ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಅಮಿತ್ ಶಾ ಹೆಲಿಕಾಪ್ಟರ್ ಪಶ್ಚಿಮ ಬಂಗಾಳದಲ್ಲಿ ಇಳಿಯಲಿದೆ

|
Google Oneindia Kannada News

ಕೋಲ್ಕತ್ತ, ಜನವರಿ 21: ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ ಮೂಲಕ ಆಗಮಿಸಲಿದ್ದ ಅಮಿತ್ ಶಾಗೆ ಮಮತಾ ಬ್ಯಾನರ್ಜಿ ಭರ್ಜರಿ ಶಾಕ್ ಕೊಟ್ಟಿದ್ದರು.

ಮಲಾಡ್‌ನಲ್ಲಿ ಮಂಗಳವಾರ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸುವುದು ನಿಗದಿಯಾಗಿತ್ತು. ಮಲ್ಡಾ ನ ಹೆಲಿಪ್ಯಾಡ್‌ ಇದಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ಮನವಿ ಮಾಡಿತ್ತು. ಆದರೆ ಅಧಿಕಾರಿಗಳು ಇದಕ್ಕೆ ನಿರಾಕರಿಸಿದ್ದರು.

ದೇಶ ಮುನ್ನಡೆಸುವ ಶಕ್ತಿ ಮಮತಾ ಅವರಿಗಿದೆ ಎಂದ ಕುಮಾರಸ್ವಾಮಿ ದೇಶ ಮುನ್ನಡೆಸುವ ಶಕ್ತಿ ಮಮತಾ ಅವರಿಗಿದೆ ಎಂದ ಕುಮಾರಸ್ವಾಮಿ

ಭದ್ರತೆ ಕಾರಣದಿಂದ ಅಮಿತ್ ಶಾ ಅವರ ಹೆಲಿಕಾಪ್ಟರ್ ಮಲಾಡ್‌ನಲ್ಲಿ ಇಳಿಯಲು ಅನುಮತಿ ನಿರಾಕರಿಸಿದ್ದರು ಅಧಿಕಾರಿಗಳು. ಇದು ಬಿಜೆಪಿಯನ್ನು ಕೆರಳಿಸಿತ್ತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಡುತ್ತಿರುವ ದ್ವೇಷದ, ಕೆಟ್ಟ ರಾಜಕಾರಣ ಇದು ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು.

West Bengal govt allows Amit Shah’s chopper to land in Malda

ಆದರೆ ಈಗ ಅಮಿತ್ ಶಾ ಅವರ ಹೆಲಿಕಾಫ್ಟರ್‌ ಮಲ್ಡಾನಲ್ಲಿ ಇಳಿಯಲು ಅನುಮತಿ ನೀಡಲಾಗಿದೆ. ಮಲ್ಡಾನ ದೇಸಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಕಾರ್ಯ ನಡೆಯುತ್ತಿದ್ದು, ಧೂಳು, ಮಣ್ಣು ರನ್‌ವೇ ಮೇಲಿದೆ ಹಾಗಾಗಿ ಶಾ ಅವರು ಹೆಲಿಕಾಪ್ಟರ್ ಇಲ್ಲಿ ಇಳಿಯುವುದು ಸೂಕ್ತ ಅಲ್ಲವೆಂದು ಮೊದಲಿಗೆ ನಿರಾಕರಿಸಲಾಗಿತ್ತು.

ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ

ಪಶ್ಚಿಮ ಬಂಗಾಳ ಬಿಜೆಪಿಯು ಇದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ರಾಜಕೀಯ ಪ್ರೇರತ ನಿರ್ಣಯ ಎಂದು ಕರೆದಿತ್ತು. ಭಯದಿಂದಾಗಿ ಮಮತಾ ಬ್ಯಾನರ್ಜಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆ ನಂತರ ಈಗ ಅನುಮತಿ ನೀಡಲಾಗಿದ್ದು, ನಾಳೆ ಮಲ್ಡಾನಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ.

ಅಮಿತ್ ಶಾಗೆ ಯಾವ ಜ್ವರವೂ ಇಲ್ಲ: ಬಿ.ಕೆ. ಹರಿಪ್ರಸಾದ್ ಮತ್ತೆ ವಿವಾದಅಮಿತ್ ಶಾಗೆ ಯಾವ ಜ್ವರವೂ ಇಲ್ಲ: ಬಿ.ಕೆ. ಹರಿಪ್ರಸಾದ್ ಮತ್ತೆ ವಿವಾದ

ಕೊಲ್ಕತ್ತದಲ್ಲಿ ಇತ್ತೀಚೆಗಷ್ಟೆ 'ಯುನಿಟಿ ಆಫ್ ಇಂಡಿಯಾ' ಹೆಸರಿನಲ್ಲಿ ನಡೆದ ವಿರೋಧಪಕ್ಷಗಳ ಮಹಾಸಮಾವೇಶಕ್ಕೆ ವಿರುದ್ಧವಾಗಿ ಈ ಬಿಜೆಪಿ ಸಮಾವೇಶ ಆಯೋಜಿಸಿದೆ. ಕೆಲವೇ ದಿನಗಳಲ್ಲಿ ಮೋದಿ ಸಹ ಪಶ್ಚಿಮ ಬಂಗಾಳದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

English summary
After saying no, West Bengal government allows Amit Shah's choper to land in Malda, where BJP organized a rally on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X