ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾಗೆ ಭಾರಿ ಆಘಾತ: ಬಿಜೆಪಿ ಸೇರಿದ ಟಿಎಂಸಿ ಪ್ರಭಾವಿ ಮುಖಂಡ

|
Google Oneindia Kannada News

ಕೋಲ್ಕತಾ, ಮಾರ್ಚ್ 14: ಚುನಾವಣೆಯ ಹೊಸ್ತಿಲಿನಲ್ಲಿಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತ ಎದುರಾಗಿದೆ.

ಟಿಎಂಸಿ ಪಕ್ಷದ ಪ್ರಭಾವಿ ಮುಖಂಡ ಅರ್ಜುನ್ ಸಿಂಗ್ ಅವರು ಗುರುವಾರ ಬಿಜೆಪಿಯನ್ನು ಸೇರಿಕೊಂಡಿದ್ದಾರೆ. ಇದರಿಂದ ಚುನಾವಣೆ ಸಂದರ್ಭದಲ್ಲಿ ಟಿಎಂಸಿಗೆ ಹಿನ್ನಡೆಯುಂಟಾಗಿದ್ದರೆ, ಎಡರಂಗದ ಪ್ರಭಾವವಿರುವ ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗೆ ಬಲ ಬಂದಂತಾಗಿದೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಿರಿಯ ರಾಜಕಾರಣಿ ಟಾಮ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಿರಿಯ ರಾಜಕಾರಣಿ ಟಾಮ್

ಪಶ್ಚಿಮ ಬಂಗಾಳದ ಭತ್ಪಾರಾ ಕ್ಷೇತ್ರದ ಶಾಸಕರಾಗಿರುವ ಅರ್ಜುನ್ ಸಿಂಗ್, 2001ರಿಂದಲೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಅವರು ಉತ್ತರ ಕೋಲ್ಕತಾದಿಂದ ನಾಡಿಯಾವರೆಗೂ ಪ್ರಭಾವ ಹೊಂದಿದ್ದಾರೆ. ಅಲ್ಲದೆ, ರಾಜ್ಯದಾದ್ಯಂತ ಇರುವ ತಮ್ಮ ಸಂಪರ್ಕ ಬಲದಿಂದ ಅನೇಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲು ನೆರವಾಗಿದ್ದಾರೆ.

west bengal mamata banerjee trinamool congress leader arjun singh joins bjp

ತಳಮಟ್ಟದಿಂದ ಕೆಲಸ ನಿರ್ವಹಿಸುವುದರಲ್ಲಿ ತೀವ್ರ ಸಕ್ರಿಯರಾಗಿದ್ದ ಅವರು, ಪಂಚಾಯತ್ ಚುನಾವಣೆಯಿಂದ ಸಂಸತ್ ಚುನಾವಣೆಯವರೆಗೂ ಬೂತ್ ಮಟ್ಟದಲ್ಲಿ ನಿರ್ವಹಣೆ ಮಾಡುವುದರಲ್ಲಿ ಪರಿಣತರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್

ಬಾರಕ್‌ಪುರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ, ಹಾಲಿ ಸಂಸದ ದಿನೇಶ್ ತ್ರಿವೇದಿ ಅವರ ವಿರುದ್ಧ ಅರ್ಜುನ್ ಸಿಂಗ್ ಸ್ಪರ್ಧೆಗೆ ಇಳಿಯುವ ನಿರೀಕ್ಷೆಯಿದೆ.

English summary
West Bengal CM Mamata Banerjee faced a set back as party heavyweight Arjun Singh has joined the BJP on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X