ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳ ಸಚಿವ ಸುಬ್ರಾತ ಮುಖರ್ಜಿ ನಿಧನ: 'ಆಘಾತವನ್ನು ಎದುರಿಸಲು ಆಗುತ್ತಿಲ್ಲ' ಎಂದ ಮಮತಾ

|
Google Oneindia Kannada News

ಕೋಲ್ಕತ್ತಾ, ನವೆಂಬರ್‌ 05: ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ, ಪಶ್ಚಿಮ ಬಂಗಾಳ ಸಚಿವ ಸುಬ್ರತಾ ಮುಖರ್ಜಿ ಅನಾರೋಗ್ಯದ ಕಾರಣದಿಂದಾಗಿ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾರೆ. 75 ವರ್ಷದ ಸುಬ್ರತಾ ಮುಖರ್ಜಿ ಒಂದು ದಿನದ ಹಿಂದಷ್ಟೇ ಶಸ್ತ್ರ ಚಿಕಿತ್ಸೆಯೊಂದಕ್ಕೆ ಒಳಗಾಗಿದ್ದರು.

ಗುರುವಾರ ರಾತ್ರಿ ಸುಮಾರು 8.15 ಕ್ಕೆ ಸುಬ್ರತಾ ಮುಖರ್ಜಿ ಆರೋಗ್ಯದಲ್ಲಿ ದಿಡೀರ್‌ ಏರುಪೇರು ಕಂಡು ಬಂದ ಕಾರಣದಿಂದಾಗಿ ಅವರನ್ನು ಐಸಿಯುವಿಗೆ ವರ್ಗಾಯಿಸಲಾಗಿತ್ತು. ಇನ್ನು ಈ ಹಿನ್ನೆಲೆಯಿಂದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಆ‌ಗಮಿಸಿದ್ದು ಇದು ತೀವ್ರ ಆಘಾತ ಎಂದು ಹೇಳಿದ್ದಾರೆ.

ಉಪ ಸಮರದಲ್ಲಿ ಮತದಾರನ ಸಂದೇಶ: 8 ಬಿಜೆಪಿ, 10 ಕಾಂಗ್ರೆಸ್, 4ರಲ್ಲಿ ಟಿಎಂಸಿ ಗೆಲುವು ಉಪ ಸಮರದಲ್ಲಿ ಮತದಾರನ ಸಂದೇಶ: 8 ಬಿಜೆಪಿ, 10 ಕಾಂಗ್ರೆಸ್, 4ರಲ್ಲಿ ಟಿಎಂಸಿ ಗೆಲುವು

"ನಾವು ದೀಪಗಳ ಹಬ್ಬವನ್ನು ಆಚರಣೆ ಮಾಡುತ್ತಿರುವ ಸಂದರ್ಭದಲ್ಲೇ ಇಂತಹ ಕತ್ತಲು ನಮ್ಮನ್ನು ಆವರಿಸುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಈಗ ಮಾತನಾಡಲು ಕೂಡಾ ಆಗುತ್ತಿಲ್ಲ. ಅವರಿಗೆ ತೀವ್ರ ಹೃದಯ ಸ್ತಂಭನ ಉಂಟಾಗಿತ್ತು. ಅವರ ಪತ್ನಿ, ವೈದ್ಯರು, ಅವರ ಹಿತೈಷಿಗಳು ಅವರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ನಾವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುಬ್ರತಾ ಮುಖರ್ಜಿಗೆ ಅಂತಿಮ ನಮನ ಸಲ್ಲಿಸುವ ಅವಕಾಶವನ್ನು ನೀಡಲಾಗಿದ್ದು, ರವೀಂಧ್ರ ಸದನದಲ್ಲಿ ಸುಬ್ರತಾ ಮುಖರ್ಜಿ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನಾನು ಅಲ್ಲಿಗೆ ಹೋಗುವುದಿಲ್ಲ. ನಾನು ಸುಬ್ರತಾರನ್ನು ಈ ರೀತಿ ನೋಡಲು ಸಾಧ್ಯವಿಲ್ಲ. ನನಗೆ ಈ ರೀತಿಯಾಗಿ ನೋಡಲು ಆಗುವುದಿಲ್ಲ. ನಾನು ಹಲವಾರು ಅಡೆತಡೆಗಳನ್ನು ಅನುಭವಿಸಿದ್ದೇನೆ. ಆದರೆ ಈ ಆಘಾತವನ್ನು ನಾನು ಎದುರಿಸಲು ಆಗುತ್ತಿಲ್ಲ" ಎಂದು ಭಾವಾನಾತ್ಮಕವಾಗಿ ನುಡಿದಿದ್ದಾರೆ.

ಇಂದಿರಾ ಗಾಂಧಿಯ ಆಪ್ತ ಸಹಾಯಕ ಮುಖರ್ಜಿ

ಪಶ್ಚಿಮ ಬಂಗಾಳದಲ್ಲಿ ಸಿದ್ಧಾರ್ಥ ಶಂಕರ್‌ ರಾಯ್‌ ನೇತೃತ್ವದ ಕಾಂಗ್ರೆಸ್‌ ಆಡಳಿತವಿದ್ದ ಸಂದರ್ಭದಲ್ಲಿ 1972 ರಲ್ಲಿ ಮುಖರ್ಜಿ ರಾಜಕೀಯ ಮುಂದಾಳು ಆಗಿದ್ದರು. ಕೋಲ್ಕತ್ತಾದಲ್ಲಿ ಮೇಯರ್‌ ಕೂಡಾ ಆಗಿದ್ದರು. ಕಾಂಗ್ರೆಸ್‌ನ ಅಧ್ಯಕ್ಷರು ಕೂಡಾ ಆಗಿದ್ದರು. ತೃಣಮೂಲ ಕಾಂಗ್ರೆಸ್‌ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಲ್ಲಿ 2011 ರಿಂದ ಸಚಿವರಾಗಿದ್ದಾರೆ. ವಿದ್ಯಾರ್ಥಿ ಆಗಿರುವಾಗಲೇ ರಾಜಕೀಯ ಜೀವನಕ್ಕೆ ಧುಮುಕಿದ ಸುಬ್ರತಾ ಮುಖರ್ಜಿ 1960 ರಲ್ಲಿ ಛತ್ರ ಪರಿಷತ್‌ ಅನ್ನು ಸೇರ್ಪಡೆ ಆದರು. ಈ ಸಂದರ್ಭದಲ್ಲಿ ಪ್ರಿಯಾ ರಂಜನ್ ದಾಸ್ಮುನ್ಸಿಯವರ ಪರಿಚಯವನ್ನು ಮಾಡಿಕೊಂಡರು. ಬಳಿಕ ಇಬ್ಬರೂ ಇಬ್ಬರೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತ ಸಹಾಯಕರಾದರು. ಈ ಸಂದರ್ಭದಲ್ಲಿ ಸಿಪಿಐಎಂ ನಾಯಕರು ಘೋಷಣೆಯನ್ನು ಕೂಗುವಾಗ, "ಇಂದಿರಾರ ಇಬ್ಬರು ಮಕ್ಕಳು, ಪ್ರಿಯಾ ರಂಜನ್ ಹಾಗೂ ಸುಬತ್ರಾ" ಎಂದು ಹೇಳುತ್ತಿದ್ದರು. ಈ ಮೂಲಕವೇ ಆ ಕಾಲವಧಿಯಲ್ಲಿ ಸುಬ್ರತಾ ಮುಖರ್ಜಿ ಹೆಸರುವಾಸಿಯಾಗಿದ್ದರು.

ಪಶ್ಚಿಮ ಬಂಗಾಳ: ಬಿಜೆಪಿ ಯುವ ಮೋರ್ಚಾ ನಾಯಕನಿಗೆ ಗುಂಡಿಕ್ಕಿ ಹತ್ಯೆಪಶ್ಚಿಮ ಬಂಗಾಳ: ಬಿಜೆಪಿ ಯುವ ಮೋರ್ಚಾ ನಾಯಕನಿಗೆ ಗುಂಡಿಕ್ಕಿ ಹತ್ಯೆ

26 ನೇ ವಯಸ್ಸಿನಲ್ಲೇ ಸಚಿವರಾಗಿದ್ದ ಸುಬ್ರತಾ

ಬಳಿಕ 1970 - 1980 ರ ಅವಧಿಯಲ್ಲಿ ರಾಜಕೀಯದಲ್ಲಿ ಕಾರ್ಯ ನಿರ್ವಹಣೆ ಮಾಡಿದರು. 1971-1972 ರಲ್ಲಿ ಬ್ಯಾಲಿಗಂಜ್ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಸುಬ್ರತಾ, ಬಳಿಕ 1972 ರಲ್ಲಿ ಸಚಿವರಾದರು. ಈ ಸಂದರ್ಭದಲ್ಲಿ 26 ವರ್ಷದವರಾಗಿದ್ದ ಸುಬ್ರತಾ, ಸಚಿವ ಸಂಪುಟದಲ್ಲಿದ್ದ ಅತೀ ಕಿರಿಯ ವ್ಯಕ್ತಿ ಆಗಿದ್ದರು ಹಾಗೂ ಯುವ ಸಚಿವರು ಎನ್ನುವ ಮೂಲಕ ಹೆಸರುವಾಸಿಯಾಗಿದ್ದರು. ಬಳಿಕ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಹೊಸ ಪಕ್ಷವನ್ನು ಕಟ್ಟಲು ಮುಂದಾದರು. ಈ ವೇಳೆ ಹಲವಾರು ಹಿರಿಯ ಕಾಂಗ್ರೆಸ್‌ ನಾಯಕರು ಮಮತಾ ಬ್ಯಾನರ್ಜಿಯ ಜೊತೆ ನಿಂತರು. 1999 ರಲ್ಲಿ ತೃಣಮೂಲ ಕಾಂಗ್ರೆಸ್‌ ಸೇರ್ಪಡೆಯಾದ ಸುಬ್ರತಾ ಮುಖರ್ಜಿರನ್ನು 2000 ದಲ್ಲಿ ಕೋಲ್ಕತ್ತಾದ ಮೇಯರ್‌ ಆಗಿ ಮಾಡಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
West Bengal Minister Subrata Mukherjee Dies; Big Blow, Says Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X