ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ 26: ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಫೆ.26ರಂದು ಸುದ್ದಿಗೋಷ್ಠಿ ನಡೆಸಿದ ಸಿಇಸಿ ಸುನಿಲ್ ಅರೋರಾ ಅವರು ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿರುವುದಾಗಿ ತಿಳಿಸಿದ್ದು, ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

Breaking: 5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಸಂಪೂರ್ಣ ವಿವರBreaking: 5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಸಂಪೂರ್ಣ ವಿವರ

ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ. ಮತದಾನಕ್ಕೆ 1 ಗಂಟೆ ಹೆಚ್ಚಿನ ಅವಧಿ ನೀಡಲಾಗಿದೆ ಎಂದು ಹೇಳಿದರು. ಇನ್ನಷ್ಟು ವಿವರಗಳು...

ಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ ಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ

 ಪಶ್ಚಿಮ ಬಂಗಾಳ ಚುನಾವಣೆ 2021 ವಿವರ

ಪಶ್ಚಿಮ ಬಂಗಾಳ ಚುನಾವಣೆ 2021 ವಿವರ

ಮೊದಲ ಹಂತ: ಮಾರ್ಚ್ 27
ಎರಡನೇ ಹಂತ: ಏಪ್ರಿಲ್ 1
ಮೂರನೇ ಹಂತ: ಏಪ್ರಿಲ್ 6
ನಾಲ್ಕನೇ ಹಂತ: ಏಪ್ರಿಲ್ 10
ಐದನೇ ಹಂತ: ಏಪ್ರಿಲ್ 17
ಆರನೇ ಹಂತ: ಏಪ್ರಿಲ್ 22
ಏಳನೇ ಹಂತ: ಏಪ್ರಿಲ್ 26
ಎಂಟನೇ ಹಂತ: ಏಪ್ರಿಲ್ 29

 ಪಶ್ಚಿಮ ಬಂಗಾಳ ಕ್ಷೇತ್ರಗಳ ವಿವರ...

ಪಶ್ಚಿಮ ಬಂಗಾಳ ಕ್ಷೇತ್ರಗಳ ವಿವರ...

1ನೇ ಹಂತ: 30 ಕ್ಷೇತ್ರಗಳು. 2 ಮಾರ್ಚ್ ಅಧಿಸೂಚನೆ, 9ನೇ ಮಾರ್ಚ್ ನಾಮಪತ್ರ 10ನೇ ಮಾರ್ಚ್ ಪರಿಶೀಲನೆ. 12ನೇ ಮಾರ್ಚ್ ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಮಾರ್ಚ್ 27 ಚುನಾವಣೆ.

2ನೇ ಹಂತ: 30 ಕ್ಷೇತ್ರ. 5ನೇ ಮಾರ್ಚ್ ಅಧಿಸೂಚನೆ. 12 ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 15 ಮಾರ್ಚ್ ನಾಮಪತ್ರ ಪರಿಶೀಲನೆ ಮತ್ತು 17ನೇ ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ. 1 ಏಪ್ರಿಲ್ ಚುನಾವಣೆ.

3ನೇ ಹಂತ- ಚುನಾವಣೆ ಏಪ್ರಿಲ್ 6ರಂದು ನಡೆಯಲಿದೆ.

4ನೇ ಹಂತ: 44 ಕ್ಷೇತ್ರಗಳು. 16 ಮಾರ್ಚ್ ಅಧಿಸೂಚನೆ ಪ್ರಕಟ, 23 ಮಾರ್ಚ್ ನಾಮಪತ್ರ ಸಲ್ಲಿಸಲು ಕೊನೆಯ ದಿನ, 24 ಮಾರ್ಚ್ ನಾಮಪತ್ರ ಪರಿಶೀಲನೆ. 27 ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ, 10ನೇ ಏಪ್ರಿಲ್ ಮತದಾನ.

5ನೇ ಹಂತ: 45 ಕ್ಷೇತ್ರಗಳು. ಮಾರ್ಚ್ 23 ಅಧಿಸೂಚನೆ, 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 31 ನಾಮಪತ್ರ ಪರಿಶೀಲನೆ, 3 ನಾಮಪತ್ರ ವಾಪಸ್‌ಗೆ ಕೊನೆಯ ದಿನ. 17 ಏಪ್ರಿಲ್ ಚುನಾವಣೆ.

6ನೇ ಹಂತ- 43 ಕ್ಷೇತ್ರಗಳು. ಮಾರ್ಚ್ 26 ಅಧಿಸೂಚನೆ, ಏಪ್ರಿಲ್ 3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 5 ಏಪ್ರಿಲ್ ನಾಮಪತ್ರ ಪರಿಶೀಲನೆ, 7 ಏಪ್ರಿಲ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ. 22 ಏಪ್ರಿಲ್ ಚುನಾವಣೆ.

7ನೇ ಹಂತ -36 ಕ್ಷೇತ್ರಗಳು. ಅಧಿಸೂಚನೆ 31 ಮಾರ್ಚ್, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ 7 ಏಪ್ರಿಲ್, ಮತಪತ್ರ ಪರಿಶೀಲನೆ 8 ಏಪ್ರಿಲ್, 12 ಏಪ್ರಿಲ್ ನಾಮಪತ್ರ ವಾಪಸ್, 27 ಏಪ್ರಿಲ್ ಚುನಾವಣೆ.

8ನೇ ಹಂತ- 35 ಕ್ಷೇತ್ರಗಳು. 31 ಮಾರ್ಚ್ ಅಧಿಸೂಚನೆ, 7 ಏಪ್ರಿಲ್ ಮತಪತ್ರ ಸಲ್ಲಿಕೆಗೆ ಕೊನೆಯ ದಿನ, 8 ಏಪ್ರಿಲ್ ನಾಮಪತ್ರ ಪರಿಶೀಲನೆ. 12 ಏಪ್ರಿಲ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ, 29 ಏಪ್ರಿಲ್ ಚುನಾವಣೆ.

 294 ಕ್ಷೇತ್ರಗಳಿಗೆ ಚುನಾವಣೆ

294 ಕ್ಷೇತ್ರಗಳಿಗೆ ಚುನಾವಣೆ

ಈ ಬಾರಿ ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 2016ರಲ್ಲಿ ಏಪ್ರಿಲ್ 4 ರಿಂದ ಮೇ 5ರಂದು ಚುನಾವಣೆ ನಡೆದಿದ್ದು, 211 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಪುನಃ ಅಧಿಕಾರಕ್ಕೆ ಬಂದಿತ್ತು. ಕಳೆದ ಬಾರಿ ಏಳು ಹಂತಗಳಲ್ಲಿ ಚುನಾವಣೆ ನಡೆದಿತ್ತು.

 ಪ್ರಬಲ ಪೈಪೋಟಿಯಲ್ಲಿ ಬಿಜೆಪಿ- ತೃಣಮೂಲ ಕಾಂಗ್ರೆಸ್

ಪ್ರಬಲ ಪೈಪೋಟಿಯಲ್ಲಿ ಬಿಜೆಪಿ- ತೃಣಮೂಲ ಕಾಂಗ್ರೆಸ್

ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಾರ್ಟಿ, ಎಡಪಕ್ಷ ಹಾಗೂ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಗಳಾಗಿವೆ. ಅಸಾದುದ್ದಿನ್ ಓವೈಸಿಯ ಎಐಎಂಐಎಂ ಕೂಡ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸುವುದಾಗಿ ತಿಳಿದುಬಂದಿದೆ. ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಇದ್ದು, ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧಿಸುತ್ತಿವೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆ ಕಾವು ಆರಂಭವಾಗಿದೆ.

English summary
West Bengal Election Dates 2021: Polls to be held in 8 phases; 27th Mar, 1st, 6th, 10th, 17th, 22nd, 26th and 29th April, Counting on 2nd May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X