ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ: ಶತ್ರುಘ್ನ ಸಿನ್ಹಾ ವಿರುದ್ಧ ಅಗ್ನಿಮಿತ್ರಾ ಸ್ಪರ್ಧೆ

|
Google Oneindia Kannada News

ಕೋಲ್ಕತಾ, ಮಾರ್ಚ್ 18: ಮಾಜಿ ಕೇಂದ್ರ ಸಚಿವ ಮತ್ತು ಪ್ರಸಿದ್ಧ ನಟ ಶತ್ರುಘ್ನ ಸಿನ್ಹಾ, ಅಸನ್ಸೋಲ್‌ನಿಂದ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಶತ್ರುಘ್ನ ಸಿನ್ಹಾ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹೆಸರಿಸಿದೆ. ಡಿಸೈನರ್ ಕಮ್ ರಾಜಕಾರಣಿ ಅಗ್ನಿಮಿತ್ರಾ ಪಾಲ್ ಅವರನ್ನು ಕಣಕ್ಕಿಳಿಸಿದೆ.

ಇನ್ನು ಮಾಜಿ ಕೇಂದ್ರ ಸಚಿವ ಮತ್ತು ಹೆಸರಾಂತ ಗಾಯಕ ಬಾಬುಲ್ ಸುಪ್ರಿಯೋ ಅವರು ಬ್ಯಾಲಿಗಂಜ್ ವಿಧಾನಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾರೆ.

ಎರಡು ಬಾರಿ ಬಿಜೆಪಿ ಸಂಸದರಾಗಿದ್ದ ಸುಪ್ರಿಯೊ ಅವರು ಕಳೆದ ವರ್ಷ ಕೇಸರಿ ಪಕ್ಷವನ್ನು ತೊರೆದು ಟಿಎಂಸಿ ಸೇರಿದ್ದರು. ನಂತರ ಅಸನ್ಸೋಲ್ ಲೋಕಸಭಾ ಸ್ಥಾನ ತೆರವಾಗಿತ್ತು. ರಾಜ್ಯ ಸಚಿವ ಸುಬ್ರತಾ ಮುಖರ್ಜಿ ಅವರ ನಿಧನದ ನಂತರ ಬ್ಯಾಲಿಗಂಜ್ ವಿಧಾನಸಭಾ ಸ್ಥಾನ ತೆರವಾಗಿದೆ.

West Bengal: BJP fields Agnimitra Paul against Shatrughan Sinha for Asansol bypolls

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ನ ಶೋಚನೀಯ ಸೋಲಿನ ಬಗ್ಗೆ ಶುಕ್ರವಾರ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ಬಿಜೆಪಿ ವಿರುದ್ಧ ಹೋರಾಡಲು ಬಯಸಿರುವ ಎಲ್ಲ ರಾಜಕೀಯ ಪಕ್ಷಗಳೂ ಜತೆಗೂಡಬೇಕು. ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ನಾವು ಕಾಂಗ್ರೆಸ್‌ ಅನ್ನು ಅವಲಂಬಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

ಹಾಲಿ ಶಾಸಕಿ ಅಗ್ನಿಮಿತ್ರಾ
ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಹಾಲಿ ಶಾಸಕಿ ಅಗ್ನಿಮಿತ್ರಾ ಪಾಲ್ ಅವರು ಅಸಾನೋಲ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. 2021ರಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸಯಾನಿ ಘೋಶ್ ವಿರುದ್ಧ ಜಯ ದಾಖಲಿಸಿದ್ದರು. ಇನ್ನು ಬ್ಯಾಲಿಗುಂಜ್ ಉಪ ಚುನಾವಣೆಗೂ ಅಭ್ಯರ್ಥಿಯನ್ನು ಬಿಜೆಪಿ ಹೆಸರಿಸಿದ್ದು, ಕೇಯಾ ಘೋಶ್ ಅವರು ಸ್ಪರ್ಧಿಸಲಿದ್ದಾರೆ.

ಲೋಕಸಭೆ, ವಿಧಾನಸಭೆ ಉಪಚುನಾವಣೆಗೆ ಟಿಎಂಸಿ ಟಿಕೆಟ್ ಹಂಚಿದ ಮಮತಾಲೋಕಸಭೆ, ವಿಧಾನಸಭೆ ಉಪಚುನಾವಣೆಗೆ ಟಿಎಂಸಿ ಟಿಕೆಟ್ ಹಂಚಿದ ಮಮತಾ

ಉಪ ಚುನಾವಣೆ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅಗ್ನಿಮಿತ್ರಾ, ''ಬಾಬುಲ್ ಸುಪ್ರಿಯೋ, ಶತ್ರುಘ್ನಸಿನ್ಹಾ ಇಬ್ಬರಿಗೂ ಯಾವುದೇ ಸ್ವಂತಿಕೆಯಿಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ವೈಯಕ್ತಿಕ ಸಿದ್ಧಾಂತವೂ ಇಲ್ಲ ವ್ಯಕ್ತಿಗಳನ್ನು ಪುರಸ್ಕರಿಸುವುದಿಲ್ಲ, ಕಾಂಗ್ರೆಸ್ ಪಕ್ಷದಲ್ಲಿದ್ದ ಶತ್ರುಘ್ನ ಸಿನ್ಹಾ ನಂತರ ಬಿಜೆಪಿ ಸೇರಿದರು ಈಗ ಟಿಎಂಸಿಯಲ್ಲಿದ್ದಾರೆ, ಮುಂದೆ ಎಎಪಿ ಸೇರಿದರೂ ಅಚ್ಚರಿಪಡಬೇಕಾಗಿಲ್ಲ,'' ಎಂದಿದ್ದಾರೆ.

ಏಪ್ರಿಲ್ 12ರಂದು ಈ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ಏಪ್ರಿಲ್ 16ರಂದು ಫಲಿತಾಂಶ ಹೊರ ಬರಲಿದೆ.

English summary
West Bengal: BJP fields designer turned politician Agnimitra Paul against Shatrughan Sinha for Asansol Lok sabha bypolls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X