ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿ ಕಿವಿಯಲ್ಲಿ ಈ ವ್ಯಕ್ತಿ ಹೇಳಿದ್ದೇನು?

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 9: ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಕಿವಿಯಲ್ಲಿ ಮಾತನಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿ ಬಳಿ ಮಾತನಾಡಿದ ವ್ಯಕ್ತಿಯ ಹೆಸರು ಜುಲ್ಫಿಕರ್. ಈ ಫೋಟೊ ನೋಡಿ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದರು. ಮೋದಿ ಕಿವಿಯಲ್ಲಿ ಮಾತನಾಡಿರುವ ವ್ಯಕ್ತಿ ಯಾರೆಂದು ಗೊತ್ತಿಲ್ಲ ಆದರೆ ಏನು ಹೇಳಿದ್ದಾರೆ ಎಂಬುದನ್ನು ಊಹಿಸಬಲ್ಲೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ನೋಟಿಸ್; ಮಮತಾ ಬ್ಯಾನರ್ಜಿ ತಿರುಗೇಟು!?ಪ್ರಧಾನಿ ನರೇಂದ್ರ ಮೋದಿಗೆ ನೋಟಿಸ್; ಮಮತಾ ಬ್ಯಾನರ್ಜಿ ತಿರುಗೇಟು!?

ಅವರು ಬಹುಶಃ ಮೋದಿಯವರೇ ನಾನು ಬಾಂಗ್ಲಾದೇಶಿಗನಲ್ಲ, ನಾವು ಎನ್‌ಆರ್‌ಸಿ, ಎನ್‌ಆರ್‌ಪಿಗಾಗಿ ದಾಖಲೆಗಳನ್ನು ತೋರಿಸುವುದಿಲ್ಲ, ನಾವು ತ್ರಿವಳಿ ತಲಾಖ್ ಬೆಂಬಲಿಸುವುದಿಲ್ಲ ಎಂದು ಹೇಳಿರಬಹುದು ಎಂದು ಹಾಸ್ಯ ಮಾಡಿದ್ದರು.

What Did Zulfiqar Ali, Man In Viral Photo, Tell PM Modi

ಇದೀಗ ಖುದ್ದಾಗಿ ಜುಲ್ಫಿಕರ್ ಮಾಧ್ಯಮದ ಮುಂದೆ ಮಾತನಾಡಿದ್ದು, ನನಗೆ ಈಗ 40 ವರ್ಷ ವಯಸ್ಸು, ಮೋದಿಯವರ ಬಳಿ 40 ಸೆಕೆಂಡುಗಳು ಮಾತನಾಡಿರುವೆ ಆದರೆ ಆ ಸಮಯವನ್ನು ಎಂದೂ ಮರೆಯುವುದಿಲ್ಲ.

ಮೋದಿಯವರು ನೀನು ಏನಾಗಬೇಕು ಎಂದು ಕೇಳಿದರು, ನಾನು ಶಾಸಕ, ಸಂಸದ ಏನೂ ಆಗುವುದಿಲ್ಲ, ನನಗೆ ದೇಶಕ್ಕಾಗಿ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದೆ.
ಹಾಗೆಯೇ ಮೋದಿಯವರ ಜತೆ ಒಂದು ಪೋಟೊ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದೆ.

ನನಗೆ ಅವರ ಬಳಿ ಫೋಟೊ ತೆಗೆಸಿಕೊಳ್ಳುವ ಆಸೆಯಾಗಿ ಅವರ ಬಳಿ ಹೋದೆ ಹೊರತು ಇನ್ಯಾವ ಉದ್ದೇಶವೂ ಇರಲಿಲ್ಲ, ಯಾರೂ ಮೋದಿಯವರ ಬಳಿ ಮಾತನಾಡು ಎಂದು ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

English summary
Zulfiqar Ali, the man whose photograph with PM Narendra Modi at a Bengal rally went viral on social media, only wanted to click a photo with the PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X