ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Today's Chanakya Exit Poll: ಪಶ್ಚಿಮ ಬಂಗಾಳದಲ್ಲಿ ಗೆಲುವು ಯಾರದ್ದು?

|
Google Oneindia Kannada News

ಪಂಚ ರಾಜ್ಯಗಳ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಇಂದು ಹೊರಬಿದ್ದಿದ್ದು ಎಲ್ಲರ ಕಣ್ಣೂ ಪಶ್ಚಿಮ ಬಂಗಾಳದ ಮೇಲಿದೆ.

ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ಫಲಿತಾಂಶದ ಸೀಟು ಹಾಗೂ ಶೇಕಡಾವಾರು ಮತಹಂಚಿಕೆ ವರದಿ ನೀಡಿರುವ ಟುಡೇಸ್ ಚಾಣಕ್ಯ ಪಶ್ಚಿಮ ಬಂಗಾಳ ಚುನಾವಣೆ ವಿಷಯದಲ್ಲಿ ಭಿನ್ನವಾದ ಮಾದರಿ ಸಮೀಕ್ಷೆಯನ್ನು ನೀಡಿದೆ.

ಪಶ್ಚಿಮ ಬಂಗಾಳ ಸಮೀಕ್ಷೆಯಲ್ಲಿ ಕ್ಷೇತ್ರವಾರು ಸಮೀಕ್ಷೆ ಬದಲಿಗೆ ಮತದಾರರಿಗೆ ಒಂದು ನೇರ ಪ್ರಶ್ನೆ ನೀಡಿ ಉತ್ತರ ಪಡೆಯುವ ಮೂಲಕ ಈ ಚುನಾವಣೆಯಲ್ಲಿ ಗೆಲುವು ಯಾರ ಪರವಾಗಿರಲಿದೆ ಎಂಬ ವರದಿ ನೀಡಿದೆ ಟುಡೇಸ್ ಚಾಣಕ್ಯ.

West Bengal Assembly Elections Todays Chanakya Exit polls Results 2021

'ಈ ಬಾರಿ ಸರ್ಕಾರ ಬದಲಾಗುವುದನ್ನು ನೀವು ಬಯಸುತ್ತೀರಾ?' ಎಂಬ ಪ್ರಶ್ನೆಯನ್ನು ಟುಡೇಸ್ ಚಾಣಕ್ಯ ಮತದಾರರಿಗೆ ಕೇಳಿದೆ. ಈ ಪ್ರಶ್ನೆಗೆ 37% ಜನ ಹೌದು ಎಂದು ಉತ್ತರಿಸಿದರೆ 53% ಜನ ಸರ್ಕಾರ ಬದಲಾಗುವುದು ಬೇಡವೆಂದು ಉತ್ತರಿಸಿದ್ದಾರೆ.

ಅಲ್ಲಿ ಟುಡೇಸ್ ಚಾಣಕ್ಯ ಸಮೀಕ್ಷಾ ವರದಿ ಪ್ರಕಾರ ಆಡಿತಾರೂಢ ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಮುಖ್ಯ ಮಂತ್ರಿಯಾಗಿಯೇ ಮುಂದುವರೆಯಲಿದ್ದಾರೆ. ಶತಪ್ರಯತ್ನದ ಬಳಿಕ ಬಿಜೆಪಿ ಶಕ್ತ ವಿಪಕ್ಷವಾಗಿ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಕಾರ್ಯ ನಿರ್ವಹಿಸಲಿದೆ.

ಆದರೆ ಬಿಜೆಪಿಗೆ ಇದು ಬಹುದೊಡ್ಡ ವಿಜಯವಾಗಲಿದೆ, 2016 ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಕೇವಲ 3 ಕ್ಷೇತ್ರಗಳಲ್ಲಿಯಷ್ಟೆ ಗೆಲುವು ಸಾಧಿಸಿತ್ತು. ಆದರೆ ಈ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಟಿಎಂಸಿಯು ಕಳೆದ ಬಾರಿಗಿಂತಲೂ ಸುಮಾರು 60-70 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ.

English summary
Check out West Bengal Assembly Elections Todya's Chanakya Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X