ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರದ ಬಗ್ಗೆ ಮಮತಾ ಹೇಳಿಕೆಗೆ ಭಾರೀ ಆಕ್ರೋಶ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 12: ನಾಡಿಯಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿಕೊಂಡಿರುವ ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀಜಿತ್ ಮುಖರ್ಜಿ, "ಅತ್ಯಾಚಾರ ಪ್ರಕರಣದ ಬಗ್ಗೆ ಸಿಎಂ ಅವರಿಂದ ಯೋಚಿಸಲಾಗದಷ್ಟು ಆಕ್ರಮಣಕಾರಿ ಮತ್ತು ಸಂವೇದನಾರಹಿತ ಹೇಳಿಕೆ ಬಂದಿರುವುದನ್ನು ನಾನು ನೋಡಿ ಮೂಕನಾಗಿದ್ದೇನೆ," ಎಂದು ಹೇಳಿದ್ದಾರೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಹುಟ್ಟುಹಬ್ಬದ ಪಾರ್ಟಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಬಳಕೆದಾರರು 2012 ರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣದಲ್ಲಿ ಅವರ ಹೇಳಿಕೆಯೊಂದಿಗೆ ಹೋಲಿಸಿದ್ದಾರೆ. ಈ ಹಿಂದೆಯೂ ಮಮತಾ ಬ್ಯಾನರ್ಜಿ ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹೇಳಿಕೊಂಡಿದ್ದಾರೆ.

West Bengal CM Mamata Banerjees rape comment draws widespread ire

ಅಷ್ಟಕ್ಕೂ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಮಮತಾ ಬ್ಯಾನರ್ಜಿ ಅತ್ಯಾಚಾರವನ್ನು ಪ್ರಶ್ನೆ ಮಾಡಿದ್ದಾರೆ. "ಅತ್ಯಾಚಾರದಿಂದ ಅಪ್ರಾಪ್ತ ವಯಸ್ಕಳು ಸಾವನ್ನಪ್ಪಿದ್ದಾಳೆ ಎಂದು ಅವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅದನ್ನು ಅತ್ಯಾಚಾರ ಎಂದು ಕರೆಯುತ್ತೀರಾ?, ಅವಳು ಗರ್ಭಿಣಿಯಾಗಿದ್ದಲಾ ಅಥವಾ ಪ್ರೇಮ ಸಂಬಂಧ ಹೊಂದಿದ್ದರೇ? ಅವರು ವಿಚಾರಿಸಿದ್ದಾರೆಯೇ? ನಾನು ಪೊಲೀಸರನ್ನು ಕೇಳಿದ್ದೇನೆ. ಅವರು ಬಂಧನ ಮಾಡಿದ್ದಾರೆ. ಹುಡುಗಿಗೆ ಆತನೊಂದಿಗೆ ಸಂಬಂಧ ಇತ್ತು ಎಂದು ಪೊಲೀಸರು ಹೇಳಿದ್ದಾರೆ," ಎಂದು ಹೇಳಿಕೆ ನೀಡಿದ್ದಾರೆ.

ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಎದುರಿಸಬೇಕಾಗುತ್ತೆ: ಜಮೀರ್ ಅಹ್ಮದ್ ಖಾನ್ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಎದುರಿಸಬೇಕಾಗುತ್ತೆ: ಜಮೀರ್ ಅಹ್ಮದ್ ಖಾನ್

ಹಾಗೆಯೇ, "ಇದೊಂದು ಪ್ರೇಮ ಸಂಬಂಧ ಮತ್ತು ಕುಟುಂಬಕ್ಕೆ ತಿಳಿದಿದ್ದರಿಂದ ಅದು ದೃಢಪಟ್ಟಿದೆ. ಇಬ್ಬರಿಗೂ ದೈಹಿಕ ಸಂಬಂಧವಿತ್ತು. ನಾನು ಅದನ್ನು ನಿಲ್ಲಿಸಲು ಸಾಧ್ಯವೇ? ಇದು ಯುಪಿ ಅಲ್ಲ, ನಾವು ಇಲ್ಲಿ ಲವ್ ಜಿಹಾದ್ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಯಾವುದೇ ಅವ್ಯವಹಾರಗಳು ಕಂಡುಬಂದರೆ, ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಒಬ್ಬ ಶಂಕಿತನನ್ನು ಈಗಾಗಲೇ ಬಂಧಿಸಲಾಗಿದೆ," ಎಂದು ಕೂಡಾ ಮಮತಾ ಬ್ಯಾನರ್ಜಿ ಹೇಳಿದ್ದರು.

West Bengal CM Mamata Banerjees rape comment draws widespread ire

ಟ್ವಿಟ್ಟರ್‌ನಲ್ಲಿ ಮಮತಾ ವಿರುದ್ಧ ಕಿಡಿ

ಟ್ವಿಟರ್‌ನಲ್ಲಿ ಬಳಕೆದಾರರು ಮಮತಾ ಬ್ಯಾನರ್ಜಿ ಹೇಳಿಕೆಯನ್ನು 2012 ರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ನೀಡಿದ್ದ ಹೇಳಿಕೆಯೊಂದಿಗೆ ಹೋಲಿಸಿದ್ದಾರೆ. "ಮಮತಾ ಬ್ಯಾನರ್ಜಿ ಅವರು 10 ವರ್ಷಗಳ ಸವಾಲನ್ನು ಸ್ವೀಕರಿಸಿದರು. 2012 ರಲ್ಲಿ, ಅವರು ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಸಂತ್ರಸ್ತೆಯನ್ನು ಅವಮಾನಿಸಿದ್ದರು. ಆ ಘಟನೆಯನ್ನು ಕಪೋಲಕಲ್ಪಿತ ಎಂದು ಕರೆದಿದ್ದರು. ಅವರ ಪಕ್ಷದ ಸಂಸದರು ಆಕೆಯ ಲೈಂಗಿಕ ಕಾರ್ಯಕರ್ತೆ ಎಂದು ಕರೆದಿದ್ದರು. ನಂತರ, ಪ್ರಕರಣವು ನಿಜವೆಂದು ಕಂಡುಬಂದಿದೆ ಮತ್ತು ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. 2022 ರಲ್ಲಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತಳ ವಿಚಾರದಲ್ಲಿಯೂ ಅದೇ ನಡೆಯನ್ನು ಮಮತಾ ಬ್ಯಾನರ್ಜಿ ಅನುಸರಿಸುತ್ತಿದ್ದಾರೆ," ಎಂದು ಆರೋಪ ಮಾಡಿದ್ದಾರೆ.

ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಟ್ವೀಟ್ ಮಾಡಿ, "ಅತ್ಯಾಚಾರವು ಅತ್ಯಾಚಾರವಾಗಿದೆ ಮತ್ತು ಅತ್ಯಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ, ನೀವು ಮಹಿಳೆಯಾಗಿದ್ದರೂ, ನೀವು ಕೆಲವು ಅತ್ಯಾಚಾರ ಪ್ರಕರಣಗಳನ್ನು ಮರೆಮಾಡಿದ್ದೀರಿ. ನೀವು ತಿಳಿದಿರಬೇಕು, ಈ ಪೀಳಿಗೆಯ ಮಹಿಳೆಯರು ಇದನ್ನು ಅಷ್ಟಕ್ಕೆ ಬಿಡುವುದಿಲ್ಲ," ಎಂದಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಘಟನೆಯನ್ನು ಕ್ಷುಲ್ಲಕ ಎಂಬಂತೆ ಬಿಂಬಿಸಲು ಮಮತಾ ಬ್ಯಾನರ್ಜಿ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. "ನಾಡಿಯಾದ ಹಂಸಖಾಲಿಯಲ್ಲಿ 14 ವರ್ಷದ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯನ್ನು ಕ್ಷುಲ್ಲಕವಾಗಿಸುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಹೇಳಿಕೆ ಆಘಾತಕಾರಿಯಾಗಿದೆ. ಆರೋಪಿ ಟಿಎಂಸಿ ಕಾರ್ಯಕರ್ತನ ಮಗ ಅದಕ್ಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ," ದೂರಿದ್ದಾರೆ.

English summary
West Bengal CM Mamata Banerjee's rape comment draws widespread ire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X