ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗು ಎತ್ತಿಕೊಂಡು, 'ಚಾಯ್ ವಾಲಿ'ಯಾದ ಮಮತಾ ದೀದಿ!

|
Google Oneindia Kannada News

ಕೋಲ್ಕತ್ತಾ, ಆ 22: ಕಳೆದ ಲೋಕಸಭಾ ಚುನಾವಣೆಯಲ್ಲಿನ ಅನಿರೀಕ್ಷಿತ ಹಿನ್ನಡೆಯ ನಂತರ, ಸಾರ್ವಜನಿಕ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಖುದ್ದು ಚಾಯ್ ತಯಾರಿಸಿ ಸುದ್ದಿಯಾಗಿದ್ದಾರೆ.

ದಿಘಾ ದತ್ತಾಪುರದ ಗ್ರಾಮಕ್ಕೆ ಭೇಟಿ ನೀಡಿದ್ದ ಮಮತಾ, ಅಲ್ಲಿನ ಜನತೆಯ ಜೊತೆಗೆ ಆತ್ಮೀಯವಾಗಿ ಬೆರೆತು, ಮಗುವೊಂದನ್ನು ಎತ್ತುಕೊಂಡು, ಮುದ್ದಾಡಿ, ಮಗುವಿಗೆ ಚಿಪ್ಸ್ ಪ್ಯಾಕೆಟ್ ಒಂದನ್ನು ನೀಡಿದರು.

'ದೀದಿ ಕೆ ಬೊಲೋ' ಅಭಿಯಾನದಲ್ಲಿ ಟಿಎಂಸಿ ನಾಯಕರಿಗೆ ಶೇಮ್ ಶೇಮ್!'ದೀದಿ ಕೆ ಬೊಲೋ' ಅಭಿಯಾನದಲ್ಲಿ ಟಿಎಂಸಿ ನಾಯಕರಿಗೆ ಶೇಮ್ ಶೇಮ್!

ಇದಾದ ನಂತರ, ಖುದ್ದು ತಾನೇ ಟೀ ತಯಾರಿಸಿ, ಎಲ್ಲರಿಗೂ ಚಹಾ ವಿತರಿಸಿದರು. ಈ ವಿಡಿಯೋವನ್ನು ಮಮತಾ ಬ್ಯಾನರ್ಜಿ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು.

West Bengal CM Mamata Banerjee Prepared Tea And Served In Dattapura Village

"ಜೀವನದಲ್ಲಿ ಕೆಲವೊಮ್ಮೆ ನಾವು ಮಾಡುವ ಸಣ್ಣಸಣ್ಣ ಕೆಲಸಗಳು ಸಂತೋಷವನ್ನು ನೀಡುತ್ತದೆ. ಅದರಲ್ಲಿ, ಉತ್ತಮ ಚಹಾ ತಯಾರಿಸುವುದು ಮತ್ತು ಕುಡಿಯುವುದು ಕೂಡ ಒಂದು" ಎನ್ನುವ ಒಕ್ಕಣೆಯನ್ನು ಹಾಕಿ, ಮಮತಾ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಯವರ 'ಚಾಯ್ ಪೇ ಚರ್ಚಾ' ಅಭಿಯಾನ ಬಿಜೆಪಿಗೆ ಹೆಚ್ಚಿನ ಶಕ್ತಿಯನ್ನು ನೀಡಿತ್ತು. ಇದೇ ವೇಳೆ, ಮಣಿಶಂಕರ್ ಅಯ್ಯರ್, ಮೋದಿಯವರನ್ನು 'ಚಾಯ್ ವಾಲಾ' ಎನ್ನುವ ಮೂಲಕ, ಬಿಜೆಪಿಗೆ ಇನ್ನಷ್ಟು ಮೈಲೇಜ್ ಅನ್ನು ತಂದುಕೊಟ್ಟಿದ್ದರು.

ತೃಣಮೂಲ ಕಾಂಗ್ರೆಸ್ 2020 ರ ವಿಧಾನಸಭೆ ಚುನಾವಣೆಗೆ ಈಗಾಗಲೆ ತಯಾರಿ ಆರಂಭಿಸಿದ್ದು, 'ದೀದಿ ಕೆ ಬೊಲೋ' ಅಭಿಯಾನವನ್ನು ಆರಂಭಿಸಿದೆ. ಜನರ ಸಮಸ್ಯೆಯನ್ನು ಆಲಿಸಿ, ಎಂದಿನಂತೆ ಭರಪೂರ ಆಶ್ವಾಸನೆ ನೀಡುವುದಕ್ಕೆ ಹೊರಟ ಟಿಎಂಸಿ ಮುಖಂಡರಿಗೆ, ಜನರ ಭರಪೂರ ಪ್ರಶ್ನೆಗಳ ಸ್ವಾಗತ ಸಿಕ್ಕಿತ್ತು.

English summary
West Bengal Chief Minister Mamata Banerjee Prepared Tea And Served In Dattapura Village in Digha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X