ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಮೃತಪಟ್ಟ ತಂದೆಯ ದೇಹ ತೋರಿಸಲು ಆಸ್ಪತ್ರೆ ವಿಧಿಸಿದ ಶುಲ್ಕ ಎಷ್ಟು ಗೊತ್ತೇ?

|
Google Oneindia Kannada News

ಕೋಲ್ಕತಾ, ಆಗಸ್ಟ್ 10: ಕೊರೊನಾ ವೈರಸ್ ಸೋಂಕಿನ ಲಾಭ ಪಡೆದುಕೊಂಡ ಕೆಲವು ಖಾಸಗಿ ಆಸ್ಪತ್ರೆಗಳು ದುಡ್ಡು ಕೂಳಿವ ದಂಧೆ ನಡೆಸುತ್ತಿವೆ ಎಂಬ ಆರೋಪ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಆಸ್ಪತ್ರೆಯೊಂದು ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಮೃತದೇಹ ತೋರಿಸಲು 51,000 ರೂ. ಶುಲ್ಕ ವಿಧಿಸಿದೆ ಎಂದು ಆರೋಪಿಸಲಾಗಿದೆ.

Recommended Video

ಪ್ರಪಂಚಕ್ಕೆ ಸಿಹಿಸುದ್ದಿ ಕೊಟ್ಟ ರಷ್ಯಾ | Oneindia Kannada

ಕೊರೊನಾ ವೈರಸ್‌ ಸೋಂಕಿಗೆ ಗುರಿಯಾಗಿದ್ದ ಹರಿ ಗುಪ್ತಾ ಎಂಬುವವರು ಶನಿವಾರ ಮಧ್ಯರಾತ್ರಿ ವೇಳೆ ಮೃತಪಟ್ಟಿದ್ದರು. ಆದರೆ ಅವರು ಸತ್ತು ಹಲವು ಗಂಟೆಗಳಾದರೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ಅವರ ಕುಟುಂಬದವರಿಗೆ ಮಾಹಿತಿ ನೀಡಿರಲಿಲ್ಲ.

ಇನ್ನು ಕೋವಿಡ್ ಸೋಂಕಿತರ ಮನೆ ಸೀಲ್ ಡೌನ್ ಇಲ್ಲ?ಇನ್ನು ಕೋವಿಡ್ ಸೋಂಕಿತರ ಮನೆ ಸೀಲ್ ಡೌನ್ ಇಲ್ಲ?

ಭಾನುವಾರ ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯ ಸಿಬ್ಬಂದಿಯಿಂದ ಕರೆ ಬಂತು. ನಮ್ಮ ತಂದೆ ರಾತ್ರಿ 1 ಗಂಟೆಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಇಷ್ಟು ತಡವಾಗಿ ಏಕೆ ನಮಗೆ ಮಾಹಿತಿ ನೀಡಿದ್ದೀರಿ ಎಂದು ಪ್ರಶ್ನಿಸಿದಾಗ, ನಮ್ಮ ಸಂಪರ್ಕದ ವಿವರಗಳೇ ತಮ್ಮ ಬಳಿ ಇರಲಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಸಬೂಬು ಹೇಳಿದ್ದರು ಎಂಬುದಾಗಿ ಹರಿ ಗುಪ್ತಾ ಅವರ ಮಗ ಸಾಗರ್ ಗುಪ್ತಾ ತಿಳಿಸಿದ್ದಾರೆ. ಮುಂದೆ ಓದಿ.

ದೇಹ ನೋಡಲು 51,000 ರೂ ಚಾರ್ಜ್

ದೇಹ ನೋಡಲು 51,000 ರೂ ಚಾರ್ಜ್

ಮಾಹಿತಿ ತಿಳಿದ ಕೂಡಲೇ ಕುಟುಂಬದವರು ಆಸ್ಪತ್ರೆಗೆ ತೆರಳಿದರು. ಆದರೆ ಮೃತದೇಹವನ್ನು ಆಗಲೇ ಅಂತ್ಯಸಂಸ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅವರಿಗೆ ತಿಳಿಸಿದರು. ದೇಹ ಸಾಗಿಸಲಾದ ಶಿಬ್‌ಪುರ ಚಿತಾಗಾರಕ್ಕೆ ಕುಟುಂಬ ತೆರಳಿದಾಗ, ಅವರ ದೇಹವನ್ನು ನೋಡಲು 51,000 ರೂ. ನೀಡುವಂತೆ ಹೇಳಲಾಗಿತ್ತು.

ಪೊಲೀಸರಿಗೂ ಕಿವಿಗೊಡದ ಸಿಬ್ಬಂದಿ

ಪೊಲೀಸರಿಗೂ ಕಿವಿಗೊಡದ ಸಿಬ್ಬಂದಿ

ಈ ಶುಲ್ಕದ ಬಗ್ಗೆ ಕುಟುಂಬದವರು ವಾದಿಸಲು ಶುರುಮಾಡಿದಾಗ ಆ 'ಶುಲ್ಕ' 31,000 ರೂ.ಗೆ ಇಳಿಯಿತು. ಆದರೆ ಕುಟುಂಬದವರು ಪೊಲೀಸರನ್ನು ಭೇಟಿ ಮಾಡಲು ನಿರ್ಧರಿಸಿದರು. ಪೊಲೀಸ್ ಅಧಿಕಾರಿಯೊಬ್ಬರು ಅಂತ್ಯಸಂಸ್ಕಾರ ನಡೆಸುವ ಸ್ಥಳಕ್ಕೆ ಬಂದು ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿದರೂ ಆಸ್ಪತ್ರೆಯವರು ಅದಕ್ಕೆ ಕಿವಿಗೊಡಲಿಲ್ಲ.

ಕಂಟೇನ್ಮೆಂಟ್ ಝೋನ್ ಗಳಲ್ಲೇ ಬಂಧಿಯಾಗುತ್ತಿದೆಯಾ ಬೆಂಗಳೂರು?
ಕೊನೆಗೂ ಅವಕಾಶ ಸಿಗಲಿಲ್ಲ

ಕೊನೆಗೂ ಅವಕಾಶ ಸಿಗಲಿಲ್ಲ

ಅಂತ್ಯಸಂಸ್ಕಾರ ಮಾಡಲು ಬಂದಿದ್ದ ಸಿಬ್ಬಂದಿ, ಬೇಕಿದ್ದರೆ ಆಸ್ಪತ್ರೆಗೆ ಹೋಗಿ ಅಲ್ಲಿನ ಉನ್ನತ ಅಧಿಕಾರಿಗಳ ಜತೆ ಮಾತನಾಡಿ ಎಂದು ಪೊಲೀಸರಿಗೆ ಹೇಳಿದರು. ಇಡೀ ಘಟನೆಯನ್ನು ವಿಡಿಯೋದಲ್ಲಿ ಚಿತ್ರೀಕರಿಸಲು ಕುಟುಂಬದವರು ಮುಂದಾದಾಗ ಸಿಬ್ಬಂದಿ ಅವರ ಫೋನ್‌ ಕಸಿದುಕೊಂಡರು. ಕೊನೆಗೂ ಅವರ ದೇಹವನ್ನು ನೋಡಲು ಅವಕಾಶ ನೀಡದೆ ಅಂತ್ಯಸಂಸ್ಕಾರ ನಡೆಸಲಾಯಿತು.

ಆಸ್ಪತ್ರೆ ವಿರುದ್ಧ ದೂರು

ಆಸ್ಪತ್ರೆ ವಿರುದ್ಧ ದೂರು

ಇದು ಮುಗಿದ ಬಳಿಕವೂ ಕುಟುಂಬದವರು ಆಸ್ಪತ್ರೆ ಸಿಬ್ಬಂದಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಅವರು ತಮ್ಮ ಬಳಿ ಕುಟುಂಬದವರ ಯಾವ ಸಂಪರ್ಕ ಸಂಖ್ಯೆಯೂ ಇಲ್ಲದಿದ್ದರಿಂದ ಅಂತ್ಯಸಂಸ್ಕಾರಕ್ಕೆ ನೇರವಾಗಿ ಕಳುಹಿಸಲು ನಿರ್ಧರಿಸಿದ್ದೆವು ಎಂದೇ ಆಸ್ಪತ್ರೆ ಅಧಿಕಾರಿಗಳು ವಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದವರು ಆಸ್ಪತ್ರೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಬೆಂಗಳೂರಲ್ಲಿ ಕೊವಿಡ್ ರೋಗಿ ಶವ ನೀಡಲು ಖಾಸಗಿ ಆಸ್ಪತ್ರೆಯಿಂದ 9 ಲಕ್ಷ ಸುಲಿಗೆಬೆಂಗಳೂರಲ್ಲಿ ಕೊವಿಡ್ ರೋಗಿ ಶವ ನೀಡಲು ಖಾಸಗಿ ಆಸ್ಪತ್ರೆಯಿಂದ 9 ಲಕ್ಷ ಸುಲಿಗೆ

English summary
A family in West Bengal has alleged that a hospital as demanded Rs 51,000 to see father's body who died from coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X