• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳದಲ್ಲಿ 3 ಸಚಿವರು ಸೇರಿ 20 ಶಾಸಕರಿಗೆ ಟಿಎಂಸಿ ಟಿಕೆಟ್ ಇಲ್ಲ!

|

ಕೋಲ್ಕತ್ತಾ, ಮಾರ್ಚ್.05: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಟಿಎಂಸಿ ಪಕ್ಷವು ಬಿಡುಗಡೆಗೊಳಿಸಿದ 291 ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಸ್ತುತ ಸಚಿವರಾಗಿ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ 20 ನಾಯಕರ ಹೆಸರುಗಳನ್ನು ಕೈಬಿಡಲಾಗಿದೆ. 294 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಟಿಎಂಸಿ ತನ್ನ ಮಿತ್ರಪಕ್ಷ ಗೋರ್ಖಾ ಜನಮುಕ್ತಿ ಮೋರ್ಚಾಗೆ ಬಿಟ್ಟು ಕೊಟ್ಟಿದೆ.

ತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿ

ಹಣಕಾಸು ಸಚಿವ ಅಮಿತ್ ಮಿತ್ರಾ, ಕೃಷಿ ಸಚಿವ ಪುರ್ನೆಂದು ಬಸು ಹಾಗೂ ಮತ್ತೊಬ್ಬ ಸಚಿವ ಅಬ್ದುಲ್ ರಜ್ಜಾಕ್ ಮೊಲ್ಲಾ ಹೆಸರನ್ನು ಈ ಬಾರಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಮೂವರು ಸಚಿವರನ್ನು ಅವರ ವಯಸ್ಸು ಮತ್ತು ಕೊರೊನಾವೈರಸ್ ಭೀತಿ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾಗಿದೆ.

ಮೂವರು ಸಚಿವರ ಬದಲು ಬೇರೆಯವರಿಗೆ ಟಿಕೆಟ್

ಮೂವರು ಸಚಿವರ ಬದಲು ಬೇರೆಯವರಿಗೆ ಟಿಕೆಟ್

ಪಶ್ಚಿಮ ಬಂಗಾಳದಲ್ಲಿ ಹಾಲಿ ಸಚಿವ ಸ್ಥಾನದಲ್ಲಿ ಇರುವ ಮೂವರ ಬದಲಿಗೆ ಬೇರೆ ನಾಯಕರಿಗೆ ಟಿಎಂಸಿ ಟಿಕೆಟ್ ನೀಡಿದೆ. ಖರ್ದಾಹಾ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಮಿತ್ರಾ ಬದಲಿಗೆ ಕಾಜಲ್ ಸಿನ್ಹಾರಿಗೆ ಟಿಕೆಟ್ ನೀಡಲಾಗಿದೆ. ಭಂಗಾರ್ ಕ್ಷೇತ್ರದಲ್ಲಿ ಅಬ್ದುಲ್ ರಜ್ಜಾಕ್ ಮೊಲ್ಲಾ ಬದಲಿಗೆ ಮೊಹಮ್ಮದ್ ರೆಜೌಲ್ ಕರಿಮ್ ಅವರಿಗೆ ಅವಕಾಶ ನೀಡಲಾಗಿದೆ. ಪುರ್ನೆಂದು ಬಸು ಬದಲಿಗೆ ರಾಜರಥ್ ಗೋಪಾಲ್ ಪುರ್ ಕ್ಷೇತ್ರದಲ್ಲಿ ಅದಿಥಿ ಮುಂಶಿ ಅವರಿಗೆ ಟಿಎಂಸಿ ಟಿಕೆಟ್ ನೀಡಲಾಗಿದೆ.

ಸಾಂಕ್ರಾಮಿಕ ಪಿಡುಗಿನ ವೇಳೆಯಲ್ಲಿ ಅಪಾಯ ಬೇಡ

ಸಾಂಕ್ರಾಮಿಕ ಪಿಡುಗಿನ ವೇಳೆಯಲ್ಲಿ ಅಪಾಯ ಬೇಡ

ಪಶ್ಚಿಮ ಬಂಗಾಳ ರಾಜಕಾರಣದಿಂದ ನಾನು ದೂರ ಹೋಗುವುದಿಲ್ಲ ಎಂದು ಸಚಿವ ಅಮಿತ್ ಮಿತ್ರಾ ಹೇಳಿದ್ದಾರೆ. ಭವಿಷ್ಯದಲ್ಲಿ ಮತ್ತೆ ನಾನು ರಾಜಕೀಯ ಪ್ರವೇಶ ಮಾಡುತ್ತೇನೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

291 ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

291 ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು 291 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಮೊದಲ ಪಕ್ಷ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 291 ಅಭ್ಯರ್ಥಿಗಳ ಪೈಕಿ 50 ಮಹಿಳೆಯರು, 79 ಪರಿಶಿಷ್ಟ ಜಾತಿ, 17 ಪರಿಶಿಷ್ಟ ಪಂಗಡ, 42 ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಡಾರ್ಜಿಲಿಂಗ್, ಕಲಿಂಪೊಂಗ್, ಕುರ್ಸಿಯಾಂಗ್ ಕ್ಷೇತ್ರಗಳನ್ನು ಟಿಎಂಸಿಯ ಮಿತ್ರ ಪಕ್ಷ ಗೋರ್ಖಾ ಜನಮುಕ್ತಿ ಮೋರ್ಚಾಗೆ ನೀಡಲಾಗಿದೆ.

ರಾಜ್ಯದಲ್ಲಿ 8 ಹಂತಗಳಲ್ಲಿ ವಿಧಾನಸಭೆಗೆ ಮತದಾನ

ರಾಜ್ಯದಲ್ಲಿ 8 ಹಂತಗಳಲ್ಲಿ ವಿಧಾನಸಭೆಗೆ ಮತದಾನ

ಪಶ್ಚಿಮ ಬಂಗಾಳ ವಿಧಾನಸಭೆಯ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಘೋಷಿಸಿದೆ. ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿತ್ತು. ಈ ಪೈಕಿ ಪಶ್ಚಿಮ ಬಂಗಾಳದಲ್ಲಿ ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.

English summary
West Bengal Election: Including 3 Ministers Total 20 MLAs Dropped From TMC Candidate List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X