ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಗುಟ್ಕಾ, ಪಾನ್ ಮಸಾಲಾ ನಿಷೇಧ

|
Google Oneindia Kannada News

ಕೋಲ್ಕತಾ, ನವೆಂಬರ್ 7: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಗುರುವಾರದಿಂದ ಅನ್ವಯವಾಗುವಂತೆ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟದ ಮೇಲಿನ ನಿಷೇಧವನ್ನು ಇನ್ನೂ ಒಂದು ವರ್ಷ ಕಾಲ ವಿಸ್ತರಿಸಿದೆ.

ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ಕುಟುಂಬ ಇಲಾಖೆಯ ಆಹಾರ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.

ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ತಯಾರಿಸುವುದು, ಸಂಗ್ರಹಿಸುವುದು, ಸಾಗಾಟ ಮಾಡುವುದು, ಪ್ರದರ್ಶಿಸುವುದು ಮತ್ತು ಮಾರಾಟ ಮಾಡುವುದನ್ನು ರಾಜ್ಯದಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ. ಆದರೆ ರಾಜ್ಯದಲ್ಲಿ ನಿಕೋಟಿನ್ ಹೊಂದಿರುವ ಸಿಗರೇಟ್ ಉತ್ಪನ್ನಗಳ ಮೇಲೆ ನಿಷೇಧ ವಿಧಿಸಿಲ್ಲ.

ತಂಬಾಕು ಕಂಪನಿಗಳೊಂದಿಗೆ ಸಹಭಾಗಿತ್ವ ಬೇಡ; ಉಡುಪಿ ಡಿಸಿ ಎಚ್ಚರಿಕೆತಂಬಾಕು ಕಂಪನಿಗಳೊಂದಿಗೆ ಸಹಭಾಗಿತ್ವ ಬೇಡ; ಉಡುಪಿ ಡಿಸಿ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ಶೇ 20ಕ್ಕೂ ಹೆಚ್ಚಿನ ಜನರು ಹೊಗೆರಹಿತ ತಂಬಾಕನ್ನು ಬಳಸುತ್ತಾರೆ. ಇವರಲ್ಲಿ ಶೇ 22.8ರಷ್ಟು ಪುರುಷರು ಮತ್ತು ಶೇ 17.2ರಷ್ಟು ಮಹಿಳೆಯರಿದ್ದಾರೆ ಎಂದು ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ 2 (ಗ್ಯಾಟ್ಸ್ 2) ವರದಿ ತಿಳಿಸಿದೆ.

ಎಲ್ಲ ಉತ್ಪನ್ನಗಳ ಮೇಲೆ ನಿಷೇಧ

ಎಲ್ಲ ಉತ್ಪನ್ನಗಳ ಮೇಲೆ ನಿಷೇಧ

ತಂಬಾಕು ಮತ್ತು ನಿಕೋಟಿನ್ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿವೆ. ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಂಬಾಕು ಅಥವಾ ನಿಕೋಟಿನ್ ಪದಾರ್ಥಗಳನ್ನು ಒಳಗೊಂಡಿರುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಹೆಸರುಗಳ ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿ ನಿಷೇಧಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಪಾನ್ ಮಸಾಲ ಮೇಲಿನ ಜಿಎಸ್ಟಿ ತಗ್ಗಿಸಲು ಕರ್ನಾಟಕ ಬಿಜೆಪಿ ಒತ್ತಾಯ!ಪಾನ್ ಮಸಾಲ ಮೇಲಿನ ಜಿಎಸ್ಟಿ ತಗ್ಗಿಸಲು ಕರ್ನಾಟಕ ಬಿಜೆಪಿ ಒತ್ತಾಯ!

24 ರಾಜ್ಯಗಳಲ್ಲಿ ನಿಷೇಧ

24 ರಾಜ್ಯಗಳಲ್ಲಿ ನಿಷೇಧ

ಮಮತಾ ಬ್ಯಾನರ್ಜಿ ಸರ್ಕಾರವು ಪಶ್ಚಿಮ ಬಂಗಾಲದಲ್ಲಿ 2013ರಲ್ಲಿ ಮೊದಲ ಬಾರಿಗೆ ಗುಟ್ಕಾ ಮತ್ತು ಪಾನ್ ಮಸಾಲಾಗಳ ಮೇಲೆ ನಿಷೇಧ ಹೇರಿತ್ತು.

ಪಶ್ಚಿಮ ಬಂಗಾಳದ ನೆರೆಯ ರಾಜ್ಯ ಬಿಹಾರ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ರಾಜಸ್ಥಾನ ಕೂಡ ಈಗಾಗಲೇ ತಂಬಾಕು, ನಿಕೋಟಿನ್, ಮ್ಯಾಗ್ನೇಷಿಯಂ ಕಾರ್ಬೊನೇಟ್ ಮತ್ತು ಮಿನರಲ್ ಆಯಿಲ್ ಹೊಂದಿರುವ ಪಾನ್ ಮಸಾಲಾಗಳನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಒಟ್ಟು 24 ರಾಜ್ಯಗಳಲ್ಲಿ ಈ ನಿಷೇಧ ಭಾಗಶಃ ಜಾರಿಯಲ್ಲಿದೆ.

ರಾಜ್ಯದಲ್ಲಿಯೂ ನಿಷೇಧಿಸಲಾಗಿತ್ತು

ರಾಜ್ಯದಲ್ಲಿಯೂ ನಿಷೇಧಿಸಲಾಗಿತ್ತು

ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾಗಳ ಮಾರಾಟವನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 2013ರಲ್ಲಿ ನಿಷೇಧಿಸಿತ್ತು. ಆದರೆ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಹಿಂಪಡೆಯಲು ತೀರ್ಮಾನಿಸಲಾಗಿತ್ತು. ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಪ್ರತ್ಯೇಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಇಲ್ಲಿ ಇದೇ ಮೊದಲು ಪಾನ್ ಜಗಿದು ಉಗಿದಿದ್ದಕ್ಕೆ ದಂಡ!ಇಲ್ಲಿ ಇದೇ ಮೊದಲು ಪಾನ್ ಜಗಿದು ಉಗಿದಿದ್ದಕ್ಕೆ ದಂಡ!

ಎಲ್ಲೆಲ್ಲಿ ನಿಷೇಧ ಜಾರಿ?

ಎಲ್ಲೆಲ್ಲಿ ನಿಷೇಧ ಜಾರಿ?

ಬಿಹಾರದಲ್ಲಿ 2019ರ ಆಗಸ್ಟ್‌ನಲ್ಲಿ ನಿತೀಶ್ ಕುಮಾರ್ ಸರ್ಕಾರವು ಮ್ಯಾಗ್ನೇಷಿಯಂ ಕಾರ್ಬೋನೇಟ್ ಒಳಗೊಂಡಿರುವ 12 ಪಾನ್ ಮಸಾಲಾ ಉತ್ಪನ್ನಗಳನ್ನು ನಿಷೇಧಿಸಿದೆ. ರಾಜಸ್ಥಾನದಲ್ಲಿ ಪ್ರಸಕ್ತ ವರ್ಷದ ಗಾಂಧಿ ಜಯಂತಿಯ ಸಂದರ್ಭದಿಂದ ಮ್ಯಾಗ್ನೇಷಿಯಂ, ಕಾರ್ಬೋನೇಟ್, ನಿಕೋಟಿನ್ ಮತ್ತು ಮಿನರಲ್ ಆಯಿಲ್ ಒಳಗೊಂಡ ಎಲ್ಲ ಬಗೆಯ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. 2012ರಲ್ಲಿ ತಂಬಾಕು, ಅಡಿಕೆಯಲ್ಲದೆ ಕೃತಕ ಸುವಾಸನೆ ಹೊಂದಿದ ಸುಪಾರಿ ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಮಹಾರಾಷ್ಟ್ರ ಸರ್ಕಾರ ಜುಲೈನಿಂದ ಪುನಃ ಜಾರಿಗೊಳಿಸಿದೆ. ಉತ್ತರಾಖಂಡದಲ್ಲಿ ಕೂಡ ಸ್ಯಾಶೆಗಳಲ್ಲಿ ಮಾರಾಟವಾಗುವ ತಂಬಾಕು ಮತ್ತು ಪಾನ್ ಮಸಾಲಾ ಪಾಕೆಟ್‌ಗಳನ್ನು ರಾಜ್ಯದಾದ್ಯಂತ ನಿಷೇಧಿಸಲಾಗಿದೆ.

English summary
West Bengal has extended the ban on manufacture, distribution, storage, sale and transport of Gutka and Pan Masala across the state from Nov 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X