ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ, ದೀದಿಗೆ ಆತಂಕ
ಕೊಲ್ಕತ್ತಾ, ಮೇ 23: ಭಾರಿ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಮತ್ತು ಆಡಳಿತ ಪಕ್ಷ ಟಿಎಂಸಿ ಸಮಬಲದ ಹೋರಾಟ ನಡೆಸುತ್ತಿವೆ.
ಎರಡೂ ಪಕ್ಷಗಳು ಬರೋಬ್ಬರಿ 19 ಸೀಟುಗಳಲ್ಲಿ ಮುನ್ನಡೆಯನ್ನು ಸಾಧಿಸಿವೆ. ಬಿಜೆಪಿ ಇಲ್ಲಿ 10 ಸೀಟು ಗಳಿಸಿದರೂ ಅದು ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ ಎಂದೇ ಪರಿಗಣಿತವಾಗುತ್ತಿತ್ತು ಆದರೆ ಈಗ ಎರಡೂ ಪಕ್ಷಗಳು ಸಮಬಲದ ಹೋರಾಟ ನಡೆಸುತ್ತಿವೆ.
ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಪಶ್ಚಿಮ ಬಂಗಾಳದಲ್ಲಿ 48 ಲೋಕಸಭಾ ಕ್ಷೇತ್ರಗಳಿದ್ದು 19 ರಲ್ಲಿ ಬಿಜೆಪಿ, 19 ರಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಉಳಿದ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಬಿಜೆಪಿ ಮತ್ತು ಟಿಎಂಸಿ ನಡುವೆ ಇಲ್ಲಿ ಭಾರಿ ಸ್ಪರ್ಧೆ ನಡೆದಿತ್ತು, ಹಿಂಸಾಚಾರ, ಬಿರುಸಿನ ವಾಗ್ದಾಳಿಗಳು, ರಾಜಕೀಯ ಮೇಲಾಟಗಳು ಎರಡೂ ಪಕ್ಷಗಳ ನಡುವೆ ನಡೆದಿತ್ತು.
Comments
lok sabha election results 2019 west bengal tmc bjp lok sabha elections 2019 ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಟಿಎಂಸಿ ಬಿಜೆಪಿ ಲೋಕಸಭಾ ಚುನಾವಣೆ 2019
English summary
West Bengal lok sabha elections results updates in Kannada. TMC and BJP fighting neck to neck. Congress trailing behind.