ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳಿಗೆ ವೋಟ್ ಹಾಕಲು ಬಿಡಬಾರದು: ಟಿಎಂಸಿ ಸಂಸದನ ವಿವಾದಾತ್ಮಕ ವಿಡಿಯೋ

|
Google Oneindia Kannada News

ಕೋಲ್ಕತಾ, ಜೂನ್ 1: ಮುಂದಿನ ಚುನಾವಣೆಗಳಲ್ಲಿ ಹಿಂದೂಗಳು ಮತ ಹಾಕಲು ಬಿಡಬಾರದು ಎಂದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಸುಭಾಸಿಷ್ ಚಕ್ರವರ್ತಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದ ಸೃಷ್ಟಿಸಿದೆ.

ಆದರೆ, ಇದು ತಿದ್ದುಪಡಿ ಮಾಡಲಾದ ವಿಡಿಯೋ ಎಂದು ಸುಭಾಸಿಷ್ ಆರೋಪಿಸಿದ್ದಾರೆ. ತಮಗೆ ಮತ್ತು ತಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹರಿಬಿಡಲಾಗಿದ್ದು, ಇದರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯ ಬಳಿಕ ಜಾಧವಪುರ ಲೋಕಸಭೆ ಕ್ಷೇತ್ರದ ಭಮಗೋರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದರ ಮತಗಟ್ಟೆಗಳ ಫಲಿತಾಂಶದ ಪಟ್ಟಿಯನ್ನು ಪರಿಶೀಲಿಸುತ್ತಿದ್ದ ಸುಭಾಸಿಷ್ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುವ ವಿಡಿಯೋ ಹರಿದಾಡುತ್ತಿದೆ. ಇದರಲ್ಲಿ ಅವರು ಬಿಜೆಪಿ ಮತಗಳು ಹೆಚ್ಚಾಗಿರುವ ಮೂರು ನಿರ್ದಿಷ್ಟ ಮತಗಟ್ಟೆಗಳ ಬಗ್ಗೆ ಕಾರ್ಯಕರ್ತರ ಬಳಿ ವಿಚಾರಣೆ ನಡೆಸಿ, ಅವರ ಮೇಲೆ ಗಮನ ಹರಿಸುವಂತೆ ಸೂಚಿಸುವುದು ದಾಖಲಾಗಿದೆ.

ರಾಜಕಾರಣಿಗಳನ್ನು ಮಿಮಿಕ್ರಿ ಮಾಡಿದ್ದ ಆಟಿಕೆ ವ್ಯಾಪಾರಿ ಬಂಧನರಾಜಕಾರಣಿಗಳನ್ನು ಮಿಮಿಕ್ರಿ ಮಾಡಿದ್ದ ಆಟಿಕೆ ವ್ಯಾಪಾರಿ ಬಂಧನ

ಇವುಗಳಲ್ಲಿ ಎರಡು ಮತಗಟ್ಟೆಗಳು 'ಹಿಂದೂಗಳ ಪ್ರಾಬಲ್ಯ' ಇರುವ ಭಾಗಗಳು ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಹಿಂದೂಗಳಿಗೆ ಅವಕಾಶ ನೀಡಬಾರದು

'ಈ ಮತಗಟ್ಟೆಗಳನ್ನು ಯಾರು ನೋಡಿಕೊಳ್ಳುತ್ತಾರೆ? ಬಿಡಿ! ಇಲ್ಲಿ ಸಿಪಿಎಂ ಲೀಡ್ ಪಡೆದುಕೊಂಡಿದೆ. ಇದೇನೂ ಸಮಸ್ಯೆ ಅಲ್ಲ. ಈ ಮೂರು ಬೂತ್‌ಗಳನ್ನು ನೋಡಿಕೊಳ್ಳುವವರು ಯಾರು? ಈ ಮೂರು ಬೂತ್‌ಗಳ ಮೇಲೆ ಗಮನ ಹರಿಸಿ. ಬಿಜೆಪಿ ಮತಗಳು ಇಲ್ಲಿ ಭವಿಷ್ಯದಲ್ಲಿ ಹೆಚ್ಚು ಬೆಳೆಯದಂತೆ ನೋಡಿಕೊಳ್ಳಬೇಕು. ಮುಂದೆ ಹಿಂದೂಗಳು ಇಲ್ಲಿ ಮತ ಹಾಕಲು ಅವಕಾಶ ನೀಡಬಾರದು' ಎಂದು ಅವರು ಹೇಳುವುದು ವಿಡಿಯೋದಲ್ಲಿ ಕಾಣಿಸಿದೆ.

ಅಧಿಕಪ್ರಸಂಗ ಮಾಡಿದ್ರೆ ಪರಿಣಾಮ ನೆಟ್ಟಗಿರೋಲ್ಲ, ದೀದಿಗೆ ಸಚಿವೆಯ ವಾರ್ನಿಂಗ್ ಅಧಿಕಪ್ರಸಂಗ ಮಾಡಿದ್ರೆ ಪರಿಣಾಮ ನೆಟ್ಟಗಿರೋಲ್ಲ, ದೀದಿಗೆ ಸಚಿವೆಯ ವಾರ್ನಿಂಗ್

ವಿಡಿಯೋ ತಿದ್ದಲಾಗಿದೆ

ವಿಡಿಯೋ ತಿದ್ದಲಾಗಿದೆ

ಪಶ್ಚಿಮ ಬಂಗಾಳದ 24 ಪರಗಣದ ಟಿಎಂಸಿ ಮುಖ್ಯಸ್ಥರಾಗಿರುವ ಸುಭಾಸಿಷ್, 'ಭಾಂಗೋರ್ ವ್ಯಾಪ್ತಿಯಲ್ಲಿನ ಮೂರು ಬೂತ್‌ಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ ಎಂದು ನಮ್ಮ ಕಾರ್ಯಕರ್ತರು ಸಭೆಯ ವೇಳೆ ಹೇಳಿದ್ದರು. ಭವಿಷ್ಯದಲ್ಲಿ ಈ ಮೂರು ಬೂತ್‌ಗಳಲ್ಲಿ ಬಿಜೆಪಿ ಮತ್ತೆ ಲೀಡ್ ಪಡೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದಿದ್ದೆ. ನನಗೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ವಿಡಿಯೋ ತಿದ್ದಲಾಗಿದೆ' ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Array

ಹಿಂದೂ ಪ್ರತಿಭಟನೆಯ ಸಂಕೇತ

ಪಶ್ಚಿಮ ಬಂಗಾಳ ಹಿಂದೂ ಪ್ರತಿಭಟನೆಯ ವಿಚಿತ್ರ ಜಾಗ. ಟಿಎಂಸಿ ಸಂಸದ ಸುಭಾಸಿಷ್ ಚಕ್ರವರ್ತಿ ಸ್ವತಃ ಹಿಂದೂ ಆಗಿದ್ದರೂ, ಹಿಂದೂ ಪ್ರತಿಭಟನೆಯ ಸಂಕೇತವಾಗಿಬಿಟ್ಟಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಹಿಂದೂಗಳು ಮತಹಾಕದಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಾರೆ ಎಂದು ಶಂತನು ಬಿಸ್ವಾಸ್ ಟ್ವೀಟ್ ಮಾಡಿದ್ದಾರೆ.

'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು? 'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?

ಅವರಿಗೆ ಅವಕಾಶ ಕೊಡುವಂತಿಲ್ಲ

ಹಿಂದೂಗಳಿಗೆ ಮತಹಾಕಲು ಅವಕಾಶ ನೀಡಬೇಡಿ ಎಂದಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಸುಭಾಸಿಷ್ ಚಕ್ರವರ್ತಿ ಅವರೊಬ್ಬ ಹಿಂದೂ. ಹೀಗಾದರೆ ಅವರಿಗೆ ಮತ ಹಾಕಲು ಅವಕಾಶ ನೀಡುವಂತಿಲ್ಲ ಮತ್ತು ಸ್ಪರ್ಧಿಸಲು ಅವಕಾಶ ನೀಡವುದಿಲ್ಲ ಎಂದು ಬೃಜೇಂದ್ರ ಗರ್ಗ್ ಟ್ವೀಟ್ ಮಾಡಿದ್ದಾರೆ.

English summary
A video went viral of TMC MP Subhasish Chakraborty, allegedly directing hi party workers not to allow Hindus to vote in furure elections in some booths. TMC leader claimed that it was a doctered video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X