ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ; ಮದುವೆಯಲ್ಲಿ ಡ್ರಮ್‌ ಬೀಟ್‌ಗೆ ದೀದಿ ಸ್ಟೆಪ್...

|
Google Oneindia Kannada News

ಕೋಲ್ಕತ್ತಾ, ಫೆಬ್ರುವರಿ 02: ಪಶ್ಚಿಮ ಬಂಗಾಳದ ಅಲಿಪುರದೌರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಸಾಮೂಹಿಕ ಮದುವೆ ಸಮಾರಂಭದಲ್ಲಿ ಪ‍ಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದು, ನೃತ್ಯದ ವಿಡಿಯೋ ವೈರಲ್ ಆಗಿದೆ.

ಮದುವೆಯಲ್ಲಿ ಬುಡಕಟ್ಟು ನೃತ್ಯಗಾರರೊಂದಿಗೆ 66 ವರ್ಷದ ದೀದಿ ಸಂತೋಷವಾಗಿ ಡ್ರಮ್ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಅವರು ನೃತ್ಯ ಮಾಡುತ್ತಿದ್ದ ದೃಶ್ಯದ 45 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

 ಸಂತಾಲಿ ನೃತ್ಯಗಾರರೊಂದಿಗೆ ಸ್ಟೆಪ್

ಸಂತಾಲಿ ನೃತ್ಯಗಾರರೊಂದಿಗೆ ಸ್ಟೆಪ್

ಮಂಗಳವಾರ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ಸಿಂಎ ಮಮತಾ ಬ್ಯಾನರ್ಜಿ, ಅಲ್ಲಿ ಬುಡಕಟ್ಟು ನೃತ್ಯ ಮಾಡುತ್ತಿದ್ದ ತಂಡದೊಂದಿಗೆ ಜೊತೆಯಾಗಿದ್ದಾರೆ. ಅವರ ಕೈಹಿಡಿದು ಸಂತೋಷದಿಂದ ಹೆಜ್ಜೆ ಹಾಕಿದ್ದಾರೆ. ಅವರು ನೃತ್ಯ ಮಾಡುತ್ತಿದ್ದುದನ್ನು ನೋಡಿಕೊಂಡು ಅದೇ ರೀತಿ ತಾವೂ ಹೆಜ್ಜೆ ಹಾಕಿದ್ದಾರೆ.

ನಾನು ಬೀದಿ ಹೋರಾಟಗಾರ್ತಿ, ಎಚ್ಚರ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿನಾನು ಬೀದಿ ಹೋರಾಟಗಾರ್ತಿ, ಎಚ್ಚರ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

 ಮಮತಾ ಬ್ಯಾನರ್ಜಿಗೆ ಜನರ ಚಪ್ಪಾಳೆ

ಮಮತಾ ಬ್ಯಾನರ್ಜಿಗೆ ಜನರ ಚಪ್ಪಾಳೆ

ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಹಲವು ನೃತ್ಯ ತಂಡಗಳನ್ನು ಕರೆಸಲಾಗಿತ್ತು. ನೃತ್ಯ ತಂಡದ ಜೊತೆ ಮಮತಾ ಬ್ಯಾನರ್ಜಿ ಹೆಜ್ಜೆ ಹಾಕಿದ್ದನ್ನು ಕಂಡು, ಅಲ್ಲಿ ಸೇರಿದ್ದ ನೂರಾರು ಜನರು ಖುಷಿಯಿಂದ ಚಪ್ಪಾಳೆ ತಟ್ಟಿ ಸಾಥ್ ನೀಡಿದ್ದಾರೆ. ಜನರ ಚಪ್ಪಾಳೆಯಿಂದ ಪ್ರೇರಿತರಾಗಿ ಖುಷಿಯಿಂದ ದೀದಿ ಹೆಜ್ಜೆ ಹಾಕಿದ್ದಾರೆ.

 ಕಳೆದ ವರ್ಷವೂ ಹೆಜ್ಜೆ ಹಾಕಿದ್ದ ಸಿಎಂ

ಕಳೆದ ವರ್ಷವೂ ಹೆಜ್ಜೆ ಹಾಕಿದ್ದ ಸಿಎಂ

ಮಮತಾ ಬ್ಯಾನರ್ಜಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವುದು ಇದೇ ಮೊದಲಲ್ಲ. ಕೋಲ್ಕತ್ತಾದಲ್ಲಿ ಈ ಹಿಂದೆ ನಡೆದಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿಯೂ ಒಮ್ಮೆ ಹೆಜ್ಜೆ ಹಾಕಿದ್ದರು. ಬುಡಕಟ್ಟು ಸಂಗೀತಗಾರ ಬಸಂಗಿ ಹೆಂಬ್ರಾಮ್ ಜೊತೆ ಹೆಜ್ಜೆ ಹಾಕಿದ್ದರು. ಕಳೆದ ವರ್ಷವೂ ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು.

ಮಮತಾ ಸಂಬಂಧಿ ಮುಂದಿನ ಸಿಎಂ ಎಂದು ಹೇಳಿ ಗೊಂದಲ ಸೃಷ್ಟಿಗೆ ಯತ್ನಮಮತಾ ಸಂಬಂಧಿ ಮುಂದಿನ ಸಿಎಂ ಎಂದು ಹೇಳಿ ಗೊಂದಲ ಸೃಷ್ಟಿಗೆ ಯತ್ನ

ಹಳ್ಳಿಯಲ್ಲಿ ಅಡುಗೆ ಮಾಡಿದ್ದ ವಿಡಿಯೋ ವೈರಲ್

ಈ ಹಿಂದೆಯೂ ಮಮತಾ ಬ್ಯಾನರ್ಜಿ ಹಳ್ಳಿಯೊಂದರ ಬುಡಕಟ್ಟು ಮನೆಯೊಂದರಲ್ಲಿ ಅಡುಗೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋವನ್ನು ಹಲವು ಮಂದಿ ಹಂಚಿಕೊಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಾದ ಒಂದು ತಿಂಗಳ ನಂತರ ಇಂದು, ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದೇ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಪ್ರಚಾರ ಕಾರ್ಯವೂ ಜೋರಾಗಿದೆ. ತೃಣಮೂಲ ಕಾಂಗ್ರೆಸ್, ಬಿಜೆಪಿ ನಡುವೆ ಹಣಾಹಣಿ ಇದ್ದು, ಕಾಂಗ್ರೆಸ್ ಎಡಪಕ್ಷಗಳೂ ಒಟ್ಟಾಗಿ ಕಣಕ್ಕಿಳಿಯಲು ಸಜ್ಜಾಗಿವೆ.

English summary
West Bengal CM Mamata Banerjee was seen dancing to the beats of drums during a mass wedding ceremony in Alipurduar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X