ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪೂರ್‌ ಶರ್ಮಾ ವಿರುದ್ಧ ನಿರ್ಣಯ ಅಂಗೀಕರಿಸಿದ ಬಂಗಾಳ ವಿಧಾನಸಭೆ

|
Google Oneindia Kannada News

ಕೋಲ್ಕತ್ತಾ, ಜೂ. 20: ಪ್ರವಾದಿ ಮೊಹಮ್ಮದ್ ಪೈಗಂಬರ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಬಂಗಾಳ ವಿಧಾನಸಭೆ ಅಂಗೀಕರಿಸಿತು. ರಾಜ್ಯ ಸರ್ಕಾರ ನಿರ್ಣಯವನ್ನು ಅಂಗೀಕರಿಸಿದಾಗ ಬಿಜೆಪಿ ನಾಯಕರು ವಾಕ್ಸಮರ ನಡೆಸಿದರು.

ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಮತ್ತು ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದಂತೆ 7 ಬಿಜೆಪಿ ಶಾಸಕರನ್ನು ಪಶ್ಚಿಮ ಬಂಗಾಳದ ಶಾಸಕಾಂಗ ಸಭೆಯಿಂದ ಅಮಾನತುಗೊಳಿಸಿದ ಕೇವಲ 4 ದಿನಗಳ ನಂತರ ಈ ನಿರ್ಣಯ ಬಂದಿದ್ದು, ಬಳಿಕ ಅಮಾನತು ಹಿಂಪಡೆಯಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸುವೆಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಆರಂಭಿಸಿದರು.

ನೂಪುರ್‌ಗೆ ಸಮನ್ಸ್ ಹಸ್ತಾಂತರಿಸಲು ದೆಹಲಿ ತಲುಪಿದ ಮುಂಬೈ ಪೊಲೀಸರುನೂಪುರ್‌ಗೆ ಸಮನ್ಸ್ ಹಸ್ತಾಂತರಿಸಲು ದೆಹಲಿ ತಲುಪಿದ ಮುಂಬೈ ಪೊಲೀಸರು

ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ಬಿಜೆಪಿ ಪ್ರಚೋದನೆ ಮತ್ತು ದ್ವೇಷದ ರಾಜಕೀಯವನ್ನು ಮಾಡುತ್ತಿದೆ. ರಾಜ್ಯದಲ್ಲಿ ಹಿಂಸಾಚಾರ ನಡೆದಾಗ ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಈ ಮಹಿಳೆಯನ್ನು (ನೂಪುರ್ ಶರ್ಮಾ) ಇನ್ನೂ ಬಂಧಿಸಲಾಗಿಲ್ಲ ಹೇಗೆ? ಆಕೆಯನ್ನು ಬಂಧಿಸುವುದಿಲ್ಲ ಎಂದು ನನಗೆ ತಿಳಿದಿದೆ" ಎಂದರು. ನೂಪೂರ್‌ ಶರ್ಮಾ ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ತಮ್ಮ ಜೀವ ಬೆದರಿಕೆಯ ಕಾರಣ ಕೋಲ್ಕತ್ತಾ ಪೊಲೀಸರ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶವನ್ನು ಕೇಳಿದ್ದಾರೆ. ಅವರು ಸೋಮವಾರ ಪೊಲೀಸರ ಮುಂದೆ ಹಾಜರಾಗಬೇಕಿತ್ತು.

West Bengal Legislative resolution passed against Nupur Sharma

ದೇಶದಲ್ಲಿ ಬಿಜೆಪಿಯು ನಿರುದ್ಯೋಗದ ಪ್ರಮುಖ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಬಿಜೆಪಿಯು ಅಗ್ನಿಪಥ್ ಮೂಲಕ ಅವರ ಕಾರ್ಯಕರ್ತರ ಪಡೆಯನ್ನು ರಚಿಸಲು ಪ್ರಯತ್ನಿಸುತ್ತಿದೆ. ನಾವು ಸೇನಾ ಯೋಧರಿಗೆ ನಮಸ್ಕರಿಸುತ್ತೇವೆ. ಅವರು ರಕ್ಷಣೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ತರಬೇತಿಯ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ಕೌಶಲ್ಯವನ್ನು ಕಲಿಯುತ್ತಾರೆ. ಆದರೆ ಯೋಜನೆಯಡಿ ನೇಮಕಗೊಳ್ಳುವವರು 4 ವರ್ಷಗಳ ನಂತರ, ಅವರು ಹೊರಗುಳಿಯುತ್ತಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ನೂಪುರ್ ಶರ್ಮಾ ಹೇಳಿಕೆ ವಿವಾದದ ಬಗ್ಗೆ ಚೀನಾ ಪ್ರತಿಕ್ರಿಯೆನೂಪುರ್ ಶರ್ಮಾ ಹೇಳಿಕೆ ವಿವಾದದ ಬಗ್ಗೆ ಚೀನಾ ಪ್ರತಿಕ್ರಿಯೆ

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿಯವರು 17,000 ಉದ್ಯೋಗಗಳ ಬಗ್ಗೆ ಮಾತನಾಡುತ್ತಾರೆ. ಇದು ಯಾವಾಗ ಸಂಭವಿಸುತ್ತದೆ? ನಾವು ಇಷ್ಟು ಉದ್ಯೋಗಗಳನ್ನು ನೀಡಬಲ್ಲೆವು. ಹೀಗಾಗಿ ನಾವು ಬಿಜೆಪಿ ಮುಂದೆ ತಲೆಬಾಗಬೇಕಾಗಿಲ್ಲ ಎಂದು ಹೇಳಿದರು.

West Bengal Legislative resolution passed against Nupur Sharma

ಸುವೆಂದು ಅಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಮಂದರ್ಮೋನಿ ಈಗ ದಾದಾಮೋನಿ. ದಾಡೋಮೋನಿ (ಸುವೆಂದು) ಪುರುಲಿಯಾ ಜನರ ಉದ್ಯೋಗಗಳನ್ನು ಕಿತ್ತುಕೊಂಡು ಮಿಡ್ನಾಪುರದ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದರು. ಆಗ ಆಡಳಿತಾರೂಢ ಬಿಜೆಪಿಯ ವಕ್ತಾರರಾಗಿದ್ದ ನೂಪೂರ್‌ ಶರ್ಮಾ ಅವರು ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕತಾರ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳು ಹೇಳಿಕೆ ಹಿನ್ನೆಲೆ ಬಗ್ಗೆ ಟೀಕಾಪ್ರಹಾರ ನಡೆಸಿದ್ದವು. ಬಳಿಕೆ ನೂಪೂರ್‌ ಶರ್ಮಾರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಆಕೆಯ ಹೇಳಿಕೆಗಳು ದೇಶಾದ್ಯಂತ ಪ್ರತಿಭಟನೆಗಳನ್ನು ಪ್ರಚೋದಿಸಿತು.

English summary
The West Bengal Legislature has passed a resolution condemning Nupur Sharma, a former BJP national spokesman who made derogatory remarks about the Prophet Muhammad Pygambar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X