ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಬಿಜೆಪಿಗೆ ಸೇರಿದ ದಿನ ವೇದಿಕೆಯಲ್ಲೇ ಬಸ್ಕಿ ಹೊಡೆದ ನಾಯಕ!

|
Google Oneindia Kannada News

ಕೋಲ್ಕತ್ತಾ, ಮಾರ್ಚ್.04: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಬಹಳಷ್ಟು ಟಿಎಂಸಿ ನಾಯಕರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಈ ಸಾಲಿಗೆ ಸೇರಿದ ಮಾಜಿ ಟಿಎಂಸಿ ಮುಖಂಡ ಸುಶಾಂತ್ ಪಾಲ್ ತಮ್ಮ ವಿಭಿನ್ನ ನಡೆಯಿಂದ ಸಖತ್ ಸುದ್ದಿಯಾಗಿದ್ದಾರೆ.

 ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ; ತೃಣಮೂಲಕ್ಕೆ ಬಲ ತುಂಬಲು ಆರ್‌ಜೆಡಿ ಜೊತೆ ಮೈತ್ರಿ? ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ; ತೃಣಮೂಲಕ್ಕೆ ಬಲ ತುಂಬಲು ಆರ್‌ಜೆಡಿ ಜೊತೆ ಮೈತ್ರಿ?

ಮಾರ್ಚ್.03ರಂದು ಪಶ್ಚಿಮ ಮೇದಿನಿಪುರ್ ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸುಶಾಂತ್ ಪಾಲ್ ಅವರು ಬಹಿರಂಗ ವೇದಿಕೆಯಲ್ಲೇ ತಮ್ಮ ಕಿವಿ ಹಿಡಿದುಕೊಂಡು ಮೂರು ಬಾರಿ ಬಸ್ಕಿ ಹೊಡೆದಿದ್ದಾರೆ. ಇಷ್ಟುದಿನ ನಾನು ಟಿಎಂಸಿಯಲ್ಲಿ ಉಳಿದುಕೊಂಡಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

"ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮಾಡಿದ ಎಲ್ಲ ಪಾಪಕಾರ್ಯಗಳಿಗೆ ನಾನು ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಸಾರ್ವಜನಿಕರಲ್ಲಿ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇವೆ. ಬಸ್ಕಿ ಹೊಡೆಯುವುದು ನನಗೆ ನಾನು ನೀಡಿಕೊಂಡ ಸಣ್ಣ ಶಿಕ್ಷೆ" ಎಂದು ಸುಶಾಂತ್ ಪಾಲ್ ಹೇಳಿದ್ದಾರೆ.

West Bengal Election: TMC leader Susanta Pal Sit-ups On Stage As He Joins BJP

2005ರಲ್ಲಿ ಟಿಎಂಸಿಗೆ ಸುಶಾಂತ್ ಪಾಲ್ ಸೇರ್ಪಡೆ:

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಸರ್ಕಾರವನ್ನು ಸೋಲಿಸುವ ಉದ್ದೇಶದಿಂದ ನಾನು 2005ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆನು. ಅದಕ್ಕೂ ಮೊದಲು ನಾನು ಬಿಜೆಪಿ ಪಕ್ಷದಲ್ಲಿಯೇ ಇದ್ದೆ ಎಂದು ಸುಶಾಂತ್ ಪಾಲ್ ಹೇಳಿದ್ದಾರೆ. ಇನ್ನು, ಸುಶಾಂತ್ ಪಾಲ್ ಬಸ್ಕಿ ಹೊಡೆದ ಸಂದರ್ಭದಲ್ಲಿ ಇತ್ತೀಚಿಗಷ್ಟೇ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಚಿವ ಸುವೇಂದು ಅಧಿಕಾರಿ ಉಪಸ್ಥಿತರಿದ್ದರು.

West Bengal Election: TMC leader Susanta Pal Sit-ups On Stage As He Joins BJP

ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ:

ಪಶ್ಚಿಮ ಬಂಗಾಳ ವಿಧಾನಸಭೆಯ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಘೋಷಿಸಿದೆ. ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿತ್ತು. ಈ ಪೈಕಿ ಪಶ್ಚಿಮ ಬಂಗಾಳದಲ್ಲಿ ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.

English summary
West Bengal Election: TMC leader Susanta Pal Sit-ups On Stage As He Joins BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X