ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗಾ ಪೂಜಾ ಪೆಂಡಾಲ್: ಆಯೋಜಕರನ್ನು ಬಿಟ್ಟು ಯಾರಿಗೂ ಅವಕಾಶವಿಲ್ಲ ಎಂದ ಹೈಕೋರ್ಟ್

|
Google Oneindia Kannada News

ಕೊಲ್ಕತ್ತ, ಅಕ್ಟೋಬರ್ 19: ದುರ್ಗಾ ಪೂಜಾ ಪೆಂಡಾಲ್ ಒಳಗೆ ಆಯೋಜಕರನ್ನು ಹೊರತುಪಡಿಸಿ ಮತ್ಯಾರೂ ಇರಕೂಡದು ಎಂದು ಕೊಲ್ಕತ್ತ ಹೈಕೋರ್ಟ್ ಹೇಳಿದೆ.

ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಯಾವುದೇ ಹಬ್ಬವಿರಲಿ ಅದನ್ನು ಸರಳವಾಗಿ ಆಚರಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಪಶ್ಚಿಮ ಬಂಗಾಳ: ದುರ್ಗಾ ಪೂಜೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳ: ದುರ್ಗಾ ಪೂಜೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ

ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಮೂರು ದಿನಗಳ ಕಾಲ ನಡೆಯುವ ದುರ್ಗಾ ಪೂಜೆಗೂ ಪಶ್ಚಿಮ ಬಂಗಾಳ ಸರ್ಕಾರ ಮಾರ್ಗಸೂಚಿಗಳನ್ನೂ ಕೂಡ ಪ್ರಕಟಿಸಿದೆ.
ಮತ್ತೊಂದೆಡೆ ದುರ್ಗಾ ಪೂಜೆಯ ಪ್ರಯುಕ್ತ ನಿರ್ಮಿಸಿರುವ ಪೆಂಡಾಲ್‌ ಒಳಗೆ ಎಷ್ಟು ಮಂದಿ ಇರಬೇಕು ಎನ್ನುವ ಬಗ್ಗೆ ಸೂಚನೆ ನೀಡಿದೆ.

West Bengal Puja Pandals No-Entry Zones For Visitors

ದೊಡ್ಡ ಪೆಂಡಾಲ್ ಒಳಗೆ 25 ಮಂದಿ ಹಾಗೂ ಸಣ್ಣ ಪೆಂಡಾಲ್ ಒಳಗೆ 15 ಮಂದಿ ಇರಬಹುದು ಎಂದು ಹೇಳಿದೆ.ಎಲ್ಲಾ ಪೆಂಡಾಲ್ ಎದುರು ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಸಣ್ಣ ಪೆಂಡಾಲ್‌ಗಳಲ್ಲಿ 5 ಮೀಟರ್ ಅಂತರ ಹಾಗೂ ದೊಡ್ಡ ಪೆಂಡಾಲ್‌ಗಳಲ್ಲಿ 10 ಮೀಟರ್‌ಗಳ ಅಂತರವಿರಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಒಂದೊಮ್ಮೆ ಪೂಜೆಗೂ ಅವಕಾಶ ನೀಡದಿದ್ದರೆ ಬೈದುಕೊಳ್ಳುತ್ತಾರೆ, ಹಾಗೂ ಪೂಜೆಯ ಬಳಿಕ ಕೊರೊನಾ ಸೋಂಕು ತಗುಲಿದರೂ ಬೈದುಕೊಳ್ಳುತ್ತಾರೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖವಾದದ್ದು.

ಭಾನುವಾರ ಪಶ್ಚಿಮ ಬಂಗಾಳದಲ್ಲಿ 64 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 3983 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 6 ಸಾವಿರ ಮಂದಿ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ದುರ್ಗಾ ಪೂಜೆಗೆ ಸಿದ್ಧತೆ ಬರದಿಂದ ಸಾಗಿದೆ. ದಕ್ಷಿಣ ಕೊಲ್ಕತಾದ ಪೂಜಾ ಪೆಂಡಾಲ್‌ನಲ್ಲಿ ವಲಸೆ ಬಂದ ತಾಯಿಯೊಬ್ಬರ ವಿಗ್ರಹವನ್ನು ದುರ್ಗಾ ಮಾತೆಯಾಗಿ ಪೂಜಿಸಲಾಗುತ್ತಿದೆ. ಆ ತಾಯಿ ಕೈಯಲ್ಲಿ ಒಂದು ಮಗು ಇದ್ದು, ಇಬ್ಬರು ಮಕ್ಕಳು ಹಿಂಬಾಲಿಸುತ್ತಿದ್ದಾರೆ.

ಮಸುಕಾದ ಸೀರೆಯಲ್ಲಿರುವ ತಾಯಿ, ತನ್ನ ತೋಳುಗಳಲ್ಲಿ ಬಟ್ಟೆ ಧರಿಸಿದ ಮಗು ಎತ್ತಿಕೊಂಡಿದ್ದು, ಅವಳ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಡೆದು ಹೋಗುತ್ತಿರುವ ದೃಶ್ಯ, ಲಾಕ್ ಡೌನ್ ವೇಳೆ ಆಹಾರ ಮತ್ತು ನೀರಿಲ್ಲದೆ ಸಾವಿರಾರು ವಲಸಿಗರು ತಮ್ಮ ಮಕ್ಕಳೊಂದಿಗೆ ಹೆದ್ದಾರಿಗಳಲ್ಲಿ ನಡೆದುಕೊಂಡು ಹೋಗುವ ದೃಶ್ಯವನ್ನು ನೆನಪಿಸುತ್ತಿದೆ.

ಬರಿಶಾ ಕ್ಲಬ್‌ನ ಈ ಪರಿಕಲ್ಪನೆ ಇದೀಗ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಏಕೆಂದರೆ ಪ್ರಧಾನಿ ಮೋದಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತರುವ ಮುನ್ನ ಅದನ್ನು ತೀವ್ರವಾಗಿ ವಿರೋಧಿಸಿದವರಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಒಬ್ಬರು.

ದುರ್ಗಾ ಪೂಜೆ ಒಂದು ಧಾರ್ಮಿಕ ಕಾರ್ಯಕ್ರಮಕ್ಕಿಂತ ಮಹತ್ವದ್ದಾಗಿದೆ. ಇದು ಮಗಳ ವಾರ್ಷಿಕ ಮರಳುವಿಕೆಯನ್ನು ಸೂಚಿಸುತ್ತದೆ ಮತ್ತು ಇದು ಸ್ತ್ರೀ ಮತ್ತು ಮಾತೃತ್ವದ ಆಚರಣೆಯಾಗಿದೆ.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

English summary
Durga puja pandals will be no-entry zones for visitors, the Calcutta High Court said today – just three days ahead of Bengal's biggest festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X