ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್‌ ವಿನಾಯಿತಿ, ಏನೆಲ್ಲ ಇರುತ್ತೆ?

|
Google Oneindia Kannada News

ಕೊಲ್ಕತ್ತಾ, ಏಪ್ರಿಲ್ 29: ಮೇ 3ರ ನಂತರ ದೇಶದಲ್ಲಿ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಈಗಾಗಲೇ ಹಲವು ರಾಜ್ಯಗಳು ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಪ್ರಕಟಿಸಿದೆ. ಇನ್ನು ಕೆಲವು ರಾಜ್ಯಗಳು ಲಾಕ್‌ಡೌನ್‌ ಸಡಿಲಿಕೆ ನೀಡಿದೆ.

Recommended Video

ನನಗೆ ಇಲ್ಲಿ ರಾಜಕೀಯ ಮಾಡೋ ಅವಶ್ಯಕತೆ ಇಲ್ಲ | Renukacharya | Oneindia Kannada

ಕರ್ನಾಟಕ, ತಮಿಳುನಾಡು, ಪಂಜಾಬ್‌ ರಾಜ್ಯದ ನಂತರ ಈಗ ಪಶ್ವಿಮ ಬಂಗಾಳದಲ್ಲೂ ಲಾಕ್‌ಡೌನ್‌ ವಿನಾಯಿತಿ ಘೋಷಿಸಿದೆ. ಹೌದು, ರಾಜ್ಯದ ಗ್ರೀನ್‌ ಜೋನ್‌ಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವ ದೀದಿ ಸರ್ಕಾರ, ಕಾರ್ಖಾನೆಗಳಿಗೂ ಹಸಿರು ನಿಶಾನೆ ತೋರಿದೆ.

ಕೊಲ್ಕತ್ತಾದಲ್ಲಿ ಕೊರೊನಾ ರೋಗಿಗಳ ಸಂಬಂಧಿಕರಿಗೆ ಖುಷಿಯ ವಿಚಾರಕೊಲ್ಕತ್ತಾದಲ್ಲಿ ಕೊರೊನಾ ರೋಗಿಗಳ ಸಂಬಂಧಿಕರಿಗೆ ಖುಷಿಯ ವಿಚಾರ

ಬುಧವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ''ಹಸಿರು ಜೋನ್‌ ಪ್ರದೇಶದಲ್ಲಿ ಸಣ್ಣ ಅಂಗಡಿಗಳು, ಕಾರ್ಖಾನೆಗಳು ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ'' ಎಂದಿದ್ದಾರೆ.

West Bengal CM Gave Relaxation For Green Zones

ಹೊಸ ಮಾರ್ಗಸೂಚಿ ಪ್ರಕಾರ, ಮೇ 1 ರಿಂದ ರಾಜ್ಯದ ಹಸಿರು ವಲಯಗಳಲ್ಲಿ ಸ್ಟೇಷನರಿ ಅಂಗಡಿಗಳು, ಬಣ್ಣದ ಅಂಗಡಿಗಳು, ಎಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಮೊಬೈಲ್, ಲಾಂಡ್ರಿ, ಚಹಾ ಮತ್ತು ಪಾನ್ ಅಂಗಡಿಳು ಒಳಗೊಂಡಂತೆ ಏಕ-ಘಟಕ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಟೀ ಅಂಗಡಿಗಳು ತೆರೆದಿದೆ ಎಂಬ ಕಾರಣಕ್ಕೆ ಜನರು ಅಂಗಡಿಗಳ ಬಳಿ ಗುಂಪು ಸೇರುವಂತಿಲ್ಲ ಎಂದು ಮಮತಾ ಸೂಚಿಸಿದ್ದಾರೆ. ಈ ಎಲ್ಲ ಅಂಗಡಿಗಳು ಆರೋಗ್ಯ ಇಲಾಖೆಯ ಪ್ರೋಟೋಕಾಲ್‌ ಪ್ರಕಾರ ಕಾರ್ಯನಿರ್ವಹಿಸಬೇಕಿದೆ ಎಂದು ಸೂಚಿಸಿದ್ದಾರೆ.

ಇನ್ನು ಲಾಕ್‌ಡೌನ್‌ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ಸೂಚನೆ ಬೇಕಾಗಿದೆ. ಎಲ್ಲರೂ ಮನೆಯೊಳಗೆ ಇರಬೇಕು ಎಂದು ನಾನು ಎಲ್ಲರನ್ನು ವಿನಂತಿಸಿಕೊಳ್ಳುತ್ತೇನೆ. ಮೇ ಕೊನೆಯ ವಾರದವರೆಗೂ ನಾವು ಎಚ್ಚರದಿಂದಿರಬೇಕು. ತಜ್ಞರ ತಂಡವೂ ಇದೇ ಹೇಳಿದೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

English summary
Coronavirus lockdown: West Bengal CM Mamata banerjee gave relaxation for green zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X