ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರಿಗೆ ಪ್ರಮಾಣವಚನ ಬೋಧಿಸುವ ಸ್ಪೀಕರ್ ಅಧಿಕಾರವನ್ನು ಹಿಂಪಡೆದ ಬಂಗಾಳ ರಾಜ್ಯಪಾಲರು

|
Google Oneindia Kannada News

ಕೋಲ್ಕತಾ, ಅಕ್ಟೋಬರ್ 4: ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿಯವರ ಶಾಸಕಾಂಗದ ಸದಸ್ಯರಿಗೆ ಪ್ರಮಾಣವಚನ ಬೋಧಿಸುವ ಅಧಿಕಾರವನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಕರ್ ಹಿಂಪಡೆದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಪಾಲರು ಇಂತಹ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ ಎಂದು ಹೇಳಿದ್ದು, ಇದು ರಾಜ್ಯಪಾಲ ಧನ್‌ಕರ್ ಮತ್ತು ಸ್ಪೀಕರ್ ಬ್ಯಾನರ್ಜಿ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

"ಕೋಲ್ಕತಾದ ಭವಾನಿಪುರ ಮತ್ತು ಮುರ್ಷಿದಾಬಾದ್ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಉಪ ಚುನಾವಣೆಗೆ ಕೆಲವು ದಿನಗಳ ಮೊದಲು ರಾಜಭವನದ ಒಂದು ಸೂಚನೆ ಪತ್ರ ಸ್ಪೀಕರ್ ಕಚೇರಿಗೆ ತಲುಪಿತ್ತು. ಪತ್ರದಲ್ಲಿ ಸಂವಿಧಾನದ ಸೆಕ್ಷನ್ 188 ಅನ್ನು ಉಲ್ಲೇಖಿಸಿದ್ದು, ಇದು ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸುವ ಅಧಿಕಾರ ನೀಡುತ್ತದೆ," ಎಂದು ರಾಜ್ಯ ವಿಧಾನಸಭೆಯ ಅನಾಮಧೇಯ ಅಧಿಕಾರಿಯೊಬ್ಬರು ಹೇಳಿದರು.

West Bengal Governor Withdraws Assembly Speaker’s Power To Administer Oath To MLAs

ಮುಖ್ಯಮಂತ್ರಿಯಾಗಿ ಮುಂದುವರಿಯಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷೆ ಮಮತಾ ಬ್ಯಾನರ್ಜಿ ಭಾನುವಾರ ಭವಾನಿಪುರ ಕ್ಷೇತ್ರದಲ್ಲಿ ದಾಖಲೆಯ ಅಂತರದಿಂದ ಗೆದ್ದಿದ್ದಾರೆ. ನವೆಂಬರ್ 4 ರೊಳಗೆ ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಅಗತ್ಯವಿದೆ.

ದುರ್ಗಾ ಪೂಜೆ ಹಬ್ಬ ಮುಗಿಸಿ ಒಂದು ವಾರದ ನಂತರ ನಡೆದ ಮಾರ್ಚ್- ಏಪ್ರಿಲ್ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿ ಸೋತಿದ್ದ ಮಮತಾ ಬ್ಯಾನರ್ಜಿ ಮೇ.5ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಜುಲೈ 2019ರಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಜಗದೀಪ್ ಧನ್‌ಕರ್ ಮತ್ತು ರಾಜ್ಯ ಸರ್ಕಾರ ನಡುವಿನ ತಿಕ್ಕಾಟ ಸದಾ ಸುದ್ದಿಯಲ್ಲಿದೆ. ರಾಜ್ಯಪಾಲ ಧನ್‌ಕರ್ ಅವರ ಇತ್ತೀಚಿನ ನಡೆ ಹೊಸ ವಿವಾದಕ್ಕೆ ಕಾರಣವಾಗಬಹುದು ಎಂದು ಟಿಎಂಸಿ ನಾಯಕರು ಮಾತನಾಡಿದ್ದಾರೆ.

ವಿಧಾನಸಭೆಯಲ್ಲಿ ತಮ್ಮ ಭಾಷಣದ ನೇರ ಪ್ರಸಾರಕ್ಕಾಗಿ ರಾಜ್ಯಪಾಲ ಜಗದೀಪ್ ಧನ್‌ಕರ್ ಕೋರಿಕೆ ಒಳಗೊಂಡಂತೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಭಿನ್ನಾಭಿಪ್ರಾಯ ಹೊಂದಿದ್ದರು. ಬಿಮನ್ ಬ್ಯಾನರ್ಜಿ ಭಾಷಣದ ನೇರ ಪ್ರಸಾರ ಅನುಮತಿಸಿರಲಿಲ್ಲ. ರಾಜ್ಯಪಾಲರು ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸ್ಪೀಕರ್ ದೂರಿದ್ದರು. ಸೆಪ್ಟೆಂಬರ್ 15ರಂದು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಔಚಿತ್ಯವನ್ನು ನೆನಪಿಸಿದ್ದಾರೆ.

"ಸಂವಿಧಾನದ 176ನೇ ವಿಧಿಯ ಅಡಿಯಲ್ಲಿ, ನಾನು ಫೆಬ್ರವರಿ 7, 2020 ಮತ್ತು ಜುಲೈ 2, 2021ರಂದು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ಎರಡೂ ಸಂದರ್ಭಗಳಲ್ಲಿ, 'ತುರ್ತುಸ್ಥಿತಿ'ಯಂತಹ ಪರಿಸ್ಥಿತಿಯಲ್ಲಿ ಭಾಷಣವನ್ನು ಕತ್ತಲು ಮಾಡಲಾಯಿತು,'' ಎಂದು ರಾಜ್ಯಪಾಲರು ಬರೆದಿದ್ದಾರೆ.

"ಆತ್ಮ ಶೋಧನೆಯಲ್ಲಿ ತೊಡಗಲು, ಸಾಂವಿಧಾನಿಕ ಸತ್ವ ಮತ್ತು ಚೈತನ್ಯವನ್ನು ನಂಬಲು ಮತ್ತು ಕ್ರಮಗಳನ್ನು ನಿರ್ದೇಶಿಸಲು ಹಾಗೂ ನೀವು ಹೊಂದಿರುವ ಕಚೇರಿಯಿಂದ ಬೇಡಿಕೆಯಿರುವ ಸಾಂವಿಧಾನಿಕ ಪ್ರಿಸ್ಕ್ರಿಪ್ಷನ್ ಮತ್ತು ಔಚಿತ್ಯವನ್ನು ಸರಿಯಾಗಿ ಗಮನಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ,'' ಎಂದು ರಾಜ್ಯಪಾಲ ಜಗದೀಪ್ ಧನ್‌ಕರ್ ಪತ್ರದಲ್ಲಿ ತಿಳಿಸಿದ್ದಾರೆ.

ರಾಜಭವನದ ಪತ್ರದಲ್ಲಿ ಮಂತ್ರಿಗಳು ಮತ್ತು ಶಾಸಕರಿಗೆ ಪ್ರಮಾಣವಚನ ಬೋಧಿಸಲು ರಾಜ್ಯಪಾಲರಿಗೆ ಅಧಿಕಾರವಿದೆ ಎಂದು ಹೇಳಿದೆ. "ರಾಜ್ಯಪಾಲರು ರಾಜಭವನದಲ್ಲಿ ಸಚಿವರಿಗೆ ಪ್ರಮಾಣವಚನ ಬೋಧಿಸಿದರೆ, ಶಾಸಕರು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ, ಸ್ಪೀಕರ್ ರಾಜ್ಯಪಾಲರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈಗ ರಾಜಭವನ ಆ ಅನುಮತಿಯನ್ನು ಹಿಂಪಡೆದಿದೆ," ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ಅನಾಮಧೇಯ ಅಧಿಕಾರಿ ಹೇಳಿದರು.

"ಸಂವಿಧಾನವು ಭಾರತದ ರಾಷ್ಟ್ರಪತಿಗೆ ಅಥವಾ ಅವರ ಪ್ರತಿನಿಧಿಗಳಿಗೆ ಸಂಸತ್ತಿನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಅಧಿಕಾರ ನೀಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. ರಾಷ್ಟ್ರಪತಿಗಳು ಈ ಅಧಿಕಾರವನ್ನು ಲೋಕಸಭಾ ಸ್ಪೀಕರ್‌ಗೆ ನಿಯೋಜಿಸುತ್ತಾರೆ," ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅನುಚ್ಛೇದ 188 ಶಾಸಕರ ಪ್ರಮಾಣವಚನ ಅಥವಾ ದೃಢೀಕರಣದ ಬಗ್ಗೆ ಹೇಳುತ್ತದೆ. "ರಾಜ್ಯದ ಪ್ರತಿಯೊಬ್ಬ ಶಾಸಕಾಂಗದ ಸದಸ್ಯ ಅಥವಾ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ತೆಗೆದುಕೊಳ್ಳುವ ಮೊದಲು, ರಾಜ್ಯಪಾಲರ ಮುಂದೆ ಅಥವಾ ಅವರ ಪರವಾಗಿ ನೇಮಕಗೊಂಡ ವ್ಯಕ್ತಿ ಒಪ್ಪಿಕೊಳ್ಳಬೇಕು ಎಂಬುದು ಸಂವಿಧಾನದ ಮೂರನೇ ಅಧ್ಯಾಯದ ಉದ್ದೇಶವಾಗಿದೆ."

ಇನ್ನು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸ್ಪೀಕರ್ ಬಿಮನ್ ಬ್ಯಾನರ್ಜಿ ನಿರಾಕರಿಸಿದ್ದು, ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಸ್ಪೀಕರ್‌ಗೆ ಕರೆ ಮಾಡಿದ್ದಾರೆ. ಸ್ಪೀಕರ್ ಕಚೇರಿಯ ಅಧಿಕಾರಿಗಳು ರಾಜಭವನದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

English summary
West Bengal governor Jagdeep Dhankhar has withdrawn assembly speaker Biman Banerjee’s power to administer the oath to the members of the state legislature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X