ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗಾ ಪೂಜೆ ಮುಗಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಕೋವಿಡ್‌ ಕೇಸ್ ಹೆಚ್ಚಳ

|
Google Oneindia Kannada News

ಕೋಲ್ಕತ್ತಾ, ಅಕ್ಟೋಬರ್‌ 22: ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಸಮಾರಂಭಗಳು ಕೊನೆಗೊಳುತ್ತಿದ್ದಂತೆ ಕೊರೊನಾವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಾಣುತ್ತಿದೆ. ದುರ್ಗಾ ಪೂಜೆ ಸಂದರ್ಭದಲ್ಲಿ ಕೊರೊನಾವೈರಸ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಕೇಂದ್ರಗಳು ಮತ್ತೆ ತೆರೆಯಲಾಗಿದೆ. ಕೋವಿಡ್ ಕಾರಣದಿಂದಾಗಿ ಪ್ರತ್ಯೇಕವಾಗಿರಲು ಬಯಸುವ ರೋಗಿಗಳು ಈ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಬಹುದಾಗಿದೆ.

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ರದ್ದು

ಕೋಲ್ಕತ್ತಾದಲ್ಲಿ ಕೊರೊನಾ ಸೋಂಕು ಪ್ರರಕಣಗಳು ಸಾಕಷ್ಟು ಕಡಿಮೆ ಆಗಿತ್ತು. ಆದರೆ ದುರ್ಗಾ ಪೂಜೆಗಳು ಎಲ್ಲವೂ ಅಂತ್ಯವಾದ ಬಳಿಕ ಕೋಲ್ಕತ್ತಾದಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಶುಕ್ರವಾರ ಕೋಲ್ಕತ್ತಾದಲ್ಲೇ 242 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಕಳೆದ ಶುಕ್ರವಾರ ಕೋಲ್ಕತ್ತಾದಲ್ಲಿ 127 ಕೊರೊನಾ ಪ್ರಕರಣಗಳು ದಾಖಲಾಗಿದ್ದವು ಎಂದು ವರದಿಯು ಹೇಳಿದೆ.

West Bengal Cases Double, Officials Blame Covid19 Rule Break During Durga Puja

ಕಳೆದ ವಾರ ದುರ್ಗಾ ಪೂಜೆಯ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡದ ಕಾರಣದಿಂದಾಗಿ ಈಗ ಮತ್ತೆ ಸೋಂಕು ಪ್ರಕರಣಗಳು ಏರಿಕೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ದುರ್ಗಾ ಪೂಜೆಯ ಸಂದರ್ಭದಲ್ಲಿ ಹಲವಾರು ಮಂದಿ ಗುಂಪಾಗಿ ಸೇರುತ್ತಿದ್ದ ಹಿನ್ನೆಲೆ ನಾವು ಆರೋಗ್ಯ ಇಲಾಖೆ ಕಾರ್ಯಕರ್ತರ ರಜೆಯನ್ನು ರದ್ದು ಮಾಡಿದೆವು. ಹಲವಾರು ಮಂದಿ ಮಾಸ್ಕ್‌ ಧರಿಸಿರಲಿಲ್ಲ. ಈಗ ಕೋಲ್ಕತ್ತಾದಲ್ಲಿ ಇನ್ನಷ್ಟು ಸೋಂಕು ಪ್ರಮಾಣ ಅಧಿಕವಾಗುವ ಸಾಧ್ಯತೆ ಇರುವ ಕಾರಣದಿಂದಾಗಿ ನಾವು ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ, 20 ಮಂದಿಗೆ ಗಾಯಪಶ್ಚಿಮ ಬಂಗಾಳದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ, 20 ಮಂದಿಗೆ ಗಾಯ

ಇನ್ನು "ಈ 242 ಹೊಸ ಕೋವಿಡ್‌ ಪ್ರಕರಣಗಳ ಪೈಕಿ 200 ರಷ್ಟು ಸೋಂಕು ಪ್ರಕರಣಗಳು ಲಕ್ಷಣರಹಿತವಾಗಿದೆ. ಇದು ಎಚ್ಚರಿಕೆಯ ಕರೆಗಂಟೆಯೂ ಹೌದು. ಹೀಗೆ ಲಕ್ಷಣರಹಿತರು ತಮಗೆ ತಿಳಿಯದೆಯೇ ಕೊರೊನಾ ಸೋಂಕು ಹರಡಲು ಕಾರಣವಾಗುತ್ತಿರುತ್ತಾರೆ," ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಮಾತ್ರವಲ್ಲದೇ ರಾಜ್ಯದಲ್ಲಿಯೇ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪರಿಸ್ಥಿತಿ ಹೇಗೆ ಸಾಗುತ್ತಿದೆ ಎಂಬುವುದರ ಬಗ್ಗೆ ಸಮಗ್ರ ಚಿತ್ರಣಕ್ಕಾಗಿ ಮುಂದಿನ ವಾರದವರೆಗೆ ಕಾಯಲೇ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ಏಳು ದಿನಗಳಲ್ಲಿ 451 ಪ್ರಕರಣಗಳಿಂದ 833 ಕ್ಕೆ ಏರಿಕೆ ಆಗಿದೆ.

ಪ್ರಕರಣಗಳು ಮತ್ತಷ್ಟು ಅಧಿಕ ಸಾಧ್ಯತೆ

"ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಈ ಪೈಕಿ ಅಧಿಕ ಸೌಮ್ಯ ಪ್ರಕರಣಗಳು ಆಗಿದೆ. ಅಂದರೆ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಆದ್ದರಿಂದ ಜನರಲ್ಲಿ ಅಧಿಕವಾಗಿ ರೋಗನಿರೋಧಕ ಶಕ್ತಿ ಇರಬಹುದು. ಆದರೆ ಈ ನಡುವೆ ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ಹಾಗೂ ಕೋವಿಡ್‌ ಮರಣ ಪ್ರಮಾಣ ಅಧಿಕವಾದರೆ ನಾವು ಮೊದಲ ಹಾಗೂ ಎರಡನೇ ಕೊರೊನಾ ವೈರಸ್‌ ಸೋಂಕಿನ ಅಲೆಯ ಮಟ್ಟಕ್ಕೆ ತಲುಪಬೇಕಾಗುತ್ತದೆ," ಕೋಲ್ಕತ್ತಾದ ಸಿಎಂಆರ್‌ಐ ಆಸ್ಪತ್ರೆಯ ವೈದ್ಯ ರಾಜ ಧರ್‌ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ "ಕೋಲ್ಕತ್ತಾದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಮುಂದಿನ ವಾರದಲ್ಲಿ ಅಧಿಕವಾಗುವ ಸಾಧ್ಯತೆ ಇದೆ," ಎಂದು ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಪ್ರತಿ ವರ್ಷ ಆಚರಣೆ ಮಾಡಲಾಗುವ ದುರ್ಗಾ ಪೂಜೆಯ ಶೋಭಾಯಾತ್ರೆಯನ್ನು ರದ್ದು ಮಾಡಿತ್ತು. ದುರ್ಗಾ ಪೂಜೆಯ ಬಳಿಕ ದೇವಿಯ ಮೂರ್ತಿಯನ್ನು ಕೆರೆಯಲ್ಲಿ ಜಳಕ ಮಾಡಿಸುವ ಪದ್ಧತಿ ಇದೆ. ಇದಕ್ಕೂ ಮುನ್ನ ಊರಿನ ಜನರು ಸೇರಿ ಶೋಭಾಯಾತ್ರೆಯನ್ನು ನಡೆಸುತ್ತಾರೆ. ಇದರಲ್ಲಿ ಸಾವಿರಾರು ಮಂದಿ ಭಾಗಿಯಾಗುತ್ತಾರೆ. ಈ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಶೋಭಾಯಾತ್ರೆಯನ್ನು ಸರ್ಕಾರ ರದ್ದು ಮಾಡಿತ್ತು.

(ಒನ್‌ಇಂಡಿಯಾ ಸುದ್ದಿ)

English summary
West Bengal Cases Double, Officials Blame Covid19 Rule Break During Durga Puja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X