾಗಿ ಬಹುಸಂಖ್ಯಾತ ಹಿಂದುಗಳನ್ನು ಅವಮಾನಕರವಾಗಿ ನಡೆಸಿಕೊಳ್ಳುತ್ತಿರುವ ಅವರ ಮರ್ತನೆಯೇ ಅವರಿಗೆ ಮುಳುವಾಗಿದೆ. ಅದಕ್ಕೆ ಸಾಕ್ಷಿ ಲೋಕಸಭೆ ಚುನಾವಣೆಯಲ್ಲಿ 42 ಕ್ಷೇತ್ರಗಳಲ್ಲಿ ಕೇವಲ 22 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿಗಿಂತ ನಾಲ್ಕೇ ನಾಲ್ಕು ಸ್ಥಾನಗಳಲ್ಲಿ ಮುಂದಿರುವುದು. ಕಳೆದ ಲೋಕಸಭೆ ಚುನಾವಣುಲ್ಲಿ ಎರಡು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 18 ಸ್ಥಾನಗಳಲ್ಲಿ ಗೆದ್ದರೆ, ಕಳೆದ ಬಾರಿ 34 ಸ್ಥಾನಗಳಲ್ಲಿ ಗೆದ್ದಿದ್ದ ಟಿಎಂಸಿ ಈ ಮಾರಿ 22 ಸ್ಥಾನಗಳಲ್ಲಿ ಗೆದ್ದಿದೆ. ಅತಿಯಾದ ಆತ್ಮವಿಶ್ವಾಸವೇ ಮಮತ ಆಬ್ಯಾನರ್ಜಿ ಅವರಿಗೆ ಮುಳುವಾಗಿದೆ ಎಂಬುದಕ್ಕೆ ಇದೇ ಸ್ಪಷ್ಟ ನಿದರ್ಶನ.

'ಮಮತಾ ಬ್ಯಾನರ್ಜಿ ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ''ಮಮತಾ ಬ್ಯಾನರ್ಜಿ ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ'

ಪ್ರಧಾನಿಗೂ ಗೌರವ ನೀಡದ ದೀದಿ

ಪ್ರಧಾನಿಗೂ ಗೌರವ ನೀಡದ ದೀದಿ

ಮಮತಾ ಬ್ಯಾನರ್ಜಿ ಅವರು ತಮ್ಮ ಅಸಹನೆಯ ವರ್ತನೆಯಿಂದಾಗಿ ಚುನಾವಣೆ ಪ್ರಚಾರದ ಸಮಯದಲ್ಲಿ ದೇಶದ ಅತ್ಯುನ್ನತ ಹುದ್ದೆಯಲ್ಲಿರು ಪ್ರಧಾನಿಯವರಿಗೂ ಗೌರವ ನೀಡಿರಲಿಲ್ಲ. ಅವರ ಕರೆಯನ್ನು ಸ್ವೀಕರಿಸಿದೆ, ಫೋನಿ ಚಂಡಮಾರುತ ಪೀಡಿತರಿಗೆ ನೆರವಾಗಲು ಮುಂದಾದರೆ ಅದಕ್ಕೂ ಒಪ್ಪದೆ, ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆ ನಿರ್ಮಿಸುವುದಕ್ಕೆ ಅನುದಾನ ನೀಡಲು ಮುಂದಾದಾಗಲೂ 'ಬೇಕಾಗಿಲ್ಲ' ಎಂದು ಉದ್ಧಟತನ ಮೆರೆದಿದ್ದರು. ಅವರ ಈ ಎಲ್ಲಾ ವರ್ತನೆಗಳೇ ಇಂದು ಅವರ ರಾಜಕಿಯ ಬದುಕಿಗೆ ಮುಳುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

English summary
West Bengal chief minister Mamata Banerjee in her latest statement curses her opponents and said "Whoever messes with us will be destroyed." Her arrogant statements will be having diverse affect on her political career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X