ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಮತ್ತು ಹಿಂದೂಗಳಿಗೆ ಆದ್ಯತೆ ಹಿಂದಿಲ್ಲ 'ರಾಜಕೀಯ': ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಸಪ್ಟೆಂಬರ್.16: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಹಿಂದಿ ಭಾಷಿಗರು ಮತ್ತು ಹಿಂದೂಗಳನ್ನು ಸೆಳೆಯಲು ತೃಣಮೂಲ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಳ್ಳಿ ಹಾಕಿದ್ದಾರೆ.

ರಾಜ್ಯದಲ್ಲಿ ಶೇ.14ರಷ್ಟು ಹಿಂದಿ ಭಾಷಿಗರಲ್ಲಿ ಭಾರತೀಯ ಜನತಾ ಪಕ್ಷವು ಬೆಳೆಯುತ್ತಿರುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಹಿಂದಿ ಮಾತನಾಡುವ ಜನರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕಾಪಾಡಲು ಸರ್ಕಾರವು ಹಿಂದಿ ಅಕಾಡೆಮಿಯನ್ನು ಪುನಃ ಪರಿಚಯಿಸಿತು ಎಂದು ತಿಳಿಸಿದ್ದಾರೆ.

8,000 ಬಡ ಬ್ರಾಹ್ಮಣ ಪುರೋಹಿತರಿಗೆ ಉಚಿತ ವಸತಿ, ತಿಂಗಳಿಗೆ 1,000 ರೂ. ಭತ್ಯೆ: ಮಮತಾ ಬ್ಯಾನರ್ಜಿ8,000 ಬಡ ಬ್ರಾಹ್ಮಣ ಪುರೋಹಿತರಿಗೆ ಉಚಿತ ವಸತಿ, ತಿಂಗಳಿಗೆ 1,000 ರೂ. ಭತ್ಯೆ: ಮಮತಾ ಬ್ಯಾನರ್ಜಿ

"ಈ ಹಿಂದೆ ಕೋಲಘಾಟ್ ‌ನಲ್ಲಿ ಅಕಾಡೆಮಿ ಸ್ಥಾಪಿಸಲು ಸನಾತನ ಬ್ರಾಹ್ಮಣ ಸಮುದಾಯಕ್ಕೆ ಭೂಮಿಯನ್ನು ಒದಗಿಸಲಾಗಿತ್ತು. ಈ ಪಂಥದ ಅನೇಕ ಪುರೋಹಿತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅಂಥವರಿಗೆ ಪ್ರತಿ ತಿಂಗಳು 1,000 ರೂಪಾಯಿ ಭತ್ಯೆ ಮತ್ತು ರಾಜ್ಯ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆಗಳನ್ನು ಒದಗಿಸಲು ನಾವು ನಿರ್ಧರಿಸಿದ್ದೇವೆ. " ಎಂದು ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

West Bengal CM Mamata Gives Big Push To Hindi And Hindu, BJP Calls CM Scared

ದಲಿತರ ಸಾಹಿತ್ಯ, ಸಂಸ್ಕೃತಿ ಅಕಾಡೆಮಿ ಸ್ಥಾಪನೆ

ಪಶ್ಚಿಮ ಬಂಗಾಳ ಸರ್ಕಾರವು ದಲಿತ ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಅಕಾಡೆಮಿಯೊಂದನ್ನು ಘೋಷಿಸಿದೆ. ಆದರೆ ಈ ಯೋಜನೆಗಳನ್ನು ಯಾವುದೇ ರಾಜಕೀಯ ನಡೆ ಅಥವಾ ಉದ್ದೇಶವನ್ನು ಇಟ್ಟುಕೊಂಡು ನೋಡಬಾರದು ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಆದರೆ ರಾಜಕೀಯ ತಜ್ಞರು ಮಾತ್ರ ಇದು ಬಂಗಾಳದ "ಉದಾರ ರಾಜಕಾರಣವನ್ನು" "ಧರ್ಮ ಆಧಾರಿತ ರಾಜಕಾರಣ"ವನ್ನಾಗಿ ಪರಿವರ್ತಿಸುವ ಮಾರ್ಗ ಎಂದು ಹೇಳುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸೃಷ್ಟಿಯಾಗಿರುವ ಅಲೆಯಿಂದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಆತಂಕ ಉಂಟಾಗಿದೆ. ಹೀಗಾಗಿಯೇ ಹಿಂದೂಗಳು ಮತ್ತು ದಲಿತ ಮತದಾರರನ್ನು ಸೆಳೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ದೂಷಿಸುತ್ತಿದೆ.

English summary
West Bengal CM Mamata Banarjee Gives Big Push To Hindi And Hindu, BJP Calls CM Scared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X