ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಾರ್ಯಕರ್ತ, ತಾಯಿ ಮೇಲೆ ಹಲ್ಲೆ ಆರೋಪ: ಟಿಎಂಸಿ ಪ್ರತ್ಯಾರೋಪ

|
Google Oneindia Kannada News

ಕೋಲ್ಕತಾ, ಮಾರ್ಚ್ 1: ಬಿಜೆಪಿ ಕಾರ್ಯಕರ್ತ ಹಾಗೂ ಅವರ 85 ವರ್ಷದ ತಾಯಿಯ ಮೇಲಿನ ಹಲ್ಲೆ ಘಟನೆ ಕುರಿತು ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ವಾಗ್ವಾದ ನಡೆದಿದೆ. ತಮ್ಮ ಕಾರ್ಯಕರ್ತ ಹಾಗೂ ಅವರ ತಾಯಿಯ ಮೇಲೆ ಟಿಎಂಸಿಯ ಗೂಂಡಾಗಳು ಕರುಣೆಯಿಲ್ಲದೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸೀ ಆರೋಪವನ್ನು ಟಿಎಂಸಿ ನಿರಾಕರಿಸಿದೆ.

'ಅವರು ನನ್ನ ತಲೆ ಹಾಗೂ ಕುತ್ತಿಗೆಗೆ ಹೊಡೆದರು. ನನ್ನ ಮುಖಕ್ಕೂ ಗುದ್ದಿದರು. ನನಗೆ ಭಯವಾಗುತ್ತಿದೆ. ಇದರ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದರು. ನನ್ನ ಇಡೀ ದೇಹ ನೋಯುತ್ತಿದೆ' ಎಂದು ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ ಶೋವಾ ಮಜುಂದಾರ್ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಮತದಾರ ಪಾಠ: ಅಬ್ಬಾಸ್ ಸಿದ್ದಿಕಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಮತದಾರ ಪಾಠ: ಅಬ್ಬಾಸ್ ಸಿದ್ದಿಕಿ

ಬಿಜೆಪಿ ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. '24 ಪರಗಣದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ತಾಯಿಯ ಮಾತುಗಳನ್ನು ಆಲಿಸಿ. ಅವರನ್ನು ಟಿಎಂಸಿಯ ಗೂಂಡಾಗಳು ಮನಬಂದಂತೆ ಥಳಿಸಿದ್ದಾರೆ. ಮಮತಾ ದೀದಿ ನೀವು ಈ ವೃದ್ಧ ತಾಯಿಯ ನೋವಿಗೆ ಮತ್ತು ಕಣ್ಣೀರಿಗೆ ದಂಡ ತೆರಬೇಕಾಗುತ್ತದೆ' ಎಂದು ಎಚ್ಚರಿಸಿದೆ.

West Bengal BJP Claims TMC Goons Beaten Its Party Worker, Mother: TMC Denies Allegation

ನಾರ್ತ್ 24 ಪರಗಣ ಜಿಲ್ಲೆಯ ನಿಮ್ತಾ ಪ್ರದೇಶದ ಗೋಪಾಲ್ ಮಜುಂದಾರ್, ತಮ್ಮ ಮನೆಗೆ ಭಾನುವಾರ ನುಗ್ಗಿದ ಮೂರು-ನಾಲ್ಕು ಜನ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

'ನನ್ನ ಮಗ ಬಿಜೆಪಿಗೆ ಕೆಲಸ ಮಾಡುತ್ತಾನೆ. ಹಾಗಾಗಿ ಅವನಿಗೆ ಹೊಡೆದಿದ್ದಾರೆ. ನನ್ನನ್ನೂ ಇಬ್ಬರು ವ್ಯಕ್ತಿಗಳು ದೂಡಿದರು. ನನ್ನ ಮಗನ ತಲೆ ಹಾಗೂ ಕೈಗಳಿಗೆ ಗಾಯವಾಗಿದೆ. ನನ್ನ ಆರೋಗ್ಯವೇ ಸರಿ ಇಲ್ಲ. ನನಗೆ ಸರಿಯಾಗಿ ಮಾತನಾಡಲು, ಕೂರಲು ಆಗುವುದಿಲ್ಲ. ನಾನು ಹಾಸಿಗೆ ಹಿಡಿದಿರುವಾಗ ಅವರು ನನಗೆ ಹೊಡೆದಿದ್ದಾರೆ' ಎಂದು ಗೋಪಾಲ್ ತಾಯಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ: ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಶಾಂತ್ ಕಿಶೋರ್ಪಶ್ಚಿಮ ಬಂಗಾಳ: ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಶಾಂತ್ ಕಿಶೋರ್

ಆದರೆ ಈ ಆರೋಪವನ್ನು ನಿರಾಕರಿಸಿರುವ ಟಿಎಂಸಿ, 'ಇದು ಹತಾಶೆಯಿಂದ ಮಾಡಿರುವ ಆರೋಪ. ಮಹಿಳೆಯ ಮುಖದಲ್ಲಿನ ಊದಿದ ಗುರುತುಗಳು ಆಕೆಯ ಕಾಯಿಲೆಯ ಕಾರಣದಿಂದ ಆಗಿರುವುದು. ತನ್ನ ಕೊಳಕು ರಾಜಕಾರಣಕ್ಕಾಗಿ ಹಾಸಿಗೆ ಹಿಡಿಯ ಹಿರಿಯ ನಾಗರಿಕರನ್ನು ಬಳಸಿಕೊಳ್ಳುವುದನ್ನೂ ಬಿಜೆಪಿ ಬಿಡುವುದಿಲ್ಲ. ವಾಸ್ತವವಾಗಿ ಆಕೆಗೆ ಬಿಜೆಪಿ ಗೂಂಡಾಗಳು ಹಿಂಸೆ ನೀಡಿದ್ದಾರೆ. ಬಳಿಕ ಅದನ್ನು ಟಿಎಂಸಿ ಹೆಗಲಿಗೆ ವರ್ಗಾಯಿಸಿದ್ದಾರೆ. ಆದರೆ ಸತ್ಯವನ್ನು ಹತ್ತಿಕ್ಕಲು ಆಗುವುದಿಲ್ಲ' ಎಂದು ತಿಳಿಸಿದೆ.

English summary
West Bengal Assembly Election 2021: BJP alleged worker and his mother were beaten by TMC goons on Sudnay. TMC claims woman's face was swollen due to disease. ತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X