ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೊಲ್ಕತ್ತ, ಜೂನ್ 8: ಕೊರೊನಾ ಸೋಂಕಿತ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಲಾಕ್‌ಡೌನ್ ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಇದೇ ಜೂನ್ 15ಕ್ಕೆ ಲಾಕ್ ಡೌನ್ 5.0 ಮುಕ್ತಾಯವಾಗಲಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಸಂಪುಟ ಸಭೆ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಮತ್ತೆ 15 ದಿನಗಳ ಕಾಲ ಅಂದರೆ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ.

ಜೂನ್ 1ರಿಂದ ಬಂಗಾಳದಲ್ಲಿ ಪ್ರಾರ್ಥನಾ ಮಂದಿರಗಳು, ಮಸೀದಿಗಳು ಮತ್ತು ಚರ್ಚ್ ಗಳಲ್ಲಿ ಷರತ್ತು ಬದ್ದ ಪ್ರಾರ್ಥನೆಗೆ ಅವಕಾಶ ನೀಡಿದ್ದರು. ಜೂಟ್, ಟೀ ಎಸ್ಟೇಟ್ ಮತ್ತು ಕಟ್ಟಡ ಕಾಮಗಾರಿಗಳಲ್ಲಿ ಪೂರ್ಣ ಪ್ರಮಾಣದ ಕಾರ್ಮಿಕರ ಬಳಕೆಗೂ ಅನುಮತಿ ನೀಡಿದ್ದರು.

mamata

ಈ ಎಲ್ಲ ವಿನಾಯಿತಿಗಳು ಲಾಕ್ ಡೌನ್ ನಲ್ಲಿ ಮುಂದುವರೆಯಲಿದೆ. ಅಲ್ಲದೆ ಮಾಲ್ ಗಳು ಮತ್ತು ರೆಸ್ಟೋರೆಂಟ್ ಗಳು ಇಂದಿನಿಂದ ಓಪನ್ ಆಗಿವೆ.

ಪಶ್ಚಿಮ ಬಂಗಾಳ: 9 ತಿಂಗಳ ಮಗು ಸೇರಿ ಕುಟುಂಬದ 5 ಮಂದಿಗೆ ಕೊರೊನಾ ಸೋಂಕುಪಶ್ಚಿಮ ಬಂಗಾಳ: 9 ತಿಂಗಳ ಮಗು ಸೇರಿ ಕುಟುಂಬದ 5 ಮಂದಿಗೆ ಕೊರೊನಾ ಸೋಂಕು

ಲಾಕ್ ಡೌನ್ 5.0 ಸಂದರ್ಭದಲ್ಲಿ ನೀಡಲಾಗಿದ್ದ ವಿನಾಯಿತಿಗಳೇ ಮುಂದಿನ ಹಂತದ ಲಾಕ್ ಡೌನ್ ಗೂ ಮುಂದುವರೆಯಲಿದ್ದು, ಸಾಮಾಜಿಕ ಕಾರ್ಯಕ್ರಮಗಳಿಗೆ 10 ಮಂದಿಯ ಮಿತಿ ಹೇರಲಾಗಿದೆ. ಅಂತೆಯೇ ಮದುವೆ ಮತ್ತು ಸಾವಿನಂತಹ ಕಾರ್ಯಕ್ರಮಗಳಿಗೆ 25 ಮಂದಿಯ ಮಿತಿ ಮುಂದುವರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
West Bengal chief minister Mamata Banerjee today said that lockdown will be extended in the state till 30 June in the wake of novel coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X