ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಹಿಂಸಾಚಾರ: ರಾಜ್ಯಪಾಲರಿಂದ ಸರ್ಕಾರಕ್ಕೆ ಖಡಕ್ ಸಂದೇಶ

|
Google Oneindia Kannada News

ಕೊಲ್ಕತ್ತ, ಜೂನ್ 13: ಪಶ್ಚಿಮ ಬಂಗಾಳ ರಾಜ್ಯದಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಇಂದು ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿ ಅವರು ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದರು.

ಪ್ರಮುಖ ಪಕ್ಷಗಳ ಮುಖಂಡರ ಸಭೆ ಕರೆದಿದ್ದ ರಾಜ್ಯಪಾಲರು ಬಂಗಾಳದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿ, ಸರ್ಕಾರ ಹಾಗೂ ಎಲ್ಲ ಪಕ್ಷಗಳಿಗೂ ಖಡಕ್ ಸಂದೇಶವನ್ನು ನೀಡಿದರು.

ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರ ವಿಷಾದದ ಟ್ವೀಟ್ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರ ವಿಷಾದದ ಟ್ವೀಟ್

ನ್ಯಾಯವಾದ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಾನೂನು ಸುವ್ಯವಸ್ಥೆಯನ್ನು ಪಾಲಿಸಿ ಎಂದು ರಾಜ್ಯಪಾಲರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಜೊತೆಗೆ ಎಲ್ಲ ಪಕ್ಷಗಳಿಗೂ ರಚನಾತ್ಮಕ ರೀತಿಯಲ್ಲಿ ತಮ್ಮ ವಾದವನ್ನು ಮುಂದಿಡಿ, ದ್ವೇಷ ಹೆಚ್ಚಿಸುವ ಮಾತುಗಳು ಬೇಡ ಎಂದು ಅವರು ಹೇಳಿದ್ದಾರೆ.

West Bengal governor gives strong message to Government

ರಾಜ್ಯಪಾಲರು ಇಂದು ಕರೆದಿದ್ದ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರು, ಬಿಜೆಪಿ, ಸಿಪಿಐಎಂ, ಕಾಂಗ್ರೆಸ್‌ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈ ವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತಿವೆ. ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವೆ ಜಿದ್ದಾ-ಜಿದ್ದಿ ಏರ್ಪಟ್ಟಿದೆ.

ಬಂಗಾಳಕ್ಕೆ ಅವಮಾನವಾಗುವುದನ್ನು ಸಹಿಸೋಲ್ಲ, ರಾಜ್ಯಪಾಲರಿಗೂ ದೀದಿ ಎಚ್ಚರಿಕೆ!ಬಂಗಾಳಕ್ಕೆ ಅವಮಾನವಾಗುವುದನ್ನು ಸಹಿಸೋಲ್ಲ, ರಾಜ್ಯಪಾಲರಿಗೂ ದೀದಿ ಎಚ್ಚರಿಕೆ!

ಪಶ್ಚಿಮ ಬಂಗಾಳ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂಬ ಒತ್ತಾಯವೂ ಇದೇ ಸಮಯ ಕೇಳಿ ಬರುತ್ತಿದ್ದು, ರಾಜ್ಯಪಾಲರು ಸಹ ಆಡಳಿತ ಪಕ್ಷದ ಬಗ್ಗೆ ಅಸಹನೆ ಹೊಂದಿದ್ದಾರೆ. ಹಿಂಸೆ ಹೀಗೆಯೇ ಮುಂದುವರೆದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಆಗುವ ಸಂಭವ ಇದೆ.

English summary
West Bengal governor Keshari Lal Tripati call for all party meeting today to discuss violence in the state. He said government should fairly enforcement of law and order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X