ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP ಎಕ್ಸಿಟ್ ಪೋಲ್: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ABP ಸಿ-ವೋಟರ್ ಸಮೀಕ್ಷೆ ಪ್ರಕಾರ ಮಮತಾ ಬ್ಯಾನರ್ಜಿ ಕೈಗೆ ಮತ್ತೆ ಪಶ್ಚಿಮ ಬಂಗಾಳದ ಅಧಿಕಾರ ಸಿಗಲಿದೆ ಎಂದು ಹೇಳಲಾಗಿದೆ.

ಪಶ್ಚಿಮ ಬಂಘಾಳದಲ್ಲಿ ಒಟ್ಟು 292 ಸ್ಥಾನಗಳಿದ್ದು ಅದರಲ್ಲಿ ಟಿಎಂಸಿ- 152-164, ಬಿಜೆಪಿ 109-121 ಗೆಲ್ಲಬಹುದು, ಕಾಂಗ್ರೆಸ್ 14-16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಬಿಪಿ ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ.

ಪಶ್ಚಿಮ ಬಂಗಾಳದಲ್ಲಿಇದೇ ಮಾರ್ಚ್ 27 ರಿಂದ ಚುನಾವಣೆ ಆರಂಭವಾಗಿದ್ದು, ಏಪ್ರಿಲ್ 29ಕ್ಕೆ ಅಂತಿಮ ಅಂದರೆ ಎಂಟನೇ ಹಂತದ ಚುನಾವಣೆ ಮುಕ್ತಾಯಗೊಂಡಿದೆ.
ಚುನಾವಣಾ ಸಮೀಕ್ಷೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳಿತ್ತು.

West Bengal Assembly Elections ABP C-Voter Exit polls Results 2021

ಈ ಬಾರಿಯ ಚುನಾವಣೆಯಲ್ಲಿ ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಪಶ್ಚಿಮ ಬಂಗಾಳ ಜನರನ್ನು ಕೇಳಿದಾಗ, 43% ಜನರು ತಾವು ತೃಣಮೂಲ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, 42% ಜನರು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತನ್ನ ಅಧಿಕಾರ ಮುಂದುವರೆಸುವುದೆಂದು ನಂಬಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ತೃಣಮೂಲ ಕಾಂಗ್ರೆಸ್‌ಗೆ 294 ಕ್ಷೇತ್ರಗಳ ಪೈಕಿ 150ರಿಂದ 166 ಕ್ಷೇತ್ರಗಳಲ್ಲಿ ಗೆಲುವು ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಬಿಜೆಪಿಗೆ 98 ರಿಂದ 114 ಕ್ಷೇತ್ರಗಳಲ್ಲಿ ಗೆಲುವು ಪಡೆಯಬಹುದು ಎಂದು ಹೇಳಲಾಗಿದೆ. ಕಾಂಗ್ರೆಸ್- ಎಡಪಕ್ಷಗಳ ಮೈತ್ರಿಯು 23-31 ಸೀಟುಗಳನ್ನು ಪಡೆಯುವ ನಿರೀಕ್ಷೆಯಿದ್ದು, ಇತರೆ ಪಕ್ಷಗಳು 3 ರಿಂದ 5 ಕ್ಷೇತ್ರಗಳನ್ನು ಪಡೆಯಬಹುದು ಎನ್ನಲಾಗಿದೆ.

English summary
Check out West Bengal Assembly Elections ABP C-Voter Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X