ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತಾ, ಫೆಬ್ರವರಿ 25: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸವಾರಿ ಮಾಡುವ ಮೂಲಕ ಗಮನ ಸೆಳೆದರು. ದಿನೇ ದಿನೇ ಹೆಚ್ಚುತ್ತಿರುವ ತೈಲ ಬೆಲೆಯ ವಿರುದ್ಧ ಪ್ರತಿಭಟನೆಯಾಗಿ ಅವರು ಕೋಲ್ಕತಾದಲ್ಲಿ ಗುರುವಾರ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿ ಸಾಗಿದರು.

ಪೆಟ್ರೋಲ್ ದರ ಏರಿಕೆ ವಿರುದ್ಧದ ಪ್ರತಿಭಟನೆಯ ಫಲಕವನ್ನು ತಮ್ಮ ಕತ್ತಿಗೆ ಹಾಕಿಕೊಂಡಿದ್ದರು. 'ನಿಮ್ಮ ಬಾಯಲ್ಲಿ ಏನಿದೆ? ಪೆಟ್ರೋಲ್ ಬೆಲೆ ಏರಿಕೆ, ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಏರಿಕೆ' ಎಂದು ಅದರಲ್ಲಿ ಬರೆಯಲಾಗಿತ್ತು.

West Bengal CM Mamata Banerjee Rides Electric Scooter To Protest Against Fuel Price Hike

ಟ್ರಂಪ್‌ಗಿಂತ ಅತಿ ಕೆಟ್ಟ ಗತಿ ಮೋದಿಗೆ ಕಾದಿದೆ; ಮಮತಾ ಬ್ಯಾನರ್ಜಿಟ್ರಂಪ್‌ಗಿಂತ ಅತಿ ಕೆಟ್ಟ ಗತಿ ಮೋದಿಗೆ ಕಾದಿದೆ; ಮಮತಾ ಬ್ಯಾನರ್ಜಿ

ಹಜ್ರಾ ಮೋರ್‌ದಿಂದ ರಾಜ್ಯ ಕಾರ್ಯಾಲಯದವರೆಗೆ ಸುಮಾರು ಐದು ಕಿಮೀ ದೂರ ಅವರು ಸ್ಕೂಟರ್‌ನಲ್ಲಿ ಸಾಗುವಾಗ ರಸ್ತೆಯ ಎರಡೂ ಬದಿಯಲ್ಲಿನ ಜನರತ್ತ ಕೈಬೀಸಿದರು. ಕೋಲ್ಕತಾ ಮೇಯರ್ ಫಿರ್ಹಾದ್ ಹಕೀಮ್ ಸ್ಕೂಟಲ್ ಚಲಾಯಿಸಿದರು. ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿ ಮಮತಾ ಬ್ಯಾನರ್ಜಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ್ದಾರೆ.

ತೈಲ ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಳೆದ ವಾರ ವಾಗ್ದಾಳಿ ನಡೆಸಿದ್ದ ಮಮತಾ, ಬಂಗಾಳ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ತೈಲ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡುತ್ತದೆ. ಪ್ರತಿ ದಿನ ಎಲ್‌ಪಿಜಿ ಮತ್ತು ತೈಲ ಬೆಲೆಯನ್ನು ಏರಿಸುತ್ತಲೇ ಇದ್ದಾರೆ. ಇದು ಕಳವಳಕಾರಿ ಸಂಗತಿ' ಎಂದು ಕಿಡಿಕಾರಿದ್ದರು.

English summary
West Bengal Chief Minister Mamata Banerjee on Thursday seen riding pillion on an electric scooter as protest against fuel price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X