• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ: ದುರ್ಗಾ ಪೂಜೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ

|

ಕೋಲ್ಕತಾ, ಸೆಪ್ಟೆಂಬರ್ 25: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳು ಸಕ್ರಿಯವಾಗತೊಡಗಿವೆ. ಅಧಿಕಾರರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುರ್ಗಾ ಪೂಜೆಯ ಆಚರಣೆಯ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಸಾಲಿನ ದುರ್ಗಾ ಪೂಜೆಯ ಸಮಿತಿಗಳಿಗೆ ತಲಾ 50,000 ಅನುದಾನವನ್ನು ಮಮತಾ ಬ್ಯಾನರ್ಜಿ ಗುರುವಾರ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು 28,000 ದುರ್ಗಾ ಪೂಜಾ ಸಮಿತಿಗಳಿವೆ. ಈ ಎಲ್ಲ ಸಮಿತಿಗಳಿಗೂ ತಲಾ 50,000 ರೂ. ಅನುದಾನ ಸಿಗಲಿದೆ. ಕಳೆದ ವರ್ಷ ಪ್ರತಿ ಸಮಿತಿಗೆ 25,000 ರೂ. ನೀಡಲಾಗಿತ್ತು. ಈ ಬಾರಿ ಅದರ ದುಪ್ಪಟ್ಟು ಹಣ ನೀಡಲಾಗುತ್ತಿದೆ. ಜತೆಗೆ ದುರ್ಗ ಪೂಜೆ ಸಮಿತಿಗಳಿಗೆ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಿಂದ ಶೇ 50ರಷ್ಟು ರಿಯಾಯಿತಿ ಕೂಡ ಘೋಷಿಸಲಾಗಿದೆ.

ಹಿಂದಿ ಮತ್ತು ಹಿಂದೂಗಳಿಗೆ ಆದ್ಯತೆ ಹಿಂದಿಲ್ಲ 'ರಾಜಕೀಯ': ಬ್ಯಾನರ್ಜಿ

ಇದರ ಜತೆಗೆ ದುರ್ಗಾ ಪೂಜೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಮಾರ್ಗಸೂಚಿಯನ್ನೂ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದಾರೆ. ಪೂಜೆಗೆ ಹಾಕುವ ಪೆಂಡಾಲ್‌ಗಳು ನಾಲ್ಕೂ ಕಡೆಯಿಂದ ತೆರೆದಿರಬೇಕು. ಪೆಂಡಾಲ್ ಪ್ರವೇಶ ಭಾಗದಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ ಇರಿಸಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ. ಹಾಗೆಯೇ ಪೂಜೆ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

8,000 ಬಡ ಬ್ರಾಹ್ಮಣ ಪುರೋಹಿತರಿಗೆ ಉಚಿತ ವಸತಿ, ತಿಂಗಳಿಗೆ 1,000 ರೂ. ಭತ್ಯೆ: ಮಮತಾ ಬ್ಯಾನರ್ಜಿ

ಪೆಂಡಾಲ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗುವುದಿಲ್ಲ. ಸ್ವಯಂ ಸೇವಕರು ಫೇಸ್ ಶೀಲ್ಡ್ ಧರಿಸಬೇಕು. ವಿವಿಧ ಪೂಜೆಗಳ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಜನರು ಈ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ನಾನು ಪೂಜೆಗೆ ಅವಕಾಶ ನೀಡದೆ ಹೋದರೆ ಪೂಜೆ ಸಂಭ್ರಮಾಚರಣೆಗೆ ಬಿಡುತ್ತಿಲ್ಲ ಎಂದು ಆರೋಪಿಸುತ್ತಾರೆ ಎಂದಿರುವ ಮಮತಾ, ನಾವು ಈ ಸಲ ಆನ್‌ಲೈನ್ ಮೂಲಕ ದುರ್ಗಾ ಪೂಜೆ ತೋರಿಸುತ್ತೇವೆ. ಆನ್‌ಲೈನ್ ವೇದಿಕೆ ಮೂಲಕವೇ ಬಹುಮಾನಗಳನ್ನು ಘೋಷಿಸುತ್ತೇವೆ ಎಂದಿದ್ದಾರೆ.

English summary
West Bengal Chief Minister Mamata Banerjee has announced Rs 50,000 for each 28,000 Durga Puja committees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X