ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು: ಮಮತಾ

|
Google Oneindia Kannada News

ಕೋಲ್ಕತಾ, ಮೇ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದ ಬಲವಾದ ಕಪಾಳಮೋಕ್ಷ ಮಾಡಬೇಕು ಎಂದು ಬಯಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಬಿಜೆಪಿಗೆ 'ಶ್ರೀರಾಮ' ಚುನಾವಣಾ ಏಜೆಂಟ್ ಇದ್ದಂತೆ: ಮಮತಾ ಟೀಕೆ ಬಿಜೆಪಿಗೆ 'ಶ್ರೀರಾಮ' ಚುನಾವಣಾ ಏಜೆಂಟ್ ಇದ್ದಂತೆ: ಮಮತಾ ಟೀಕೆ

ಪುರುಲಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, 'ನನಗೆ ಹಣ ಮುಖ್ಯವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳಕ್ಕೆ ಬಂದು ನನ್ನ ಪಕ್ಷವನ್ನು ಸುಂಕ ಸಂಗ್ರಹ ಪಕ್ಷ (ಟೋಲ್ ಕಲೆಕ್ಟರ್) ಎಂದು ಕರೆದಿದ್ದರು. ಅವರಿಗೆ ನಾನು ಪ್ರಜಾಪ್ರಭುತ್ವದ ಬಲವಾದ ಕಪಾಳಮೋಕ್ಷ ಮಾಡಲು ಬಯಸಿದ್ದೇನೆ' ಎಂದು ಹೇಳಿದರು.

ಮೋದಿ ದೇಹ ಅಡಿಯಿಂದ ಮುಡಿಯವರೆಗೂ ರಕ್ತಮಯವಾಗಿದೆ: ದೀದಿ ಮೋದಿ ದೇಹ ಅಡಿಯಿಂದ ಮುಡಿಯವರೆಗೂ ರಕ್ತಮಯವಾಗಿದೆ: ದೀದಿ

'ನಾನು ಅವರನ್ನು ದೇಶದ ಪ್ರಧಾನಿ ಎಂದು ಪರಿಗಣಿಸಿಲ್ಲ. ಹೀಗಾಗಿ ಅವರೊಂದಿಗೆ ನಾನು ಸಭೆಯಲ್ಲಿ ಕೂರಲಿಲ್ಲ. ಒಂದೇ ವೇದಿಕೆಯಲ್ಲಿ ಅವರೊಂದಿಗೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಾನು ಮುಂದಿನ ಪ್ರಧಾನಿಯೊಂದಿಗೆ ಮಾತನಾಡುತ್ತೇನೆ. ಚಂಡಮಾರುತದ ಹಾನಿಯನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ಚುನಾವಣೆಗೆ ಮುನ್ನ ಕೇಂದ್ರದ ಸಹಾಯ ನಮಗೆ ಬೇಡ' ಎಂದು ಮಮತಾ ಅವರು "ಫಣಿ" ಚಂಡಮಾರುತದ ಹಾನಿಗೆ ಪರಿಹಾರ ಕಾರ್ಯಾಚರಣೆ ನಡೆಸಲು ಕರೆಮಾಡಿದರೆ ಸ್ವೀಕರಿಸಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

west bengal CM mamata banerjee want to give PM Narendra Modi a tight slap of democracy

ಶಾರದಾ ಮತ್ತು ನಾರದಾ ಹಗರಣಗಳಿಂದ ಪಡೆದ ಹಣದಿಂದ ಪ್ರಧಾನಿಯ ಹುದ್ದೆಯನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಅವರು ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು.

English summary
Lok Sabha elections 2019: West Bengal Chief Minister Mamata Banerjee said that she want to give a tight slap of democracy to Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X