ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂಧನದ ವಿರಾಟರೂಪ ದರ್ಶನಕ್ಕೆ ದೀದಿ ರೆಡಿ! ಯಾರೆಲ್ಲ ಹಾಜರು?

|
Google Oneindia Kannada News

ನವದೆಹಲಿ, ಜನವರಿ 18: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಧಿಕಾರದಿಂದ ಹೊರಗಿಡುವ ಆದ್ಯ ಉದ್ದೇಶವನ್ನು ಹೊತ್ತು ಸೃಷ್ಟಿಯಾಗುತ್ತಿರುವ ಮಹಾಘಟಬಂಧನದ ವಿರಾಟರೂಪದರ್ಶನಕ್ಕೆ ಜ.19 ರಂದು ವೇದಿಕೆ ಸೃಷ್ಟಿಯಾಗಲಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಅವರು ಮೊದಲೇ ನಿಗದಿ ಪಡಿಸಿದಂತೆ ಜ.19 ರಂದು ನಡೆಸುತ್ತಿರುವ ಬೃಹತ್ rally ಯಲ್ಲಿ ವಿಪಕ್ಷಗಳ ಘಟಾನುಘಟಿ ಮುಖಂಡರು ಭಾಗವಹಿಸುವುದು ಖಚಿತವಾಗಿದೆ.

ಮಮತಾ ಬ್ಯಾನರ್ಜಿ rally ಮೇಲೆ ಘಟಾನುಘಟಿಗಳ ಕಣ್ಣು! ಮಮತಾ ಬ್ಯಾನರ್ಜಿ rally ಮೇಲೆ ಘಟಾನುಘಟಿಗಳ ಕಣ್ಣು!

ಈ ವರ್ಷದ ಮೊಟ್ಟ ಮೊದಲ ವಿಪಕ್ಷಗಳ ಸಭೆ ಇದಾಗಿದ್ದು, ಲೋಕಸಭಾ ಚುನಾವಣೆಯ ಹೊತ್ತಿಗೆ ಮಹಾಘಟಬಂಧನದ ಸ್ಪಷ್ಟ ಚಿತ್ರಣ ಸಿಗುವುದಕ್ಕೂ ಈ ಸಭೆ ನೆರವಾಗಲಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳೂ ಈ Rally ಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ದೀದಿ ಕರೆದ ಈ rally ಗೆ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಪಟ್ಟಿ ಇಲ್ಲಿದೆ.

ರಾಹುಲ್ -ಸೋನಿಯಾ ಗೈರು?

ರಾಹುಲ್ -ಸೋನಿಯಾ ಗೈರು?

ಮಮತಾ ಬ್ಯಾನರ್ಜಿ ಅವರ ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಬ್ಬರೂ ಗೈರಾಗುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಅವರು ಈ ಕುರಿತು ಈಗಾಗಲೇ ಪತ್ರ ಬರೆದಿದ್ದು, ವಿಪಕ್ಷಗಳ ಈ rally ಗೆ ತನ್ನ ಸಂಪೂರ್ಣ ಬೆಂಬಲವಿದ್ದು, ಇದು ಒಗ್ಗಟ್ಟಿನ ಸಂಕೇತ ಎಂದಿದೆ. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಅವರು ಸಭೆಯಲ್ಲಿ ಭಾಗವಹಿಸುವುದು ಅನುಮಾನ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಭಾಗವಹಿಸುತ್ತಿಲ್ಲ.

1859ರಿಂದಲೂ ಬಗೆಹರಿಯದ ರಾಮಜನ್ಮ ಭೂಮಿ ವಿವಾದ1859ರಿಂದಲೂ ಬಗೆಹರಿಯದ ರಾಮಜನ್ಮ ಭೂಮಿ ವಿವಾದ

ಇನ್ನ್ಯಾರು ಭಾಗವಹಿಸುತ್ತಾರೆ?

ಇನ್ನ್ಯಾರು ಭಾಗವಹಿಸುತ್ತಾರೆ?

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಟಿಡಿಪಿ ಮುಖಂಡ, ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಸಹ ಈ rally ಯಲ್ಲಿ ಭಾಗಿಯಾಗಲಿದ್ದಾರೆ.

ಯಾರ್ಯಾರು ಗೈರಾಗಬಹುದು?

ಯಾರ್ಯಾರು ಗೈರಾಗಬಹುದು?

ಬಿ ಎಸ್ಪಿ ನಾಯಕಿ ಮಾಯಾವತಿ ಅವರು ಈ ಸಭೆಗೆ ಹಾಜರಾಗುತ್ತಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಪ್ರಧಾನಿ ಹುದ್ದೆ ರೇಸ್ ನಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾಯಾವತಿ ಅವರ ಹೆಸರೂ ಕೇಳಿಬರುತ್ತಿರುವುದರಿಂದ ಅವರು ಈ ಸಭೆಯಲ್ಲಿ ಭಾಗವಹಿಸುವುವದು ಅನುಮಾನ. ಎಡಪಕ್ಷಗಳೆಲ್ಲವೂ ಈ rally ಯಲ್ಲಿ ಭಾಗವಹಿಸುವುದಿಲ್ಲ ಎಂದಿವೆ. ಇನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸಂಯುಕ್ತ ಕೂಟ ಎಂದು ಓಡಾಡುತ್ತಿರುವುದರಿಂದ ಈ ಸಭೆಯಲ್ಲಿ ಭಾಗವಹಿಸುವುದು ಅನುಮಾನ!

ಕಾಂಗ್ರೆಸ್ ಬೆಂಬಲ ನೀಡಿದ್ದಕ್ಕೇ ಹಲವರ ಗೈರಾಗಬಹುದು!

ಕಾಂಗ್ರೆಸ್ ಬೆಂಬಲ ನೀಡಿದ್ದಕ್ಕೇ ಹಲವರ ಗೈರಾಗಬಹುದು!

ಈ ಸಭೆಗೆ ಕಾಂಗ್ರೆಸ್ ಬೆಂಬಲ ನೀಡದೆ ಇದ್ದಿದ್ದರೆ ಮಾಯಾವತಿ ಅವರೂ ಬರುವ ಸಾಧ್ಯತೆ ಇತ್ತು. ಆದರೆ ಮಹಾಘಟಬಂಧನದಲ್ಲಿ ಕಾಂಗ್ರೆಸ್ ಇರುವುದಾದರೆ ತಾನು ಅಲ್ಲಿರುವುದಿಲ್ಲ ಎಂದಿರುವ ಮಾಯಾವತಿ ಈ ಸಭೆಗೆ ಅದೇ ಕಾರಣಕ್ಕೆ ಬಾರದಿರಬಹುದು. ಇದೇ ಕಾರಣದಿಂದಲೇ ಕೆ ಚಂದ್ರಶೇಖರ ರಾವ್ ಅವರೂ ಭಾಗಿಯಾಗದೆ ಉಳಿದರೆ ಅಚ್ಚರಿಯಿಲ್ಲ!

English summary
West Bengal CM Mamata banerjee hosted a rally in Kolkatta in which she invited all opposition leaders. Here is the list of leader who will be presented in the rally tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X