ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬಾಂಗ್ಲಾ ಎಂದು ಬದಲಾವಣೆ!

By Mahesh
|
Google Oneindia Kannada News

ಕೋಲ್ಕತಾ, ಜುಲೈ 26: ಪಶ್ಚಿಮ ಬಂಗಾಳದ ವಿಧಾನಸಭೆ ಅಧಿವೇಶನದಲ್ಲಿ ಇಂದು(ಜುಲೈ 26) ರಾಜ್ಯದ ಹೆಸರನ್ನು ಪಶ್ಚಿಮ ಬಂಗಾಳದಿಂದ 'ಬಾಂಗ್ಲಾ' ಎಂದು ಬದಲಾಯಿಸಲು ಮಸೂದೆ ಮಂಡನೆ ಮಾಡಲಾಯಿತು. ರಾಜ್ಯದ ಹೆಸರು ಬದಲಾವಣೆಗೆ ಒಪ್ಪಿಗೆ ಕೋರಿ ಗೃಹ ಸಚಿವಾಲಯಕ್ಕೆ ಅಧಿಕೃತ ಮನವಿ ಸಲ್ಲಿಸಲಾಗಿದೆ.

ಈ ಹಿಂದೆ ಕೂಡಾ ಪಶ್ಚಿಮ ಬಂಗಾಳ ಹೆಸರನ್ನು ಬದಲಾಯಿಸಲು ಮಮತಾ ಬ್ಯಾನರ್ಜಿ ಅವರ ಸರ್ಕಾರ ಯತ್ನಿಸಿತ್ತು. ಇಂಗ್ಲೀಷಿನಲ್ಲಿ 'Bengal', ಬೆಂಗಾಲಿಯಲ್ಲಿ 'Bangla' ಹಾಗೂ ಹಿಂದಿಯಲ್ಲಿ ' Bangal' ಎಂದು ಬದಲಾಯಿಸಲು ಮನವಿ ಸಲ್ಲಿಸಲಾಗಿತ್ತು. ಆದರೆ, ಮೂರು ರೀತಿ ಸ್ಪೆಲ್ಲಿಂಗ್ ಇರುವ ಹೆಸರುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯ ಪ್ರತಿಕ್ರಿಯಿಸಿತ್ತು.

West Bengal Assembly passes resolution to change states name to Bangla

ಕಳೆದ ವರ್ಷ ಸೆಪ್ಟೆಂಬರ್ 8 ರಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಎಲ್ಲಾ ಭಾಷೆಗಳಲ್ಲೂ 'ಬಾಂಗ್ಲಾ' (Bangla) ಎಂದು ಬಳಸಲು ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಹೆಸರು ಬದಲಾವಣೆಗೆ ಗೃಹ ಸಚಿವಾಲಯವು ಒಪ್ಪಿಗೆ ಸೂಚಿಸಿದರೆ, ಪಶ್ಚಿಮ ಬಂಗಾಳದ ಹೆಸರು ಬಾಂಗ್ಲಾ ಎಂದು ಬದಲಾಗುತ್ತದೆ.

English summary
The West Bengal Assembly on Thursday passed the bill to change the state's name from West Bengal to 'Bangla'. The resolution would now be sent to the Home Ministry for approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X